ಹೇರಳವಾಗಿ ಲಭ್ಯವಾಗಲಿದೆ ಸ್ಪುಟ್ನಿಕ್ ವಿ ಲಸಿಕೆ; ಆಗಸ್ಟ್​​ನಿಂದ ಭಾರತದಲ್ಲೇ ಉತ್ಪಾದನೆ ಶುರು

blank

ಮಾಸ್ಕೋ/ನವದೆಹಲಿ : ರಷ್ಯಾದ ಸ್ಪುಟ್ನಿಕ್​ ವಿ ಕರೊನಾ ಲಸಿಕೆಯ ಉತ್ಪಾದನೆಯನ್ನು ಆಗಸ್ಟ್​ನಲ್ಲಿ ಭಾರತ ಆರಂಭಿಸಲಿದ್ದು, 850 ಮಿಲಿಯನ್​ ಡೋಸ್​ಗಳನ್ನು ಉತ್ಪಾದಿಸಲಿದೆ. ಇದರಿಂದ ಭಾರತದ ಲಸಿಕೆ ಅಗತ್ಯವನ್ನು ಪೂರೈಸುವುದಷ್ಟೇ ಅಲ್ಲ, ಜಗತ್ತಿನಲ್ಲಿ ಬಳಸಲಾಗುವ ಒಟ್ಟು ಸ್ಪುಟ್ನಿಕ್​ ವಿ ಲಸಿಕೆಗಳಲ್ಲಿ ಶೇ.65 ರಿಂದ 70 ರಷ್ಟು ಮೇಡ್​ ಇನ್​ ಇಂಡಿಯಾ ಆಗಲಿವೆ ಎಂದು ರಷ್ಯಾಗೆ ಭಾರತದ ಎನ್ವಾಯ್​ ಆಗಿರುವ ಅಂಬಾಸಿಡಾರ್ ಡಿ.ಬಿ. ವೆಂಕಟೇಶ್ ವರ್ಮ ಹೇಳಿದ್ದಾರೆ.

ರಷ್ಯಾದ ಸೇಂಟ್​ ಪೀಟರ್ಸ್​ಬರ್ಗ್​ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವರ್ಮ, ಈಗಾಗಲೇ ಭಾರತಕ್ಕೆ 1,50,000 ಡೋಸ್​ ಮತ್ತು 60,000 ಡೋಸ್​ ಸಿದ್ಧ ಲಸಿಕೆಗಳನ್ನು ಎರಡು ಕಂತುಗಳಲ್ಲಿ ರಷ್ಯಾ ಪೂರೈಸಿದೆ. ಮೇ ಅಂತ್ಯಕ್ಕೆ ಇನ್ನೂ 3 ಮಿಲಿಯನ್ ಡೋಸ್​ಗಳನ್ನು ಬಲ್ಕ್​​ನಲ್ಲಿ ಪೂರೈಸಲಿದೆ ಎಂದರು. “ಇವನ್ನು ಭಾರತದಲ್ಲೇ ಫಿಲ್​ ಮಾಡಲಾಗುವುದು. ಅದನ್ನು ಫಿಲ್ ಅಂಡ್ ಫಿನಿಶ್​ ಎಂದು ಕರೆಯುತ್ತಾರೆ. ಜೂನ್​ನಲ್ಲಿ ಈ ಸಂಖ್ಯೆಯು 5 ಮಿಲಿಯನ್​ಗೆ ಏರಲಿದೆ. ಮತ್ತು ಆಗಸ್ಟ್​​ನಲ್ಲಿ ಭಾರತದಲ್ಲೇ ಉತ್ಪಾದನೆ ಆರಂಭವಾಗಲಿದೆ” ಎಂದಿದ್ದಾರೆ.

ಇದನ್ನೂ ಓದಿ: 17 ವರ್ಷದ ಬಾಲಕ ಬಲಿ… ಕರೊನಾಗಿಂತ ಮಾರಕವಾದ ಪೊಲೀಸರ ಲಾಠಿ !

“ಸ್ಪುಟ್ನಿಕ್​ ಲಸಿಕೆಯನ್ನು ಭಾರತದಲ್ಲಿ ಮೂರು ಹಂತಗಳಲ್ಲಿ ಒದಗಿಸಲಾಗುತ್ತಿದೆ. ಮೊದಲನೆಯದಾಗಿ, ರಷ್ಯಾದಿಂದ ಪೂರ್ಣ ಸಿದ್ಧವಾಗಿ ಪೂರೈಕೆ – ಅದು ಈಗಾಗಲೇ ಶುರುವಾಗಿದೆ. ಎರಡನೆಯದಾಗಿ ಆರ್​ಡಿಐಎಫ್​ಅನ್ನು ಬಲ್ಕ್​ನಲ್ಲಿ ಭಾರತಕ್ಕೆ ಕಳುಹಿಸಲಾಗುವುದು. ಅದು ಬಳಕೆಗೆ ಸಿದ್ಧವಾಗಿರುತ್ತದೆ, ಆದರೆ, ಪ್ರತ್ಯೇಕ ಬಾಟಲಿಗಳಿಗೆ ಭಾರತದಲ್ಲಿ ತುಂಬಲಾಗುತ್ತದೆ. ಮೂರನೆಯದಾಗಿ ಇಲ್ಲೇ ಉತ್ಪಾದನೆಯಾಗುತ್ತದೆ” ಎಂದಿದ್ದಾರೆ.

“ಮತ್ತೊಂದು ಒಂದೇ ಡೋಸ್​ ಲಸಿಕೆಯಾದ ‘ಸ್ಪುಟ್ನಿಕ್ ಲೈಟ್​’ಅನ್ನು ಒದಗಿಸಲೂ ರಷ್ಯಾ ಪ್ರಸ್ತಾವನೆ ನೀಡಿದೆ. ಭಾರತದಲ್ಲಿ ಅದಕ್ಕೆ ನಿಯಂತ್ರಕ ಅನುಮೋದನೆಗಳು ಇನ್ನೂ ಪೂರ್ಣವಾಗಿಲ್ಲ. ಕಾನೂನುರೀತ್ಯ ಅನುಮೋದನೆ ಸಿಕ್ಕ ಮೇಲೆ ಅದೂ ಕೂಡ ಭಾರತ ಮತ್ತು ರಷ್ಯಾದ ನಡುವಣ ಸಹಕಾರದ ಕ್ಷೇತ್ರವಾಗಲಿದೆ” ಎಂದು ವರ್ಮ ಹೇಳಿದ್ದಾರೆ. ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ನಿರ್ವಹಿಸುತ್ತಿರುವ ಡಾ.ರೆಡ್ಡೀಸ್​ ಲ್ಯಾಬರೇಟರೀಸ್ ಮೇ14 ರಂದು ಅದನ್ನು ಅಧಿಕೃತವಾಗಿ ಲಾಂಚ್​ ಮಾಡಿದೆ. ಅದರ ಬೆಲೆಯು ಡೋಸ್​ಗೆ 948 ರೂ. ಪ್ಲಸ್​ ಜಿಎಸ್​ಟಿ ಆಗಿರಲಿದೆ ಎನ್ನಲಾಗಿದೆ. (ಏಜೆನ್ಸೀಸ್)

ರಾಜ್ಯದಲ್ಲಿ ಕರೊನಾ ಆರ್​​ನಾಟ್​ ವ್ಯಾಲ್ಯೂ ಇಳಿಕೆ… ಹರಡುವಿಕೆ ಪ್ರಮಾಣ ಕುಸಿತ

ಭವಾನಿಪುರದಿಂದ ಮತ್ತೆ ಸ್ಪರ್ಧಿಸಲಿದ್ದಾರೆ ಮಮತಾ ಬ್ಯಾನರ್ಜಿ

ಅರ್ಧದಷ್ಟು ಭಾರತೀಯರು ಮಾಸ್ಕ್​ ತೊಡುತ್ತಿಲ್ಲ! ಶೇ.7 ಜನ ಸರಿಯಾಗಿ ತೊಡುತ್ತಿದ್ದಾರೆ!

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…