ಬೆಂಗಳೂರು: ಕೋವಿಡ್ 19 ಪಿಡುಗಿನಿಂದ ರೈತರು, ಆಹಾರ ಮತ್ತು ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳು ಮತ್ತು ಸ್ವಸಹಾಯ ಗುಂಪಿನ ಸದಸ್ಯರು ತೀವ್ರ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇವರೆಲ್ಲರಿಗೆ ನೆರವಾಗಲು ಇಂಡಿಯನ್ ಬ್ಯಾಂಕ್ ಮುಂದಾಗಿದೆ.
ಇದಕ್ಕಾಗಿ ಅದು Ind Covid Emergency Agro Processing Loan, Ind Covid Emergency Poultry Loan, Ind KCC-Covid Sahaya Loan ಮತ್ತು SHG Covid Sahaya Loan ಎಂಬ ನಾಲ್ಕು ವಿಧದ ಸಾಲ ಯೋಜನೆಗಳನ್ನು ಪ್ರಕಟಿಸಿದೆ.
ಇಂಡ್ ಕೋವಿಡ್ ಎಮರ್ಜೆನ್ಸಿ ಆಗ್ರೋ ಪ್ರೊಸೆಸಿಂಗ್ ಲೋನ್ ಯೋಜನೆಯಡಿ ಆಹಾರ ಮತ್ತು ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳಿಗೆ ಶೇ.10 ದುಡಿಯುವ ಬಂಡವಾಳ, ಇಂಡ್ ಕೋವಿಡ್ ಎಮರ್ಜೆನ್ಸಿ ಪೌಲ್ಟ್ರಿ ಲೋನ್ ಯೋಜನೆಯಡಿ ಪೌಲ್ಟ್ರಿಗಳ ಮಾಲೀಕರು ಶೇ.20 ದುಡಿಯುವ ಬಂಡವಾಳ ಮತ್ತು ಪಶುಸಾಕಾಣಿಕೆ ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು ಇಂಡ್ ಕೆಸಿಸಿ ಕೋವಿಡ್ ಸಹಾಯ್ ಲೋನ್ ಯೋಜನೆಯಡಿ ಶೇ.10 ಮೆದುಸಾಲ (ಸಾಫ್ಟ್ ಲೋನ್) ಪಡೆದುಕೊಳ್ಳಬಹುದು.
ಎಸ್ಎಚ್ಜಿ ಕೋವಿಡ್ ಸಹಾಯ ಲೋನ್ ಯೋಜನೆಯಡಿ ಸ್ವಸಹಾಯ ಗುಂಪಿನ ಮಹಿಳೆಯರು ತಲಾ 5 ಸಾವಿರ ರೂ.ನಂತೆ ಸಾಲ ಪಡೆದುಕೊಳ್ಳಬಹುದಾಗಿದೆ. ಒಂದು ಸ್ವಸಹಾಯ ಗುಂಪಿನಲ್ಲಿ 20 ಜನರಿದ್ದರೆ 1 ಲಕ್ಷ ರೂ.ವರೆಗೂ ಸಾಲ ಪಡೆದುಕೊಳ್ಳಬಹುದು.
ಈ ಎಲ್ಲ ಯೋಜನೆಗಳಡಿ ಪಡೆಯುವ ಸಾಲವನ್ನು ಮಾಸಿಕ ಸಮಾನ ಕಂತುಗಳಲ್ಲಿ ಪಾವತಿಸಬಹುದಾಗಿದೆ.
ಕೋವಿಡ್ 19 ಲಾಕ್ಡೌನ್ ಕೃಪೆ, ಜಾಲಂಧರ್ನಿಂದಲೇ ಹಿಮಚ್ಛಾದಿತ ಹಿಮಾಲಯ ಪರ್ವತಶ್ರೇಣಿಯ ದರ್ಶನ!