More

    ಮೌನ ಮುರಿದ ಪ್ರಧಾನಿ: ಇಚ್ಛಿಸಿದರೆ ಶಾಂತಿ, ಪ್ರಚೋದಿಸಿದರೆ ತಕ್ಕಶಾಸ್ತಿ!

    ನವದೆಹಲಿ: ಲಡಾಖ್​ನಲ್ಲಿ ನಡೆಯುತ್ತಿರುವ ಭಾರತ ಮತ್ತು ಚೀನಾದ ನಡುವಿನ ಘರ್ಷಣೆಯ ಕುರಿತಂತೆ ಇದೇ ಮೊದಲ ಬಾರಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತವು ಶಾಂತಿಯನ್ನು ಬಯಸುತ್ತದೆ. ಆದರೆ ಪ್ರಚೋದಿಸುವವರಿಗೆ ಸೂಕ್ತ ಉತ್ತರ ನೀಡುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ಹೇಳಿದರು.

    ಕರೊನಾ ವೈರಸ್​ಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಚರ್ಚೆ ಆರಂಭಿಸುವ ಮುನ್ನ ಅವರು ಈ ವಿಷಯವನ್ನು ಹೇಳಿದರು. ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವ ಸೂಚಕವಾಗಿ ಮೋದಿಯವರು ಎರಡು ನಿಮಿಷಗಳ ಮೌನ ಆಚರಿಸಿ ನಂತರ ಮುಖ್ಯಮಂತ್ರಿಗಳೊಂದಿಗಿನ ಸಭೆಯನ್ನು ಪ್ರಧಾನಿ ಆರಂಭಿಸಿದರು.

    ಮೋದಿ ಅವರ ಈ ಸಂದೇಶವು ರಾಷ್ಟ್ರಕ್ಕೆ ಧೈರ್ಯ ತುಂಬುವ ಜತೆಗೆ ಚೀನಾಕ್ಕೆ ತೀಕ್ಷ್ಣವಾದ ಸಂದೇಶವನ್ನು ತಲುಪಿಸುವ ಗುರಿಯನ್ನು ಹೊಂದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

    ಇದನ್ನೂ ಓದಿ: ಒಂದು ಟೆಂಟ್​ಗಾಗಿ ಶುರುವಾಯ್ತಾ ಇಂಡೋ-ಚೈನಾ ಫೈಟ್​?

    “ನಮ್ಮ ಜವಾನರ ತ್ಯಾಗ ವ್ಯರ್ಥವಾಗಲು ನಾವು ಬಿಡುವುದಿಲ್ಲ. ಈ ಕುರಿತು ನಾನು ರಾಷ್ಟ್ರಕ್ಕೆ ಭರವಸೆ ನೀಡಲು ಬಯಸುತ್ತೇನೆ. ನಮಗೆ, ದೇಶದ ಏಕತೆ ಮತ್ತು ಸಾರ್ವಭೌಮತ್ವ ಅತ್ಯಂತ ಮುಖ್ಯವಾಗಿದೆ ”ಎಂದು ಪ್ರಧಾನಿ ಮೋದಿ ಹೇಳಿದರು. ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಉಪಸ್ಥಿತರಿದ್ದರು.

    20 ಭಾರತೀಯ ಸೈನಿಕರ ನಿಧನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ದಾರೆ. ಇದು ತುಂಬಾ ನೋವಿನ ಸಂಗತಿ. ನಮ್ಮ ಯೋಧಕ ಕಾರ್ಯ ಅನುಕರಣೀಯವಾಗಿದೆ. ಅವರು ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದ್ದಾರೆ ಮತ್ತು ಭಾರತೀಯ ಸೇನೆಯ ನಿಯಮಗಳನ್ನೂ ಪಾಲನೆ ಮಾಡುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ ಎಂದರು.

    “ರಾಷ್ಟ್ರವು ಅವರ ಶೌರ್ಯ ಮತ್ತು ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ. ಹುತಾತ್ಮರಾಗಿರುವ ಕುಟುಂಬಗಳಿಗೆ ನಾವು ನೆರವಾಗುತ್ತೇವೆ. ಅವರ ಕುಟುಂಬ ವರ್ಗದ ಜತೆ ನಾವಿದ್ದೇವೆ ಎಂದು ಸಚಿವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಮೈ ಜಿಂದಾ ಹೂಂ… ಪತ್ನಿಗೆ ಕರೆ ಮಾಡಿದ ‘ಹುತಾತ್ಮ’ ಯೋಧ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts