More

    ಆಫ್ಘನ್​ನಲ್ಲಿರುವ ಭಾರತದ ರಾಯಭಾರ ಕಚೇರಿ ಸದ್ಯ ಪಾಕ್ ಟಾರ್ಗೆಟ್ !

    ನವದೆಹಲಿ: ಲಡಾಖ್ ಭಾಗದಲ್ಲಿ ಚೀನಾ ಅತಿಕ್ರಮಣ ಮುಂದುವರಿಸುತ್ತಿರುವ ಈ ಸಂದರ್ಭದಲ್ಲಿ ಆಫ್ಘನ್​ನಲ್ಲಿರುವ ಭಾರತದ ರಾಯಭಾರ ಕಚೇರಿಯ ಮೇಲೆ ಐಇಡಿ ದಾಳಿ ನಡೆಸುವುದಕ್ಕೆ ಪಾಕಿಸ್ತಾನದ ಇಂಟರ್​ ಸರ್ವೀಸ್ ಇಂಟೆಲಿಜೆನ್ಸ್ ಏಜೆನ್ಸಿ (ಐಎಸ್​ಐ) ಸಂಚು ರೂಪಿಸಿದೆ ಎಂಬ ಅಂಶ ಬೆಳಕಿಗೆ ಬಂದಿದ್ದು, ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ಸಂದೇಶ ರವಾನಿಸಿದೆ.

    ಪಾಕ್​ ಪ್ರಾಯೋಜಿತ ಉಗ್ರ ಸಂಘಟನೆ ಲಷ್ಕರ್ ಏ ತೊಯ್ಬಾ (ಎಲ್​ಇಟಿ) ಈ ದಾಳಿಯನ್ನು ನಡೆಸುವ ಸಾಧ್ಯತೆ ಇದೆ. ಜಲಾಲಾಬಾದ್​ನಲ್ಲಿರುವ ಭಾರತದ ರಾಯಭಾರ ಕಚೇರಿಯೇ ಟಾರ್ಗೆಟ್ ಆಗಿದ್ದು, ವಾಹನದಲ್ಲಿ ಐಇಡಿ ಸ್ಫೋಟಕ ತುಂಬಿ ದಾಳಿ ನಡೆಸಬಹುದು. ಈಗಾಗಲೇ ನಾಲ್ವರು ಆತ್ಮಹತ್ಯಾ ಬಾಂಬರ್​ಗಳು ಕುನಾರ್ ಪ್ರಾಂತ್ಯಕ್ಕೆ ತೆರಳಿದ್ದಾರೆ ಎಂಬ ಎಚ್ಚರಿಕೆಯನ್ನು ಗುಪ್ತಚರ ಮೂಲಗಳು ರವಾನಿಸಿವೆ.

    ಇದನ್ನೂ ಓದಿ: ಸ್ಯಾಂಡಲ್​​ವುಡ್​ ಮಾದಕ ವ್ಯಸನಿಗಳ ಹೆಸರು ಹೇಳಿದ್ದ ಇಂದ್ರಜಿತ್​ ಲಂಕೇಶ್​ಗೆ ಸಿಸಿಬಿ ನೋಟಿಸ್…

    ಆಫ್ಘನ್​ನಲ್ಲಿರುವ ಭಾರತದ ಆಸ್ತಿಪಾಸ್ತಿಗಳಿಗೆ ಸಾಕಷ್ಟು ಬೆದರಿಕೆ ಇದೆ. ಆಫ್ಘನ್​ನಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವ ಕಾರಣ ಪಾಕಿಸ್ತಾನಕ್ಕೆ ಅಭದ್ರತೆ ಕಾಡತೊಡಗಿದೆ. ಹೀಗಾಗಿ ಅದು ಛಾಯಾ ಸಮರಕ್ಕೆ ಮುಂದಾಗಿದ್ದು, ಪ್ರಾಯೋಜಿತ ಉಗ್ರರನ್ನು ಕಣಕ್ಕೆ ಇಳಿಸಿದೆ. ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾವಿಯೆನ್ಸ್ (ಐಎಸ್​ಕೆಪಿ)ಯನ್ನು ಅನುಷ್ಠಾನಗೊಳಿಸುವಲ್ಲಿ ಪಾಕಿಸ್ತಾನ ಮುತುವರ್ಜಿವಹಿಸಿದ್ದು, ಕಾಬೂಲ್​ನಲ್ಲಿರುವ ಎತ್ನಿಕ್ ಮೈನಾರಿಟಿ ಸಮುದಾಯಗಳ ಮೇಲೆ ದಾಳಿ ನಡೆಸುತ್ತಿದೆ. (ಏಜೆನ್ಸೀಸ್)

    ಕ್ರಿಪ್ಟೋ ಕರೆನ್ಸಿಯಲ್ಲಿ ನಡೆಯುತ್ತಿತ್ತು ಡ್ರಗ್ಸ್ ಪೆಡ್ಲರ್​ ಅಹಮದ್​ನ ವಹಿವಾಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts