More

    ಗಗನಯಾನಿಗಳಿಗೆ ರಷ್ಯಾದಲ್ಲಿ ತರಬೇತಿ ಆರಂಭ

    ಮಾಸ್ಕೊ: ಮಾನವ ಸಹಿತ ಬಾಹ್ಯಾಕಾಶ ಯಾತ್ರೆಗೆ ಆಯ್ಕೆಯಾಗಿರುವ ನಾಲ್ಕು ಭಾರತೀಯ ಗಗನಯಾನಿಗಳಿಗೆ ರಷ್ಯಾದಲ್ಲಿ ತರಬೇತಿ ಆರಂಭವಾಗಿದೆ. ರೋಚಕವಾದ ತರಬೇತಿಯ ಕೆಲ ಚಿತ್ರಗಳನ್ನು ಗಗಾರಿನ್ ಗಗನಯಾನ ತರಬೇತಿ ಕೇಂದ್ರ (ಜಿಸಿಟಿಸಿ) ಬಿಡುಗಡೆ ಮಾಡಿದೆ.

    2021ರ ಕೊನೆ ಅಥವಾ 2022ರ ಆರಂಭದಲ್ಲಿ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳಿಸುವುದು ಭಾರತದ ಗುರಿಯಾಗಿದೆ. ಈ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ ಕೆಲವೇ ದೇಶಗಳ ಸಾಲಿಗೆ ಸೇರುವುದು ಭಾರತದ ಮಹತ್ವಾಕಾಂಕ್ಷೆಯಾಗಿದೆ. ಈ ಯೋಜನೆಗೆ ನಾಲ್ಕು ಗಗನಯಾತ್ರಿಗಳನ್ನು ಆಯ್ಕೆ ಮಾಡಿ, ತರಬೇತಿಗೆ ಕಳಿಸಲಾಗಿದೆ.

    ರಷ್ಯಾ ಹಲವು ಬಾರಿ ಬಾಹ್ಯಾಕಾಶಕ್ಕೆ ಮಾನವ ಸಹಿತ ಪ್ರಯಾಣ ಮಾಡಿದೆ. ಅಪಾರ ಅನುಭವವನ್ನೂ ಹೊಂದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸ್ಟಾರ್ ಸಿಟಿಯಲ್ಲಿರುವ ಜಿಸಿಟಿಸಿಗೆ ಭಾರತದ ಗಗನಯಾನಿಗಳನ್ನು ಕಳಿಸಲಾಗಿದೆ. ಇವರ ಗುರುತು ಹಾಗೂ ತರಬೇತಿ ವಿವರಗಳನ್ನು ಗೌಪ್ಯವಾಗಿಡಲಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts