More

    ಪ್ರತ್ಯೇಕತಾವಾದಿ ಬೆಂಬಲಿಗರಿಗೆ ಪ್ರಶಸ್ತಿ ನೀಡಿತಾ ಪುಲಿಟ್ಜರ್​; ಸಮಿತಿಗೆ ನೂರಾರು ಗಣ್ಯರಿಂದ ಪತ್ರ

    ನವದೆಹಲಿ: ಜಮ್ಮು ಕಾಶ್ಮೀರದ ಮೂವರು ಛಾಯಾಗ್ರಾಹಕರಿಗೆ ಈ ವರ್ಷದ ಪ್ರತಿಷ್ಟಿತ ಪುಲಿಟ್ಜರ್​ ಪ್ರಶಸ್ತಿ ದೊರೆತಿದೆ. ಆದರೆ, ಇದಕ್ಕೆ ಭಾರಿ ಅಸಮಾಧಾನ, ಆಕ್ರೋಶ ವ್ಯಕ್ತವಾಗಿದೆ.

    ಪದ್ಮ ಪ್ರಶಸ್ತಿ ಪುರಸ್ಕೃತರು ಸೇರಿ ನೂರಕ್ಕೂ ಹೆಚ್ಚು ಗಣ್ಯರು ಪುಲಿಟ್ಜರ್​ ಸಂಸ್ಥೆಗೆ ಪತ್ರ ಬರೆದಿದ್ದಾರೆ. ಕುಲಪತಿಗಳು, ನಿವೃತ್ತ ಅಧಿಕಾರಿಗಳು, ಒಲಿಂಪಿಯನ್​ಗಳು, ನಿವೃತ್ತ ಸೇನಾಧಿಕಾರಿಗಳು ಇದರಲ್ಲಿ ಸೇರಿದ್ದಾರೆ.

    ಕಳೆದ ವಾರವಷ್ಟೇ ಅಸೋಸಿಯೇಟ್​ ಪ್ರೆಸ್​ ಸುದ್ದಿ ಸಂಸ್ಥೆಯ ಛಾಯಾಗ್ರಾಹಕರಾದ ಚನ್ನಿ ಆನಂದ್​, ಮುಖ್ತಾರ್​ ಖಾನ್​ ಹಾಗೂ ದರ್​ ಯಾಸಿನ್​ ಅವರಿಗೆ ಫೀಚರ್​ ವಿಭಾಗದಲ್ಲಿ ಉತ್ತಮ ಛಾಯಾಚಿತ್ರ ಪ್ರಶಸ್ತಿ ನೀಡಲಾಗಿದೆ.

    ಇದನ್ನೂ ಓದಿ; ಹೊರ ರಾಜ್ಯ, ವಿದೇಶದಿಂದ ರಾಜ್ಯಕ್ಕೆ ಬರುವವರಿಗೆ ಕಡ್ಡಾಯ ಕ್ವಾರಂಟೈನ್​

    ಪ್ರಶಸ್ತಿ ನೀಡಿದ್ದಕ್ಕಿಂತಲೂ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಲಾಗಿರುವ ವಾಕ್ಯಗಳು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಭಾರತವು ‘ವಿವಾದಿತ ಪ್ರದೇಶ’ ಕಾಶ್ಮೀರದ ಸ್ವಾತಂತ್ರ್ಯ ಕಸಿದು, ಸಂವಹವನ್ನೇ ಕಡಿದು ಸಂದರ್ಭದಲ್ಲಿನ ಬದುಕಿನ ಚಿತ್ರಗಳು ಎಂದು ಜಮ್ಮು ಕಾಶ್ಮೀರದ ಛಾಯಾಗ್ರಾಹಕರಿಗೆ ನೀಡಲಾದ ಪ್ರಶಸ್ತಿ ಪ್ರಮಾಣದಲ್ಲಿ ಹೇಳಲಾಗಿದೆ. ಹೀಗೆ ಹೇಳುವ ಮೂಲಕ ಸಮಿತಿಯು ಇತಿಹಾಸದ ಅಲ್ಪ ಅರಿವನ್ನು ಪ್ರದರ್ಶಿಸಿದೆ ಹಾಗೂ ಭಾರತದ ಸಾರ್ವಭೌಮತೆಗೆ ಧಕ್ಕೆ ತಂದಿದೆ. ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಇದರಲ್ಲಿ ಯಾವುದೇ ವಿವಾದವಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

    ಭಾರತದ ಮೇಲೆ ಮೊಘಲರ ದಾಳಿಗೂ ಮುನ್ನ ಅವಿಚ್ಛಿನ್ನ ಇತಿಹಾಸವನ್ನು ಕಾಶ್ಮೀರ ಹೊಂದಿದೆ ಎಂದು ಪಾಶ್ಚಾತ್ಯ ಇತಿಹಾಸಕಾರರೇ ಹೇಳಿದ್ದಾರೆ ಎಬುದನ್ನು ನೆನಪಿಸಿದ್ದಾರೆ.

    ಇದನ್ನೂ ಓದಿ; ದೆಹಲಿಯಲ್ಲಿ ತಿಂಗಳ ಅವಧಿಯಲ್ಲಿ ಮೂರನೇ ಬಾರಿ ಭೂಕಂಪ

    ಭಾರತದಲ್ಲಿ ಸುಳ್ಳುಸುದ್ದಿ ಹಾಗೂ ಭಯೋತ್ಪಾದನೆ ಬಿತ್ತರಿಸುವುದನ್ನು ಪ್ರಶಸ್ತಿ ನೀಡುವ ಮೂಲಕ ಪುಲಿಟ್ಜರ್​ ಸಮಿತಿ ಕೂಡ ಬೆಂಬಲಿಸಿದಂತಾಗಿದೆ. ಮುಖ್ತಾರ್​ ಖಾನ್​ ಹಾಗೂ ದರ್​ ಯಾಸಿನ್​ ತಮ್ಮ ಛಾಯಾಚಿತ್ರಗಳ ಮೂಲಕ ಸುಳ್ಳು, ಸತ್ಯಾಂಶಗಳ ಮರೆಮಾಚುವಿಕೆ, ವಿಭಜನಾ ಕೃತ್ಯಗಳನ್ನು ಉತ್ತೇಜಿಸುತ್ತಿದ್ದಾರೆ. ಆದರೆ, ಈ ಆಕ್ಷೇಪಗಳಿಂದ ಚನ್ನಿ ಆನಂದ್​ ಅವರನ್ನು ಹೊರಗಿಡಲು ಬಯಸುತ್ತೇವೆ ಎಂದು ಎಂದು ಪತ್ರದಲ್ಲಿ ಹೇಳಲಾಗಿದೆ.

    ಮೌಂಟ್​ ಎವರೆಸ್ಟ್​ ಬುಡಕ್ಕೂ ಬಂತು ಚೀನಾ ಗಡಿ ತಂಟೆ ವಿವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts