More

    ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆಯಲ್ಲಿ ಪಾಕಿಸ್ತಾನದ ಮೇಲೆ ‘ಡಿ-ಕಂಪನಿ’ ಪ್ರಹಾರ ನಡೆಸಿದ ಭಾರತ

    ನವದೆಹಲಿ: ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್​ (ಎಫ್​ಎಟಿಎಫ್​) ತೂಗುಗತ್ತಿ ಪಾಕಿಸ್ತಾನದ ಮೇಲೆ ತೂಗುತ್ತಿದೆ. ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆ ನಡೆಯುತ್ತಿದ್ದು, ಅಲ್ಲಿ ಪಾಕಿಸ್ತಾನ ಕೇಂದ್ರಿತ ಡಿ-ಕಂಪನಿ ವಿಚಾರವನ್ನು ಭಾರತ ಪ್ರಸ್ತಾಪಿಸಿದೆ. ಸಂಘಟಿತ ಅಪರಾಧ ಮತ್ತು ಉಗ್ರ ಚಟುವಟಿಕೆಗಳ ಪಾಕ್ ಸಿಂಡಿಕೇಟ್​ನ ಮುಖವನ್ನು ಭಾರತ ಅನಾವರಣಗೊಳಿಸಿದೆ.

    ವಿಶ್ವಸಂಶ್ಥೆಯ ಭದ್ರತಾ ಸಮಿತಿಯ ಉನ್ನತ ಮಟ್ಟ ಮುಕ್ತ ಚರ್ಚೆಯ ವೇಳೆ ಭಾರತದ ಪ್ರತಿನಿಧಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ನಮ್ಮ ಗಡಿಯ ಉದ್ದಗಲಕ್ಕೂ ಪ್ರಾಯೋಜಿತ ಭಯೋತ್ಪಾದನೆ ನಡೆಯುತ್ತಿದೆ. ಈ ರೀತಿಯ ಭಯೋತ್ಪಾದನೆಗೆ ಒಳಗಾಗುತ್ತಿರುವ ಸಂತ್ರಸ್ತ ದೇಶ ನಮ್ಮದು. ಟ್ರಾನ್ಸ್​ನ್ಯಾಷನಲ್​ ಆರ್ಗನೈಸ್ಡ್​ ಕ್ರೈಮ್ ಆ್ಯಂಡ್ ಟೆರರಿಸಂ ನಡುವೆ ಇರುವ ಭಯಾನಕ ಕೊಂಡಿಯ ನೇರ ಅನುಭವ ಭಾರತಕ್ಕೆ ಆಗಿದೆ ಎಂಬ ವಿಚಾರವನ್ನು ಸಾಕ್ಷಿ ಸಮೇತ ವಿವರಿಸಿದ್ದಾರೆ.

    ಇದನ್ನೂ ಓದಿ: ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ಗೆ ಮುಳುವಾಗುತ್ತಾ ‘ನಯಾ ಪಾಕಿಸ್ತಾನ್​’ ನಕ್ಷೆ?

    ಪಾಕಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿರುವ ದಾವೂದ್ ಇಬ್ರಾಹಿಂ ನೇತೃತ್ವದ ಡಿ-ಕಂಪನಿ ಒಂದು ಆರ್ಗನೈಸ್ಡ್ ಕ್ರೈಮ್ ಸಿಂಡಿಕೇಟ್ ಎಂಬುದನ್ನೂ ಭಾರತ ಉಲ್ಲೇಖಿಸಿದೆ. ಮಾದಕ ವಸ್ತು, ಚಿನ್ನ ಕಳ್ಳಸಾಗಣೆಯಿಂದ ಹಿಡಿದು ಅಕ್ರಮ ಶಸ್ತ್ರಾಸ್ತ್ರ ಸಾಗಣೆ, ಅದೇ ರೀತಿ 1993ರ ಮುಂಬೈ ಸರಣಿ ಸ್ಫೋಟದಂತಹ ಕುಕೃತ್ಯಗಳಲ್ಲಿ ಡಿ-ಕಂಪನಿ ನೇರವಾಗಿ ಭಾಗಿಯಾಗಿದೆ. ಮುಂಬೈ ಸರಣಿ ಸ್ಫೋಟದಲ್ಲಿ 250ಕ್ಕೂ ಹೆಚ್ಚು ಮುಗ್ದರು ಪ್ರಾಣ ಕಳೆದುಕೊಂಡಿದ್ದಾರೆ. ಅನೇಕರ ಬದುಕಿಗೆ ಆದ ಹಾನಿಯ ಪ್ರಮಾಣ ಇನ್ನೂ ಅಧಿಕ. ಇಷ್ಟಾಗ್ಯೂ, ಆತನಿಗೆ ಮತ್ತು ಆತನ ಕಂಪನಿಗೆ ಪಾಕಿಸ್ತಾನ ರಾಜಾಶ್ರಯ ನೀಡಿದೆ.

    ಇದನ್ನೂ ಓದಿ: ಗುಜರಾತ್​ನ ಜುನಾಗಢ್​ ತನ್ನದೆನ್ನಲು ಪಾಕಿಸ್ತಾನಕ್ಕೆ ಧೈರ್ಯ ನೀಡಿದ್ದು ಈ ವಿದ್ಯಮಾನ; ಜನರೇ ಬುದ್ಧಿ ಕಲಿಸಿದ್ದು ಹೇಗೆ?

    ಉಗ್ರ ನಿಗ್ರಹದ ವಿಚಾರದಲ್ಲಿ ಪಾಕಿಸ್ತಾನ ವಿಶ್ವಸಂಸ್ಥೆಯ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುತ್ತಿಲ್ಲ. ಮೇಲ್ನೋಟಕ್ಕೆ ಸುಳ್ಳು ಹೇಳುತ್ತ ಅದು ಅಕ್ರಮ ಶಸ್ತ್ರಾಸ್ತ್ರಗಳ ಸಾಗಣೆ, ಮಾದಕ ವಸ್ತು ಕಳ್ಳಸಾಗಣೆ, ಉಗ್ರರ ನೆಲೆಯಾಗಿ ರೂಪುಗೊಂಡಿದೆ. ಹೀಗಾಗಿ ಎಫ್​ಎಟಿಎಫ್​ನಂತಹ ಸಂಸ್ಥೆಗಳೊಂದಿಗೆ ವಿಶ್ವಸಂಸ್ಥೆಯ ಸಹಕಾರ ಇನ್ನಷ್ಟು ಹೆಚ್ಚಾಗಬೇಕು. ಜಾಗತಿಕವಾಗಿ ಭಯೋತ್ಪಾದನೆ ನಿಗ್ರಹ, ಟೆರರ್ ಫಂಡಿಂಗ್ ಮುಂತಾದವುಗಳಿಗೆ ತಡೆ ಹಾಕಬೇಕು ಎಂದು ಭಾರತ ಆಗ್ರಹಿಸಿದೆ. (ಏಜೆನ್ಸೀಸ್)

    ರಫೆಲ್​ ಸ್ಕ್ವಾಡ್ರನ್​ ​ನಲ್ಲಿದ್ದವರು ಏರ್​ಇಂಡಿಯಾ ಪೈಲಟ್​ ಕ್ಯಾಪ್ಟನ್​ ದೀಪಕ್ ಸಾಠೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts