More

    ಭಾರತ ಮೂಲದ ದಂಪತಿಯ ದುರಂತ ಅಂತ್ಯ: ಒಬ್ಬರು ಅಪಾರ್ಟ್​ಮೆಂಟ್​, ಮತ್ತೊಬ್ಬರು ನದಿಯಲ್ಲಿ ಶವವಾಗಿ ಪತ್ತೆ

    ನ್ಯೂಯಾರ್ಕ್​​: ಭಾರತೀಯ ಮೂಲದ ವ್ಯಕ್ತಿ ಅಮೆರಿಕದ ಹಡ್ಸನ್​ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲೂ, ಆತನ 5 ತಿಂಗಳ ಗರ್ಭಿಣಿ ಪತ್ನಿ ಅಪಾರ್ಟ್​ಮೆಂಟ್​ ಒಂದರಲ್ಲಿ ಕೊಲೆಯಾದ ರೀತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ಯುಎಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ಜರ್ಸಿ ಸಿಟಿಯಲ್ಲಿ ಗರಿಮಾ ಕೊಠಾರಿ ಹಾಗೂ ಮೋಹನ್​ ಮಾಲ್​ ವಾಸವಿದ್ದರು. 5 ತಿಂಗಳ ಗರ್ಭಿಣಿಯಾಗಿದ್ದ ಗರಿಮಾ ಏಪ್ರಿಲ್​ 26ರಂದು ಜರ್ಸಿ ಸಿಟಿಯ ಅಪಾರ್ಟ್​ಮೆಂಟ್​ನಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ದೇಹದ ಮೇಲ್ಭಾಗದಲ್ಲಿ ಗಾಯಗಳಾಗಿವೆ ಎಂದು ಜರ್ಸಿ ಸಿಟಿ ಪೊಲೀಸ್​ ಅಧಿಕಾರಿಗಳು ಹಾಗೂ ಹಡ್ಸನ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

    ಶವಪರೀಕ್ಷೆ ನಡೆಸಿದ ಬಳಿಕ ಮತ್ತಷ್ಟು ಸ್ಪೋಟಕ ಮಾಹಿತಿಗಳು ಹೊರಬಿದ್ದಿದ್ದು, ಗರಿಮಾ ಅವರದ್ದು ಕೊಲೆ ಎಂದು ಹೇಳಲಾಗಿದೆ. ದೇಹದ ಮೇಲ್ಭಾಗದಲ್ಲಿ ಅನೇಕ ಗಾಯದ ಗುರುತುಗಳಿವೆ. ಹೆಚ್ಚುವರಿಯಾಗಿ ಗರಿಮಾ 5 ತಿಂಗಳ ಗರ್ಭಿಣಿಯಾಗಿದ್ದರು ಎಂದು ಶವಪರೀಕ್ಷೆ ನಡೆಸಿದ ವೈದ್ಯರು ಖಚಿತಪಡಿಸಿದ್ದಾರೆ.

    ಇದನ್ನೂ ಓದಿ: ಬೆಂಗಳೂರಿನಿಂದ ರಾಯಚೂರಿಗೆ ಹೋಗುತ್ತಿದ್ದ ಕಾರು ಪಲ್ಟಿ; ಇಬ್ಬರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ

    ಗರಿಮಾ ಪತಿ, ಮೋಹನ್​ ಮಾಲ್​(37) ಅದೇ ದಿನ ಜರ್ಸಿ ನಗರದ ಹಡ್ಸನ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಾಲ್​​, ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದು, ಸಾವಿಗೆ ನಿಖರವಾದ ಕಾರಣವಿನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಸ್ಥಳೀಯ ವೈದ್ಯರು ತಿಳಿಸಲಿದ್ದಾರೆ.

    ಸದ್ಯ ಈ ಪ್ರಕರಣವನ್ನು ಕೊಲೆ ಮತ್ತು ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ. ಆದರೆ, ಅಂತಿಮ ನಿರ್ಧಾರ ಇನ್ನು ಬಾಕಿ ಇದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಜರ್ಸಿ ಸಿಟಿ ಪೊಲೀಸ್​ ಇಲಾಖೆ ನೆರವಿನಿಂದ ಹಡ್ಸನ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿಯ ನರಹತ್ಯೆ ಘಟಕವು ತನಿಖೆಯನ್ನು ನಡೆಸುತ್ತಿದೆ.

    ಮೃತೆ ಗರಿಮಾ ಓರ್ವ ಪ್ರತಿಭಾನ್ವಿತಾ ಶೆಫ್ ಆಗಿದ್ದರು. ಮೋಹನ್​ ಮಾಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೆಯ ವಿದ್ಯಾರ್ಥಿಯಾಗಿದ್ದು, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಆಗಮಿಸಿದ್ದರು.​

    ಜರ್ಸಿ ಸಿಟಿಯಲ್ಲಿರುವ ಬೃಹತ್​ ಅಪಾರ್ಟ್​ಮೆಂಟ್​ನ ಕೆಲವೇ ದೂರದಲ್ಲಿ ಈ ಜೋಡಿ ನುಕ್ಕಡ್ ಹೆಸರಿನಲ್ಲಿ ಭಾರತೀಯ ರೆಸ್ಟೋರೆಂಟ್​ ಒಂದನ್ನು ತೆರೆದಿದ್ದರು. ಒಳ್ಳೆಯ ಜೋಡಿಯಾಗಿದ್ದರು ಎಂದು ನುಕ್ಕಡ್​ ಉದ್ಯೋಗಿಯೊಬ್ಬರು ತನಿಖಾ ವೇಳೆ ಹೇಳಿದ್ದಾರೆ.

    ಇದನ್ನೂ ಓದಿ: ದುಡಿದ ಹಣವನ್ನೆಲ್ಲ ದೇವಸ್ಥಾನಕ್ಕೆ ನೀಡುತ್ತಿದ್ದ ಈ ವ್ಯಕ್ತಿ ನೆರೆಮನೆ ದಂಪತಿಯ ಕೊಲೆ ಮಾಡುವಷ್ಟು ಕೆಟ್ಟವನಾಗಿದ್ದೇಕೆ?

    ಮಾಲ್​, ತುಂಬಾ ಬುದ್ಧಿವಂತ ಹಾಗೂ ಕೇರಿಂಗ್ ವ್ಯಕ್ತಿಯಾಗಿದ್ದರು. ಗರಿಮಾ ಪ್ರತಿಭಾನ್ವಿತ ಶೆಫ್​ ಹಾಗೂ ತುಂಬಾ ಸ್ನೇಹ ಸ್ವಭಾವದವಳಾಗಿದ್ದು, ತನ್ನ ವೃತ್ತಿಯ ಮೇಲೆ ಸಮರ್ಪಣಾ ಮನೋಭಾವವಿತ್ತು ಎಂದು ಇಬ್ಬರ ಕುಟುಂಬದ ಸದಸ್ಯರು ತನಿಖಾ ವೇಳೆ ತಿಳಿಸಿದ್ದಾರೆಂದು ವರದಿಯಾಗಿದೆ. (ಏಜೆನ್ಸೀಸ್​)​

    VIDEO| ಮರಿಗಳೊಂದಿಗೆ ರಸ್ತೆ ದಾಟುವುದನ್ನು ನೋಡಿಯೂ ಬಂದ ಬೈಕ್ ಸವಾರರ ವಿರುದ್ಧ ಕೆರಳಿದ ಆನೆ​: ಮೈನವಿರೇಳಿಸೋ ವಿಡಿಯೋ ಇದು!

    VIDEO| ಮನೆಗೆ ಇನ್ನೇನು ನುಗ್ಗಿಬಿಡ್ತು ಅಂದುಕೊಂಡಿದ್ದ ಆನೆ ಮುಂದೆ ಎಲ್ಲಿಗೆ ನಡೆಯಿತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts