More

    ಇಡೀ ವಿಶ್ವದ ಕೋವಿಡ್​-19 ಲಸಿಕೆ ಅಗತ್ಯ ಪೂರೈಸಲು ಭಾರತೀಯ ಔಷಧೀಯ ಕಂಪನಿಗಳು ಸಮರ್ಥ

    ನವದೆಹಲಿ: ಇಡೀ ವಿಶ್ವಕ್ಕೆ ಅಗತ್ಯವಾಗುವಷ್ಟು ಕೋವಿಡ್​-19 ಲಸಿಕೆಗಳನ್ನು ಉತ್ಪಾದಿಸಿ, ಪೂರೈಕೆ ಮಾಡುವ ಸಾಮರ್ಥ್ಯ ಭಾರತೀಯ ಔಷಧೀಯ ಕಂಪನಿಗಳಿಗೆ ಇದೆ ಎಂದು ಮೈಕ್ರೋಸಾಫ್ಟ್​ನ ಸಹ ಸಂಸ್ಥಾಪಕ ಬಿಲ್​ ಗೇಟ್ಸ್​ ಹೇಳಿದ್ದಾರೆ.

    ಭಾರತದಲ್ಲಿ ಹಲವು ಮುಖ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರೊನಾ ವೈರಾಣುಗೆ ಲಸಿಕೆ ಕಂಡುಹಿಡಿಯುವುದು ಸೇರಿ ಇತರೆ ಕಾಯಿಲೆಗಳಿಗೆ ಪರಿಣಾಮಕಾರಿ ಔಷಧವನ್ನು ಉತ್ಪಾದಿಸಿ, ಪೂರೈಕೆ ಮಾಡಲು ಭಾರತದ ಔಷಧೀಯ ಕೈಗಾರಿಕೆಗಳು ಸದಾ ಶ್ರಮಿಸಿ, ಸಹಕರಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಯುಎಇಯಲ್ಲಿ ಐಪಿಎಲ್​ ಆಯೋಜನೆಗೆ ಬಿಸಿಸಿಐ ಪ್ಲ್ಯಾನ್​ ಹೇಗಿದೆ ಗೊತ್ತಾ?

    ಕೋವಿಡ್​-19 ಇಂಡಿಯಾಸ್​ ವಾರ್​ ಅಗೇನ್​ಸ್ಟ್​ ದ ವೈರಸ್​ ಎಂಬ ಡಿಸ್ಕವರಿ ಪ್ಲಸ್​ ಚಾನೆಲ್​ನ ಕಾರ್ಯಕ್ರಮಕ್ಕಾಗಿ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಭಾರತದ ಗಾತ್ರ ಮತ್ತು ನಗರ ಪ್ರದೇಶಗಳಲ್ಲಿನ ಜನ ಸಾಂದ್ರತೆಯಿಂದಾಗಿ ಕರೊನಾ ಸೋಂಕು ನಿಯಂತ್ರಿಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದರು.

    ಬೇರಾವುದೇ ರಾಷ್ಟ್ರಕ್ಕಿಂತಲೂ ಹೆಚ್ಚಿನ ಪ್ರಮಾಣದ ಲಸಿಕೆಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಅವುಗಳಲ್ಲಿ ಸೆರಂ ಇನ್​ಸ್ಟಿಟ್ಯೂಟ್​ ಬಹುದೊಡ್ಡ ಸಂಸ್ಥೆಯಾಗಿದೆ. ಬಯೋ ಇ, ಭಾರತ್​ ಬಯೋಟೆಕ್​ ಸೇರಿ ಇನ್ನೂ ಹಲವು ಕಂಪನಿಗಳಿವೆ. ಕೋವಿಡ್​-19 ಲಸಿಕೆ ಸಂಶೋಧನೆಯಲ್ಲಿ ಭಾರತೀಯ ಔಷಧೀಯ ಕಂಪನಿಗಳು ಸಾಕಷ್ಟು ಶ್ರಮಿಸುತ್ತಿವೆ. ಇದಕ್ಕಾಗಿ ಅವು ಇತರೆ ಕಾಯಿಲೆಗಳಿಗೆ ರೂಪಿಸಿರುವ ಔಷಧಗಳ ಜ್ಞಾನ ಮತ್ತು ಅನುಭವವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿವೆ ಎಂದು ತಿಳಿಸಿದರು.

    ಅಕ್ರಮವಾಗಿ ವಾಸವಾಗಿದ್ದ ದಲಿತ ದಂಪತಿ ಮೇಲೆ ಪೊಲೀಸ್‌ ದೌರ್ಜನ್ಯ- ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts