More

    ನಾನು ಜೈಲಿನಲ್ಲಿಲ್ಲ ಜನರ ಹೃದಯದಲ್ಲಿದ್ದೇನೆ; ಆಂಧ್ರ ರಾಜಕಾರಣದಲ್ಲಿ ಗದ್ದಲ ಎಬ್ಬಿಸಿದ ಚಂದ್ರಬಾಬು ನಾಯ್ಡು ಬಹಿರಂಗ ಪತ್ರ

    ಅಮರಾವತಿ: ಬಹುಕೋಟಿ ಅಕ್ರಮ ಪ್ರಕರಣದಲ್ಲಿ ಜೈಲು ಸೇರಿರುವ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ಟಿಡಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಜೈಲಿನಿಂದಲ್ಲೇ ಬಹಿರಂಗ ಪತ್ರ ಒಂದನ್ನು ಬರೆದಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಗದ್ದಲವನ್ನುಂಟು ಮಾಡಿದೆ.

    ಆಂಧ್ರಪ್ರದೇಶ ಜನತೆಯನ್ನು ಉದ್ದೇಶಿಸಿ ಬರೆದಿರುವ ಪತ್ರದಲ್ಲಿ ಆಡಳಿತರೂಢ ವೈಎಸ್​ಆರ್​ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿರುವ ಚಂದ್ರಬಾಬು ನಾಯ್ಡು ನಾನು ಜೈಲಿನಲ್ಲಿಲ್ಲ ಜನರ ಹೃದಯದಲ್ಲಿದ್ದೇನೆ ಎಂದು ಹೇಳಿದ್ದಾರೆ.

    ಕಳೆದ 45 ವರ್ಷಗಳಿಂದ ನಾನು ರಾಜಕೀಯದಲ್ಲಿ ಉಳಿಸಿಕೊಂಡು ಬಂದಿರುವ ಮೌಲ್ಯಗಳು ಮತ್ತು ವಿಶ್ವಾಸಾರ್ಹತೆಯನ್ನು ಯಾರೂ ಹಾಳು ಮಾಡಲು ಸಾಧ್ಯವಿಲ್ಲ. ಭ್ರಷ್ಟಾಚಾರ ಪ್ರಕರಣದಲ್ಲಿ ಒಂದು ತಿಂಗಳಿನಿಂದ ಜೈಲಿನಲ್ಲಿದ್ದು, ಈಗ ಜನರ ನಡುವೆ ಇಲ್ಲದಿರಬಹುದು. ಆದರೆ, ಅಭಿವೃದ್ಧಿಯ ಆಕಾರದಲ್ಲಿ ನಾನು ಯಾವಾಗಲೂ ಎಲ್ಲೆಡೆ ಇರುತ್ತೇನೆ.

    ನಾನು ಜನರ ಹೃದಯದಲ್ಲಿದ್ದು, ಯಾವ ಶಕ್ತಿ ಸಹ ತಮ್ಮನ್ನು ಏನು ಮಾಡಲು ಸಾಧ್ಯವಿಲ್ಲ. ಮುಂದೊಂದು ದಿನ ತಮಗೆ ಖಂಡಿತ ನ್ಯಾಯ ಸಿಗಲಿದ್ದು, ಜನರಿಗಾಗಿ ಮತ್ತು ರಾಜ್ಯದ ಹಿತಕ್ಕಾಗಿ ಕೆಲಸ ಮಾಡಲು ಹೊಸ ಚೈತನ್ಯದಿಂದ ಹೊರಬರುವುದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ರಾಜಸ್ಥಾನ ಚುನಾವಣೆ; 43 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

    ನನ್ನ 45 ವರ್ಷಗಳ ಸುದೀರ್ಘ ರಾಜಕೀಯ ಬದುಕನ್ನು ಜೈಲಿನ ಕಂಬಿಗಳ ಹಿಂದೆ ನೆನಪಾಗುತ್ತಿದ್ದು, ಜನರ ಪ್ರಗತಿಗಾಗಿ ನಾನು ಕೆಲಸ ಮಾಡಿದ್ದೇನೆ. ಕೆಳದ ಬಾರಿ ರಾಜಮಹೇಂದ್ರವರಂನಲ್ಲಿ ನಾನು ಟಿಡಿಪಿ ಪ್ರಣಾಳಿಕೆಯನ್ನು ಘೋಷಿಸುವುದಾಗಿ ಹೇಳಿದ್ದೆ. ಆದರೆ, ಅದು ಮುಂದೂಡಲಾಗಿದ್ದು, ಜೈಲಿನಿಂದ ಹೊರಬಂದ ನಂತರ ಪೂರ್ಣಪ್ರಮಾಣದ ಪ್ರಣಾಳಿಕೆಯನ್ನು ಘೋಷಿಸುತ್ತೇನೆ.

    ನನ್ನ ಬಂಧನದ ಸುದ್ದಿ ತಿಳಿದು ಅನೇಕ ಜನರು ಮೃತಪಟ್ಟಿದ್ದು, ಶೀಘ್ರದಲ್ಲೇ ಮೃತರ ಕುಟುಂಬಸ್ಥರನ್ನು ನನ್ನ ಪತ್ನಿ ನಾರಾ ಭುವನೇಶ್ವರಿ ಭೇಟಿ ಮಾಡಿ ಸಾಂತ್ವಾನ ಹೇಳಲಿದ್ದಾರೆ. ನನ್ನ ಬಂಧನದ ಹಿಂದಿನ ರಾಜಕೀಯವನ್ನು ಅವರು ಬಹಿರಂಗಪಡಿಸಲಿದ್ದಾರೆ. ನಾನು ಹೊರಬರುವವರೆಗೂ ಜನರು ಶಾಂತಿಯುತವಾಗಿ ಹೋರಾಟವನ್ನು ಮಾಡಬೇಕು ಎಂದು ತಮ್ಮ ಪತ್ರದಲ್ಲಿ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ಟಿಡಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಕರೆ ನೀಡಿದ್ದಾರೆ.

    ಇತ್ತ ಚಂದ್ರಬಾಬು ಜನತೆಯನ್ನು ಉದ್ದೇಶಿಸಿ ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಕಿಡಿಕಾರಿರುವ ಆಡಳಿತರೂಢ ವೈಎಸ್​ಆರ್​ಸಿಪಿ ಜೈಲಿನಲ್ಲಿರುವ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆಯಲು ಪೆನ್​ ಹಾಗೂ ಪೇಪರ್​ ಹೇಗೆ ದೊರೆಯಿತು ಎಂದು ನಮಗೆ ತಿಳಿದಿಲ್ಲ. ಚಂದ್ರಬಾಬಯ ನಾಯ್ಡು ಬರೆದಿದ್ದಾರೆ ಎನ್ನಲಾದ ಪತ್ರ ಸಂಪೂರ್ಣವಾಗಿ ನಕಲಿಯಾಗಿದ್ದುಮ ಜನತೆಯ ದಾರಿ ತಪ್ಪಿಸಲು ಈ ರೀತಿಯ ಕೆಲಸ ಮಾಡಲಾಗಿದೆ. ಅವರು ಭ್ರಷ್ಟಾಚಾರ ಮಾಡಿರದಿದ್ದರೆ ಜನರು ಅವರನ್ನು ಅಧಿಕಾರದಿಂದ ಏಕೆ ಕೆಳಗಿಳಿಸುತ್ತಿದ್ದರು ಎಂದು ಆಡಳಿತರೂಢ ವೈಎಸ್​ಆರ್​ಸಿಪಿ ನಾಯಕರು ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts