More

    ಭಾರತದಲ್ಲಿ ಗಳಿಸಿದ ಪದವಿ ಇನ್ನು ಆಸ್ಟ್ರೇಲಿಯಾದಲ್ಲಿ ಮಾನ್ಯ; ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್​ ಕೂಡ ಕೊಡ್ತಾರೆ!

    ಬೆಂಗಳೂರು: ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು ಬುಧವಾರ ‘ಆಸ್ಟ್ರೇಲಿಯಾ-ಭಾರತ ಶಿಕ್ಷಣ ಅರ್ಹತೆ ಗುರುತಿಸುವಿಕೆ ಕಾರ್ಯವಿಧಾನ’ವನ್ನು ಘೋಷಿಸಿದ್ದಾರೆ. ಡೀಕಿನ್ ವಿಶ್ವವಿದ್ಯಾಲಯವು ಭಾರತದಲ್ಲಿ ತನ್ನ ಕ್ಯಾಂಪಸ್ ಅನ್ನು ಸ್ಥಾಪಿಸಲು ಅನುಮೋದನೆ ಪಡೆದ ಮೊದಲ ಸಾಗರೋತ್ತರ ವಿಶ್ವವಿದ್ಯಾಲಯ’ ಎಂದು ಘೋಷಿಸಿದ್ದಾರೆ.

    ನಾವು ಆಸ್ಟ್ರೇಲಿಯಾ ಭಾರತ ಶಿಕ್ಷಣ ಅರ್ಹತೆ ಗುರುತಿಸುವ ಕಾರ್ಯವಿಧಾನವನ್ನು ಅಂತಿಮಗೊಳಿಸಿದ್ದೇವೆ. ಈ ಹೊಸ ಕಾರ್ಯವಿಧಾನದದಲ್ಲಿ, ನೀವು ಆಸ್ಟ್ರೇಲಿಯಾದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಯಾಗಿದ್ದರೆ, ನೀವು ಮನೆಗೆ ಹಿಂದಿರುಗಿದಾಗ ನಿಮ್ಮ ಕಷ್ಟಪಟ್ಟು ಗಳಿಸಿದ ಪದವಿಯನ್ನು ಗುರುತಿಸಲಾಗುತ್ತದೆ. ಅದೇ ರೀತಿ ಆಸ್ಟ್ರೇಲಿಯಾದಲ್ಲಿ ಭಾರತದಲ್ಲಿ ನೀವು ಗಳಿಸಿದ ವಿದ್ಯಾರ್ಹತೆಯನ್ನು ಗುರುತಿಸಲಾಗುತ್ತದೆ. ಇದು ಆಸ್ಟ್ರೇಲಿಯಾದ ಶಿಕ್ಷಣ ಪೂರೈಕೆದಾರರಿಗೆ ಭಾರತೀಯ ವಿದ್ಯಾರ್ಥಿಗಳಿಗೆ ಸುಲಭವಾಗಿ ಶಿಕ್ಷಣವನ್ನು ನೀಡಿ ಅರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ” ” ಎಂದು ಅಹಮದಾಬಾದ್‌ನಲ್ಲಿ ನಡೆದ ‘ಸೆಲೆಬ್ರೇಟಿಂಗ್ ಇಂಡಿಯಾ-ಆಸ್ಟ್ರೇಲಿಯಾ ಶಿಕ್ಷಣ ಸಂಬಂಧ’ ಕಾರ್ಯಕ್ರಮವನ್ನು ಉದ್ದೇಶಿಸಿ ಅಲ್ಬನೀಸ್ ಹೇಳಿದರು.

    ತಮ್ಮ ಗುಜರಾತ್ ಪ್ರವಾಸದ ಮೊದಲ ದಿನ, ಆ್ಯಂಥೋನಿ ಅಲ್ಬನೀಸ್ ‘ಭಾರತೀಯ ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯಾದಲ್ಲಿ ನಾಲ್ಕು ವರ್ಷಗಳವರೆಗೆ ಅಧ್ಯಯನ ಮಾಡಲು ಹೊಸ ವಿದ್ಯಾರ್ಥಿವೇತನವನ್ನು ಘೋಷಿಸಿದರು.

    ತಮ್ಮ ನಿಯೋಗದೊಂದಿಗೆ ಪ್ರಧಾನಿ ಮೋದಿ ಭೇಟಿ ಮಾಡಿದ ಆ್ಯಂಥೋನಿ ಆಲ್ಬನೀಸ್​ ಬುಧವಾರ ಅಹಮದಾಬಾದ್ ತಲುಪಿ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ಅವರು ರಾಜಭವನದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಹೋಳಿ ಆಚರಿಸಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts