More

    ಭಾರತದಿಂದ ಪರಾರಿ ಆದವರ ಹಸ್ತಾಂತರಕ್ಕೆ ಪ್ರಯತ್ನ; ಕೇಂದ್ರ ತನಿಖಾ ಸಂಸ್ಥೆಗಳು ಬ್ರಿಟನ್​ಗೆ ಭೇಟಿ

    ನವದೆಹಲಿ: ಸೆಂಟ್ರಲ್​ ಬ್ಯೂರೋ ಆಫ್​ ಇನ್ವೆಸ್ಟಿಗೇಷನ್​ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಒಳಗೊಂಡ ಉನ್ನತ ಶ್ರೇಣಿಯ ತಂಡವು ಭಾರತದಿಂದ ಪರಾರಿ ಆಗಿರುವ ಮೋಸ್ಟ್​ ವಾಂಟೆಡ್​ ಆರೋಪಿಗಳ ಹಸ್ತಾಂತರ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ ಬ್ರಿಟನ್​ಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಈ ಮೋಸ್ಟ್​ ವಾಂಟೆಡ್​ ಪರಾರಿಯಾದವರಲ್ಲಿ ರಣಾ ಡೀಲರ್​ ಸಂಜಯ್​ ಭಂಡಾರಿ, ವಜ್ರದ ವ್ಯಾಪಾರಿ ನೀರವ್​ ಮೋದಿ ಮತ್ತು ಕಿಂಗ್​ಫಿಶರ್​ ಏರ್​ಲೈನ್ಸ್​ ಪ್ರವರ್ತಕ ವಿಜಯ್​ ಮಲ್ಯ ಸೇರಿದ್ದಾರೆ.

    ಪರಾರಿಯಾದವರ ಅಪರಾಧದ ಆದಾಯವನ್ನು ಸ್ವಾಧಿನಪಡಿಸಿಕೊಳ್ಳಲು ವಿದೇಶದಲ್ಲಿರುವ ಅವರ ಆಸ್ತಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಭಾರತೀಯ ಹೈಕಮಿಷನ್​ ಮೂಲಕ ಭಾರತ ಸರ್ಕಾರವು ಈಗಾಗಲೇ ಪ್ರಾರಂಭಿಸಿದೆ. ಮತ್ತು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯ ನೇತೃತ್ವದ ಉನ್ನತಮಟ್ಟದ ತಂಡವು ಪರಾರಿ ಆಗಿರುವವರ ಬ್ಯಾಂಕಿಂಗ್​ ವಹಿವಾಟುಗಳ ವಿವರಗಳೊಂದಿಗೆ ಸ್ವಾಧಿನಪಡಿಸಿಕೊಂಡಿರುವ ಆಸ್ತಿಗಳ ಮಾಹಿತಿ ಪಡೆಯಲು ಯುಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

    ಸಂಜಯ್​ ಭಂಡಾರಿ ಅವರು 2016ರಲ್ಲಿ ಬ್ರಿಟನ್​ಗೆ ಪಲಾಯನ ಮಾಡಿದ್ದರು. ಇಡಿ ಮತ್ತು ಸಿಬಿಐ ಮಾಡಿದ ಕಾನೂನು ವಿನಂತಿ ಮೇರೆಗೆ ಬ್ರಿಟಿಷ್​ ಸರ್ಕಾರ ಕಳೆದ ವರ್ಷ ಜನವರಿಯಲ್ಲಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts