More

    ಟ್ರಂಪ್​ ಸರ್ಕಾರದ ನಿರ್ಧಾರದಿಂದ ಭಾರತದ ಐಟಿ ಕಂಪನಿಗಳಿಗೆ ಹೊಡೆತ: ಹೆಚ್ಚಲಿದೆ ನಿರುದ್ಯೋಗ

    ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸರ್ಕಾರವು ವಲಸೆ ಮತ್ತು ವಲಸೆರಹಿತ ಉದ್ಯೋಗಿಗಳ 60 ದಿನಗಳವರೆಗಿನ ವೀಸಾ ರದ್ದತಿಯನ್ನು ಈ ವರ್ಷದ ಕೊನೆಯವರೆಗೂ ವಿಸ್ತರಿಸಿರುವುದು ಭಾರತೀಯ ಐಟಿ ಕಂಪನಿಗಳಿಗೆ ಹೊಡೆತ ಬೀಳಲಿದ್ದು, ನಿರುದ್ಯೋಗ ಹೆಚ್ಚಾಗುವ ಆತಂಕ ಎದುರಾಗಿದೆ.

    ಹೆಚ್ಚು ಅಪೇಕ್ಷಿಸುವ ಎಚ್​-1ಬಿ ಹಾಗೂ ಎಚ್​-2ಬಿ ವೀಸಾ ಸಹ ಅಮಾನತ್ತಿನಲ್ಲಿ ಇಡಲಾಗಿದ್ದು, ಎಚ್​-4, ಜೆ ಮತ್ತು ಎಲ್ ಸೇರಿದಂತೆ ಇನ್ನಿತರ ವರ್ಗಗಳ​ ವೀಸಾಗಳನ್ನು ಸಹ ವರ್ಷದ ಕೊನೆಯವರೆಗೂ ಟ್ರಂಪ್​ ಸರ್ಕಾರ ರದ್ದು ಮಾಡಿದೆ. ಇದನ್ನೂ ಓದಿ: ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗಬಾರದೆಂದರೆ ಸಂಪೂರ್ಣ ಲಾಕ್​ಡೌನ್​ ಮಾಡಿ: ಎಚ್.ಡಿ. ಕುಮಾರಸ್ವಾಮಿ

    ಮಹಾಮಾರಿ ಕರೊನಾ ವೈರಸ್​ನಿಂದಾಗಿ ತಮ್ಮ ತಪ್ಪಿಲ್ಲದಿದ್ದರೂ ಅನೇಕರು ಕೆಲಸ ಕಳೆದುಕೊಂಡು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ವಿದೇಶಿಗರಿಗೆ ಉದ್ಯೋಗ ನೀಡುವ ಮೂಲಕ ನಮ್ಮವರನ್ನು ಬದಿಗೊತ್ತಲು ಸಾಧ್ಯವಿಲ್ಲ. ಅನೇಕ ಅಮರಿಕನ್ನರು ಕೆಲಸವಿಲ್ಲದೇ ಇರುವುದರಿಂದ ಕೆಲವು ನಿರೀಕ್ಷೆಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಕೆಲಸಗಾರರಿಗೆ ಉದ್ಯೋಗ ನೀಡಲು ನಾವು ಅನುಮತಿ ನೀಡುವುದಿಲ್ಲ ಎಂದು ವೈಟ್​​ಹೌಸ್​ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

    ವಿಶೇಷವಾಗಿ ಎಚ್​-1ಬಿ ವೀಸಾ ಮೇಲಿನ ರದ್ದತಿಯು ಭಾರತೀಯ ಐಟಿ ಕಂಪನಿಗಳ ಮೇಲೆ ವಿದ್ಯುಕ್ತ ಪರಿಣಾಮ ಬೀರಲಿದ್ದು, ಉದ್ಯೋಗ ನಷ್ಟ ಭೀತಿ ಎದುರಾಗಿದೆ. ಎಚ್​-1ಬಿ ವೀಸಾದ ಸಿಂಹಪಾಲು ಭಾರತೀಯರದ್ದಾಗಿತ್ತು.

    ಅಧಿಕೃತ ಮಾಹಿತಿ ಪ್ರಕಾರ ಕಳೆದ ಏಪ್ರಿಲ್​ 1 ರಂದು ಯುಸ್ ಪೌರತ್ವ ಮತ್ತು ವಲಸೆ ಸೇವೆಗಳು (ಯುಎಸ್​ಸಿಐಎಸ್​)​ ಸುಮಾರು 2.5 ಲಕ್ಷ ಎಚ್​-1ಬಿ ವೀಸಾ ಅರ್ಜಿಗಳನ್ನು ಸ್ವೀಕರಿಸಿತ್ತು. ಇದರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬರೋಬ್ಬರಿ ಶೇ 67 ರಷ್ಟು ಅಂದರೆ 1.84 ಲಕ್ಷ ಭಾರತೀಯರು ಮಾರ್ಚ್ 2021ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷಕ್ಕೆ ಎಚ್​-1ಬಿ ವೀಸಾಗೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಸಚಿವ ಸುಧಾಕರ್ ತಂದೆಗೆ ಕರೊನಾ ಸೋಂಕು ಬೆನ್ನಲ್ಲೇ ಪತ್ನಿ, ಮಗಳಿಗೂ ಮಹಾಮಾರಿ ಕಂಟಕ

    ಪ್ರತಿವರ್ಷ ಯುಎಸ್​ ಸರ್ಕಾರ 85 ಸಾವಿರ ಎಚ್​-1ಬಿ ವೀಸಾಗಳನ್ನು ಹೊಂದುತ್ತದೆ. ಇದರಲ್ಲಿ 65 ಸಾವಿರ ಹೆಚ್ಚು ನುರಿತ ವಿದೇಶಿ ಉದ್ಯೋಗಿಗಳು ಹಾಗೂ ಉಳಿದ 20 ಸಾವಿರ ವೀಸಾವನ್ನು ಅಮೇರಿಕನ್ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣ ಅಥವಾ ಸ್ನಾತಕೋತ್ತರ ಪದವಿ ಪಡೆದಿದ ಹೆಚ್ಚು ನುರಿತ ವಿದೇಶಿಗರಿಗೆ ನೀಡುತ್ತಿತ್ತು. ಆದರೆ, ಈಗ ಈ ವರ್ಷದ ಅಂತ್ಯದವರೆಗೂ ಎಚ್​-1ಬಿ ಸೇರಿದಂತೆ ವಿವಿಧ ವೀಸಾ ಮೇಲಿನ ರದ್ದತಿಯನ್ನು ವಿಸ್ತರಿಸಿರುವುದರಿಂದ ನಿರುದ್ಯೋಗದ ಸಮಸ್ಯೆ ಕಾಡಲಿದೆ. (ಏಜೆನ್ಸೀಸ್​)

    VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್​ಕೇಸ್​ನಲ್ಲಿ ಹಣವಿದೆ ಅಂದುಕೊಂಡ ಯುವತಿಯರಿಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts