More

    ಭಾರತ vs ಸೌತ್ ಆಫ್ರಿಕಾ ಟೆಸ್ಟ್ ಸರಣಿ: ಸಮಯ, ತಂಡಗಳು, ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ ನೋಡಿ..

    ಕೇಪ್ ಟೌನ್(ದಕ್ಷಿಣ ಆಫ್ರಿಕ): ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡಿ.26ರಿಂದ ಆರಂಭವಾಗುತ್ತಿದೆ. ಹರಿಣಗಳ ನೆಲದಲ್ಲಿ ಇದುವರೆಗೂ ಟೆಸ್ಟ್‌ ಸರಣಿ ಗೆಲ್ಲದ ಟೀಮ್‌ ಇಂಡಿಯಾ ಮೊದಲ ಬಾರಿಗೆ ಸರಣಿ ಕೈವಶಮಾಡಿಕೊಳ್ಳುವ ತವಕದಲ್ಲಿದೆ.

    ಇದನ್ನೂ ಓದಿ: ಸಿಂಹ, ಘೇಂಡಾಮೃಗಗಳೊಂದಿಗೆ ಸೆಲ್ಫಿ.. ವನ್ಯಜೀವಿ ಸಫಾರಿಯಲ್ಲಿ ಭಾರತೀಯ ಕ್ರಿಕೆಟಿಗರು!
    ದಕ್ಷಿಣ ಆಫ್ರಿಕಾ ನೆಲದಲ್ಲಿ ನಡೆದ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತ ಒಳ್ಳೇಯ ಫಲಿತಾಂಶ ಪಡೆದಿದೆ. ಚುಟುಕು ಸರಣಿ ಸಮಬಲಗೊಳಿಸಿದ ಬೆನ್ನಲ್ಲೇ, ಏಕದಿನ ಸರಣಿಯಲ್ಲಿ ಗೆದ್ದು ಬೀಗಿದೆ. ಇದೀಗ‌ ಟೀಮ್‌ ಇಂಡಿಯಾ ಆಟಗಾರರು ಸಂಪೂರ್ಣ ಬಲದೊಂದಿಗೆ ಬಿಳಿ ಜೆರ್ಸಿ ತೊಟ್ಟು ಮಹತ್ವದ ಟೆಸ್ಟ್‌ ಸರಣಿ ಆಡುತ್ತಿದ್ದಾರೆ. ಇಂಡೋ-ಆಫ್ರಿಕಾ ಟೆಸ್ಟ್‌ ಸರಣಿಯ ಸಂಪೂರ್ಣ ವಿವರ ಇಲ್ಲಿದೆ.

    ಮೊದಲ ಪಂದ್ಯವು ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ. ಎರಡನೇ ಟೆಸ್ಟ್‌ ಪಂದ್ಯಕ್ಕೆ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ. ಪಂದ್ಯವು ಜ. 3ರಂದು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದೆ

    ವೈಟ್ ಬಾಲ್ ಸರಣಿಗಿಂತ ಟೆಸ್ಟ್ ಸರಣಿಯಲ್ಲಿ ಸಂಪೂರ್ಣ ಭಿನ್ನ ತಂಡವನ್ನು ಭಾರತ ಕಣಕ್ಕಿಳಿಸುತ್ತಿದೆ. ತಂಡಕ್ಕೆ ಅನುಭವಿ ಆಟಗಾರರ ಪುನರಾಗಮನದಿಂದ ಪೂರ್ಣಬಲ ಸಿಗಲಿದೆ. ರೋಹಿತ್ ಶರ್ಮಾ ಮತ್ತೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ತಂಡಕ್ಕೆ ಮರಳುತ್ತಿದ್ದಾರೆ.

    ಏಕದಿನ ಸರಣಿಯಲ್ಲಿ ಆಡಿದ್ದ ಕೇವಲ ಮೂವರು ಆಟಗಾರರು ಮಾತ್ರ ಟೆಸ್ಟ್‌ನಲ್ಲೂ ಆಡುತ್ತಿದ್ದಾರೆ. ಕನ್ನಡಿಗ ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ಮುಖೇಶ್ ಕುಮಾರ್ ದಕ್ಷಿಣ ಆಫ್ರಿಕಾದಲ್ಲಿಯೇ ಉಳಿದಿದ್ದಾರೆ. ರುತುರಾಜ್‌ ಗಾಯಕ್ವಾಡ್‌ ಕೂಡಾ ರೆಡ್‌ ಬಾಲ್‌ ಸರಣಿಗೆ ಆಯ್ಕೆಯಾಗಿದ್ದರು. ಆದರೆ, ಗಾಯದಿಂದಾಗಿ ಅವರು ಸರಣಿಯಿಂದ ಹೊರಬಿದ್ದಿದ್ದಾರೆ. ಅತ್ತ ಮೊಹಮ್ಮದ್ ಶಮಿ ಮತ್ತು ಇಶಾನ್ ಕಿಶನ್ ಕೂಡ ತಂಡದಿಂದ ಹೊರಗುಳಿದಿದ್ದಾರೆ. ಶಮಿ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದರೆ, ಕಿಶನ್ ವೈಯಕ್ತಿಕ ಕಾರಣಗಳಿಂದ ವಿಶ್ರಾಂತಿ ಪಡೆದಯುತ್ತಿದ್ದಾರೆ. ಹೀಗಾಗಿ ಅವರ ಬದಲಿಗೆ ಕೆ.ಎಸ್. ಭರತ್ ತಂಡ ಸೇರಿಕೊಂಡಿದ್ದಾರೆ.

    ಟೆಸ್ಟ್ ಸರಣಿಯ ಲೈವ್ ಸ್ಟ್ರೀಮಿಂಗ್ ವಿವರ:  ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯ‌ಗಳನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ. ಇಲ್ಲಿ ಮೊಬೈಲ್‌ ಮೂಲಕವೇ ಲೈವ್‌ ವೀಕ್ಷಿಸಬಹುದು.

    ಎರಡೂ ತಂಡಗಳು ಹೀಗಿದೆ:
    ಭಾರತ : ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ಕೆಎಸ್ ಭರತ್ (ವಿಕೆಟ್‌ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ.

    ದಕ್ಷಿಣ ಆಫ್ರಿಕಾ : ಟೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್‌ಹ್ಯಾಮ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಜಿ, ಟೋನಿ ಡಿ ಜೊರ್ಜಿ, ಡೀನ್ ಎಲ್ಗರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಕೀಗನ್ ಪೀಟರ್‌ಸನ್, ಕಗಿಸೊ ರಬಾಡ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್ನೆ.

    ಶರವೇಗದಲ್ಲಿ ಹಬ್ಬುತ್ತಿದೆ ಕರೋನಾ: 4 ಸಾವಿರ ದಾಟಿದ ಸಕ್ರಿಯ ಪ್ರಕರಣ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts