More

    ಚೀನಾ ಬಾಲಬಿಚ್ಚಿದರೆ ಎಂಟೇ ನಿಮಿಷದಲ್ಲಿ ಉಡೀಸ್‌: ಇಲ್ಲಿದೆ ನೋಡಿ ಸಿದ್ಧತೆಯ ಪರಿ…

    ನವದೆಹಲಿ: ಭಾರತದ ಜತೆ ಸಂಘರ್ಷಕ್ಕಿಳಿದಿರುವ ಚೀನಾ ಇದೀಗ ಭಾರಿ ಹೊಡೆತ ಅನುಭವಿಸುತ್ತಿದೆ. ಇದಾಗಲೇ ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಜನತೆಯೇ ಚೀನಾಕ್ಕೆ ತಕ್ಕಬುದ್ಧಿ ಕಲಿಸುತ್ತಿದೆ. ಅದೇ ಇನ್ನೊಂದೆಡೆ ಭಾರತೀಯ ಸೇನೆ ಸಕಲ ಸಜ್ಜುಗೊಂಡಿದ್ದು, ಚೀನಾಕ್ಕೆ ಎದುರೇಟು ನೀಡಲು ಕಾತರರಾಗಿದ್ದಾರೆ.

    ಹೌದು. ಯಾವಾಗ ಏನು ಬೇಕಾದರೂ ಮಾಡಬಲ್ಲ ಕುತಂತ್ರಿ ಚೀನಾದ ಮೇಲೆ ಭಾರತೀಯ ವಾಯುಪಡೆ ಹದ್ದಿನ ಕಣ್ಣು ಇಟ್ಟಿದೆ. ಲಡಾಖ್‌ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್-ಎಲ್‌ಎಸಿ) ಬಳಿ ಮಾತ್ರವಲ್ಲದೇ ಗಡಿಯ ಸುತ್ತಮುತ್ತಲೂ ಕಾವಲು ಕಾಯುತ್ತಿದೆ.

    ಇದೀಗ ವಾಯುಪಡೆಯು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ, ಅತ್ಯಾಧುನಿಕಗೊಂಡು ಶತ್ರುಗಳನ್ನು ಸದೆಬಡಿಯಲು ಸಕಲ ಸಿದ್ಧತೆ ನಡೆಸಿದೆ. ಒಂದು ವೇಳೆ ಚೀನಾ ಏನಾದರೂ ಬಾಲಬಿಚ್ಚಿದರೆ ಎಂಟೇ ನಿಮಿಷಗಳಲ್ಲಿ ಶತ್ರುಗಳನ್ನು ಹೊಡೆದುರುಳಿಸುವಷ್ಟು ತಾಕತ್ತು ಹೊಂದಿರುವ ಭಾರತೀಯ ಸೇನೆ ಈ ನಿಟ್ಟಿನಲ್ಲಿ ಸಜ್ಜುಗೊಂಡಿದೆ.

    ಇದನ್ನೂ ಓದಿ: ಶೌಚಗೃಹದ ಡಿಸೈನ್‌ ಕಳಿಸಿ- 26 ಲಕ್ಷ ರೂಪಾಯಿ ಗೆಲ್ಲಿ- ನಾಸಾದಿಂದ ಭಾರಿ ಆಫರ್‌!

    ಭಾರತೀಯ ಹೆಲಿಕಾಪ್ಟರ್‌ಗಳು ಕಿರಿದಾದ ಪರ್ವತದ ಹಾದಿಗಳಲ್ಲಿ ಲಡಾಖ್‌ನ ಒರಟು ಪರ್ವತಗಳ ಸಮೀಪವೇ ಚೀನಾ ಸೇನೆಯನ್ನು ಹೊಡೆಯುವ ಸಾಮರ್ಥ್ಯ ಹೊಂದಿವೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ನಮ್ಮ ವಾಯುಪಡೆಯು ಮುಂದಿನ 60 ದಿನಗಳವರೆಗೆ ಅತ್ಯಂತ ಎಚ್ಚರಿಕೆಯಿಂದ ಈ ಪ್ರದೇಶದ ಮೇಲೆ ನಿಗಾ ವಹಿಸಲಿದೆ.

    ಚೀನಾದ ಭೂಪ್ರದೇಶದಲ್ಲಿ ಲಡಾಖ್ ಎದುರು ಮೂರು ವಾಯುನೆಲೆಗಳಿವೆ. ಅದೇ ಇನ್ನೊಂದೆಡೆ, ಪಾಕಿಸ್ತಾನ-ಆಕ್ರಮಿತ-ಕಾಶ್ಮೀರದ ಸ್ಕಾರ್ಡು ವಾಯುನೆಲೆಯ ಮೇಲೆ ಚೀನಾ ಕಣ್ಣಿಟ್ಟಿದೆ. ಚೀನಾ ಇದಾಗಲೇ ಜೆ -8 ಯೋಧರು ಮತ್ತು ಬಾಂಬರ್ ವಿಮಾನಗಳನ್ನು ತಮ್ಮ ವಾಯುನೆಲೆಗಳಲ್ಲಿ ನಿಯೋಜಿಸಿದೆ. ಈ ಸಮಯದಲ್ಲಿ, ಚೀನಾವು ಕ್ಸಿನ್‌ಜಿಯಾಂಗ್ ಮಿಲಿಟರಿ ಆಜ್ಞೆಯಡಿಯಲ್ಲಿ ಬರುವ ಹೊಟಾನ್‌ನಲ್ಲಿ ಆಯಕಟ್ಟಿನ ನೆಲೆಯನ್ನು ನಿರ್ಮಿಸಿದೆ. ಆ ಭಾಗದಲ್ಲಿ ಸುಮಾರು 35 ರಿಂದ 40 ಯುದ್ಧ ವಿಮಾನಗಳಿವೆ. ಇವುಗಳಲ್ಲಿ ಜೆ -11, ಜೆ -8, ಬಾಂಬರ್ ವಿಮಾನಗಳು ಮತ್ತು ಎಇವಾಕ್ಸ್ ವಿಮಾನಗಳು ಕೂಡ ಸೇರಿವೆ. ಇವುಗಳನ್ನೆಲ್ಲಾ ಗಣನೆಗೆ ತೆಗೆದುಕೊಂಡು ವಾಯುಪಡೆ ಸನ್ನದ್ಧವಾಗಿ ನಿಂತಿದೆ.

    ಭಾರತದ ಯುದ್ಧವಿಮಾನಗಳು ಹೆಚ್ಚಿನ ಎತ್ತರದ ಯುದ್ಧ ಮಾಡುವಲ್ಲಿ ಸಾಕಷ್ಟು ಪರಿಣತಿ ಹೊಂದಿವೆ.ಭಾರತೀಯ ವಾಯುಪಡೆಯು ಸುಖೋಯ್, ಮಿರಾಜ್, ಜಾಗ್ವಾರ್, ಮಿಗ್ ವಿಮಾನಗಳನ್ನು ಹೊಂದಿದ್ದು, ಚೀನಾದ ವಿಮಾನಗಳನ್ನು ಹೊಡೆದುರುಳಿಸುವ ತಾಕತ್ತು ಹೊಂದಿವೆ. (ಏಜೆನ್ಸೀಸ್‌)

    ಫೇಸ್‌ಬುಕ್‌ ಸಿರಿವಂತಿಕೆಯನ್ನೇ ಅಲ್ಲಾಡಿಸಿದ ಕಪ್ಪು ವರ್ಣೀಯರ ಹತ್ಯೆ! ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts