More

    10ನೇ ತರಗತಿ ಪಾಸಾದವರಿಗೆ ರೈಲ್ವೆಯಲ್ಲಿ 3000 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ; ಪರೀಕ್ಷೆ ಇರಲ್ಲ

    ಬೆಂಗಳೂರು: ಉತ್ತರ ರೈಲ್ವೆ ವಲಯ, ದೇಶದ 19 ರೈಲ್ವೆ ವಲಯಗಳಲ್ಲಿ ಒಂದಾಗಿದ್ದು, ಭಾರತದ ಉತ್ತರಕ್ಕಿರುವ ಕೊನೇ ರೈಲ್ವೆ ವಲಯವೂ ಹೌದು. ನವದೆಹಲಿಯ ಬರೋಡಾ ಹೌಸ್‌ನಲ್ಲಿ ಇದರ ಪ್ರಧಾನ ಕಚೇರಿಯಿದ್ದು, 1959ರಲ್ಲಿ ಸ್ಥಾಪನೆಗೊಂಡಿದೆ. ಇತರ ರೈಲ್ವೆ ವಲಯದಲ್ಲಿ ಈಗಾಗಲೇ ಅಪ್ರೆಂಟಿಸ್‌ಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಇದೀಗ ಉತ್ತರ ರೈಲ್ವೆ ವಲಯವು ಉದ್ಯೋಗಾವಕಾಶ ಕಲ್ಪಿಸಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

    ಒಟ್ಟು ಹುದ್ದೆ
    3093

    ಹುದ್ದೆ ಹೆಸರು
    ಅಪ್ರೆಂಟಿಸ್

    ಹುದ್ದೆ ವಿವರ
    ಲಖನೌ ಡಿವಿಷನ್ 1310
    ಅಂಬಾಲ ಡಿವಿಷನ್ 420
    ದೆಹಲಿ ಡಿವಿಷನ್ 794
    ಫಿರೋಜ್‌ಪುರ್ ಡಿವಿಷನ್ 569

    ವಿದ್ಯಾರ್ಹತೆ
    ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಶೇ.50ರಷ್ಟು ಅಂಕಗಳಿಸಿದ್ದು, ಎನ್‌ಸಿವಿಟಿ/ಎಸ್‌ಸಿವಿಟಿಯಿಂದ ಐಟಿಯ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಲು ಅರ್ಹರು.

    ವಯೋಮಿತಿ
    ಕನಿಷ್ಠ 15 ವರ್ಷ, 2024 ಜನವರಿ 11ಕ್ಕೆ ಗರಿಷ್ಠ 24 ವರ್ಷ ವಯೋಮಿತಿ ಉಳ್ಳವರು ಅರ್ಜಿ ಸಲ್ಲಿಸಬಹುದು.

    ಸ್ಟೈಪೆಂಟ್
    ಅಪ್ರೆಂಟಿಸ್ ಕಾಯ್ದೆ ಅನುಸಾರ ಸ್ಟೈಪೆಂಡ್ ನೀಡಲಾಗುವುದು.

    ಆಯ್ಕೆ ಹೇಗೆ?
    ವಿದ್ಯಾರ್ಹತೆ ಆಧಾರದ ಮೇಲೆ ಮೆರಿಟ್ ಲಿಸ್ಟ್ ಬಿಡುಗಡೆಗೊಳ್ಳಲಿದ್ದು, ದಾಖಲೆ ಪರಿಶೀಲನೆ ಮೂಲಕ ಅಭ್ಯರ್ಥಿಗಳು ಆಯ್ಕೆಗೊಳ್ಳಲಿದ್ದಾರೆ.

    ಅರ್ಜಿ ಶುಲ್ಕ
    ಸಾಮಾನ್ಯ/ಒಬಿಸಿ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 100ರೂ. ಪಾವತಿಸಬೇಕಿದ್ದು, ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳು/ಮಹಿಳೆಯರಿಗೆ ಶುಲ್ಕ ಪಾವತಿಯಿಂದ ವಿನಾಯಿತಿಯಿದೆ.

    ಆನ್‌ಲೈನ್ ಅರ್ಜಿಸಲ್ಲಿಸಲು ಕೊನೇ ದಿನ
    11.01.2024

    ಹೆಚ್ಚಿನ ಮಾಹಿತಿ
    www.rrcnr.org

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts