More

    ಭಾರತ ಮೂಲದ ವಿಜ್ಞಾನಿಗೆ ಮಿಲೇನಿಯಮ್ ಟೆಕ್ನಾಲಜಿ ಬಹುಮಾನ

    ಲಂಡನ್ : ಕೇಂಬ್ರಿಡ್ಜ್ ಯೂನಿವರ್ಸಿಟಿಯ ರಸಾಯನಶಾಸ್ತ್ರಜ್ಞರಾದ ಶಂಕರ್ ಬಾಲಸುಬ್ರಮಣಿಯನ್ ಮತ್ತು ಡೇವಿಡ್ ಕ್ಲೆನರ್ಮನ್ ಅವರನ್ನು ‘2020 ಮಿಲೇನಿಯಮ್ ಟೆಕ್ನಾಲಜಿ ಪ್ರೈಜ್​​’ನ ವಿಜೇತರನ್ನಾಗಿ ಘೋಷಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಈ ಪ್ರತಿಷ್ಠಿತ ಜಾಗತಿಕ ಬಹುಮಾನವನ್ನು ಈ ವಿಜ್ಞಾನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕ್ರಾಂತಿಕಾರಿ ಡಿಎನ್​ಎ ಸೀಖ್ವೆನ್ಸಿಂಗ್ ಟೆಕ್ನೀಕ್​ ‘ಎನ್​​ಜಿಎಸ್​’ಗೆ ನೀಡಲಾಗಿದೆ. ಕರೊನಾ ವೈರಸ್​ನಂಥ ಮಾರಕ ರೋಗಗಳನ್ನುಂಟು ಮಾಡುವ ಜೀವಿಗಳ ಪತ್ತೆ ಮತ್ತು ತಡೆಯಲ್ಲಿ ಈ ತಂತ್ರಜ್ಞಾನ ಬಹೂಪಯೋಗಿಯಾಗಿದೆ ಎನ್ನಲಾಗಿದೆ.

    ಈ ಬಹುಮಾನವನ್ನು ಟೆಕ್ನಾಲಜಿ ಅಕಾಡೆಮಿ ಫಿನ್​ಲ್ಯಾಂಡ್​ (ಟಿಎಎಫ್​) 2004 ರಿಂದ 2 ವರ್ಷಕ್ಕೊಮ್ಮೆ ಸಮಾಜದ ಒಳಿತಿಗೆ ಕೊಡುಗೆ ನೀಡುವ ಕ್ರಾಂತಿಕಾರಿ ಅನ್ವೇಷಣೆಗಳಿಗೆ ನೀಡುತ್ತಾ ಬಂದಿದ್ದು, 1 ಮಿಲಿಯನ್ ಯೂರೋಗಳ ಮೌಲ್ಯ ಹೊಂದಿದೆ. ಕರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ತಡವಾಗಿ ಘೋಷಿಸಲ್ಪಟ್ಟ ಬಹುಮಾನವನ್ನು ನಿನ್ನೆ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಫಿನ್​ಲ್ಯಾಂಡ್​ ರಿಪಬ್ಲಿಕ್​ನ ಅಧ್ಯಕ್ಷ ಸೌಲಿ ನೀನಿಸ್ಟೊ ಅವರು ಪ್ರದಾನಿಸಿದ್ದಾರೆ.

    ಇದನ್ನೂ ಓದಿ: ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಕಾಳಿ ನದಿ ನೀರಲ್ಲಿ ಕೊಚ್ಚಿಹೋಗಿದ್ದ ವೃದ್ಧ 3 ದಿನ ಹೋರಾಡಿ ಸಾವನ್ನೇ ಗೆದ್ದ!

    ಭಾರತ ಮೂಲದ ಬ್ರಿಟಿಷ್ ಆದ ಮೆಡಿಸಿನಲ್ ಖೆಮಿಸ್ಟ್ರಿ ಪ್ರೊಫೆಸರ್​ ಬಾಲಸುಬ್ರಮಣಿಯನ್ ಮತ್ತು ಬ್ರಿಟಿಷ್​ ಬಯೋಫಿಸಿಕಲ್ ಖೆಮಿಸ್ಟ್​ ಆದ ಕ್ಲೆನರ್​ಮನ್​ ಅವರು ಸೊಲೆಕ್ಸಾ-ಇಲ್ಯುಮಿನ ನೆಕ್ಸ್ಟ್​ ಜನರೇಷನ್ ಡಿಎನ್​ಎ ಸೀಖ್ವೆನ್ಸಿಂಗ್ (ಎನ್​ಜಿಎಸ್​)ಅನ್ನು ಅನ್ವೇಷಿಸಿದ್ದಾರೆ. ಈ ತಂತ್ರಜ್ಞಾನವು ವೇಗವಾದ, ನಿಖರವಾದ, ಕಡಿಮೆ-ವೆಚ್ಚದ ಮತ್ತು ದೊಡ್ಡ-ಪ್ರಮಾಣದ ಜೀನೋಮ್ ಸೀಖ್ವೆನ್ಸಿಂಗ್​ ಮಾಡಲು ಅನುವು ಮಾಡಿಕೊಡುತ್ತದೆ. ಇದನ್ನು ಕರೊನಾ ವೈರಸ್​​ನ ರೂಪಾಂತರಗಳನ್ನು ಪತ್ತೆ ಹಚ್ಚುವಲ್ಲಿ ಬಳಸಲಾಗುತ್ತಿದೆ ಎನ್ನಲಾಗಿದೆ.

    ಜೀವಿಗಳ ಸಂಪೂರ್ಣ ಡಿಎನ್‌ಎ ಅನುಕ್ರಮವನ್ನು ಅತಿ ವೇಗದಲ್ಲಿ ಓದಲು ಅವಕಾಶ ಮಾಡಿಕೊಡುವ ಈ ಪ್ರಕ್ರಿಯೆಯು ಕರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕವಾಗಿ ಹೊರಹೊಮ್ಮಿದೆ. ಸದರಿ ತಂತ್ರಜ್ಞಾನವು ಕರೋನವೈರಸ್​ನ ಸೀಖ್ವೆಂಸ್​ಅನ್ನು ಕಂಡುಹಿಡಿಯಲು ಸಹಾಯ ಮಾಡಿ, ಲಸಿಕೆಗಳ ರಚನೆಗೆ ಅನುವು ಮಾಡಿಕೊಟ್ಟಿದೆ ಮತ್ತು ವೈರಸ್​​ನ ಹೊಸ ರೂಪಾಂತರಗಳನ್ನು ಗುರುತಿಸಲು ಸಹಾಯ ಮಾಡುತ್ತಿದೆ ಎಂದು ಟಿಎಎಫ್​​ನ ಪ್ರೊಫೆಸರ್ ಮಾರ್ಜಾ ಮಾಕರೋವ್ ವಿವರಿಸಿದ್ದಾರೆ. (ಏಜೆನ್ಸೀಸ್)

    ಕೋವಿಡ್​ ಡ್ಯೂಟಿಯಲ್ಲಿದ್ದ ಶಿಕ್ಷಕರ ಸಾವು : ಅವಲಂಬಿತರಿಗೆ ಉದ್ಯೋಗ, ಇತರ ಸವಲತ್ತು

    ‘ರಾಧೆ ಪೈರೆಸಿಯಲ್ಲಿ ತೊಡಗಬೇಡಿ, ತೊಂದರೆಗೆ ಸಿಲುಕುತ್ತೀರಿ’ ಎಂದ ಸಲ್ಮಾನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts