More

    ಜೋಶ್​ ಇಂಗ್ಲಿಸ್ ಸ್ಫೋಟಕ ಶತಕ: ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ ಬೃಹತ್​ ಗುರಿ ನೀಡಿದ ಆಸೀಸ್​

    ವಿಶಾಖಪಟ್ಟಣ: ಇಲ್ಲಿನ ಡಾ. ವೈ.ಎಸ್​. ರಾಜಶೇಖರ್​ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಐದು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಜೋಶ್​ ಇಂಗ್ಲಿಸ್ (110 ರನ್​, 50 ಎಸೆತ, 11 ಬೌಂಡರಿ, 8 ಸಿಕ್ಸರ್​)​ ಅವರ ಸ್ಫೋಟಕ ಶತಕದ ನೆರವಿನಿಂದ ಟೀಮ್​ ಇಂಡಿಯಾಗೆ ಆಸೀಸ್​ ಬೃಹತ್​ ಗುರಿ ನೀಡಿದೆ.

    ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್​ ಕಲೆಹಾಕಿತು. ಈ ಮೂಲಕ ಭಾರತದ ಗೆಲುವಿಗೆ 209ರನ್​ಗಳ ಬೃಹತ್​ ಗುರಿಯನ್ನು ನೀಡಿದೆ. ಅನುಭವಿಗಳ ಅನುಪಸ್ಥಿತಿಯಲ್ಲಿ ಹೊಸಬರೇ ತುಂಬಿಕೊಂಡಿರುವ ಟೀಮ್​ ಇಂಡಿಯಾ ಯಾವ ರೀತಿ ಗುರಿ ಮುಟ್ಟಲಿದೆ ಎಂಬುದನ್ನು ಕಾದು ನೋಡಬೇಕಿದೆ.

    ಆಸೀಸ್​ ಪಡೆ ಕೇವಲ 31 ರನ್​ಗೆ ಮ್ಯಾಥೀವ್​ ಶಾರ್ಟ್​ (13) ವಿಕೆಟ್​ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತಕ್ಕೆ ಒಳಗಾಗದರೂ ಕೂಡ ನಂತರ ಕ್ರೀಸ್​ಗೆ ಅಂಟಿಕೊಂಡ ಸ್ಟೀವ್​ ಸ್ಮಿತ್​ (53) ಮತ್ತು ಜೋಶ್​ ಇಂಗ್ಲಿಷ್​ (110) ಅವರ 130 ರನ್​ಗಳ ಜತೆಯಾಟದೊಂದಿಗೆ ಬೃಹತ್​ ಮೊತ್ತದ ಗುರಿಯ ಕಡೆಗೆ ಅದ್ಭುತ ಇನಿಂಗ್ಸ್​ ಆಡಿದರು. ಸ್ಮಿತ್​ ತಾಳ್ಮೆಯ ಆಟವಾಡಿದರೆ, ಅಬ್ಬರಿಸಿ ಬೊಬ್ಬಿರಿದ ಇಂಗ್ಲಿಸ್​, ಕೇವಲ 50 ಎಸೆತಗಳಲ್ಲಿ 110 ರನ್​ ಕಲೆಹಾಕುವ ಮೂಲಕ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದವರ ಸಾಲಿಗೆ ಸೇರಿದರು.

    ಉಳಿದಂತೆ ಮಾರ್ಕಸ್​ ಸ್ಟೋನಿಸ್​ (7*) ಮತ್ತು ಟಿಮ್​ ಡೇವಿಡ್ (19*) ರನ್​ ಗಳಿಸಿ​ ಅಜೇಯರಾಗಿ ಉಳಿದರು.

    ಭಾರತದ ಪರ ಕನ್ನಡಿಗ ಪ್ರಸಿದ್ಧ ಕೃಷ್ಣ ಮತ್ತು ರವಿ ಬಿಷ್ಣೋಯ್​ ತಲಾ ಒಂದೊಂದು ವಿಕೆಟ್​ ಪಡೆದರು. ಸ್ಟೀವ್​ ಸ್ಮಿತ್​ ರನೌಟ್​ ಆದರು. ವಿಕೆಟ್​ ಬಿದ್ದರೂ ಆಸೀಸ್​ ಪಡೆಯ ರನ್​ ವೇಗಕ್ಕೆ ಕಡಿವಾಣ ಹಾಕುವಲ್ಲಿ ಭಾರತೀಯ ಬೌರಲ್​ಗಳು ಎಡವಿದರು.

    ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿದಂತೆ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿದ್ದು, ಟಿ20 ಸರಣಿಯ ನಾಯಕತ್ವವನ್ನು ಸೂರ್ಯಕುಮಾರ್​ ಯಾದವ್​ ಅವರ ವಹಿಸಿಕೊಂಡಿದ್ದಾರೆ. ಇಡೀ ತಂಡದಲ್ಲಿ ಹೊಸಬರಿಗೆ ಮಣೆ ಹಾಕಲಾಗಿದ್ದು, ಆಸೀಸ್​ ಪಡೆಗೆ ಇದು ಲಾಭವಾಗಿರುವುದು ಇಂದಿನ ಪಂದ್ಯದ ಬೃಹತ್​ ಗುರಿಯನ್ನು ನೋಡಿದರೆ ಗೊತ್ತಾಗುತ್ತದೆ.

    ಆಯ್ಕೆ ಸಮಿತಿಯಿಂದ ಕಡೆಗಣನೆ; ವಿಜಯ್​ ಹಜಾರೆ ಟ್ರೋಪಿಯಲ್ಲಿ 6 ವಿಕೆಟ್​ ಉರುಳಿಸಿ ಕಮಾಲ್ ಮಾಡಿದ ಚಹಲ್

    ರಾಹುಲ್​ ಗಾಂಧಿಗೆ EC ನೋಟಿಸ್; ದೊಡ್ಡ ವಿಚಾರವೇನಲ್ಲ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts