More

    ಸರ್ಕಾರ ಆರೋಗ್ಯ ಸೇತು ಆ್ಯಪ್ಅನ್ನು ಕಡ್ಡಾಯಗೊಳಿಸಲಿದೆಯೆ?

    ನವದೆಹಲಿ: ಜನರ ಖಾಸಗಿತನ ಮತ್ತು ಕಣ್ಗಾವಲಿನ ಆತಂಕದ ಮಧ್ಯೆಯೇ ಆರೋಗ್ಯ ಸೇತು ಆ್ಯಪ್​​ ಅಳವಡಿಕೆಯನ್ನು ದೇಶಾದ್ಯಂತ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸದ್ಯ ಈ ಕುರಿತು ಆಂತರಿಕ ಚರ್ಚೆಗಳು ನಡೆದಿವೆಯಾದರೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.

    ದೇಶದಲ್ಲಿ ಕರೊನಾ ಪಿಡುಗು ಹಬ್ಬಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಸೋಂಕಿತರು ಪತ್ತೆಯಾಗುತ್ತಲೇ ಅವರ ಟ್ರಾವೆಲ್​ ಹಿಸ್ಟರಿ, ಪ್ರೈಮರಿ ಕಾಂಟ್ಯಾಕ್ಟ್​ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್​ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಆದರೆ, ಒಮೊಮ್ಮೆ ಈ ಮಾಹಿತಿ ದಾರಿತಪ್ಪಿಸುವ ರೀತಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸೇತು ಆ್ಯಪ್​ ಅನ್ನು ರೂಪಿಸಲಾಗಿದೆ.

    ಈ ಆ್ಯಪ್​ ಅನ್ನು ಅಳವಡಿಸಿಕೊಂಡ ವ್ಯಕ್ತಿ ಎಲ್ಲೆಲ್ಲಿ ಓಡಾಡಿದ್ದರು ಎಂಬುದು ಕ್ಷಣಾರ್ಧದಲ್ಲಿ ತಿಳಿಯುತ್ತದೆ. ಅಲ್ಲದೆ, ಈ ಆ್ಯಪ್​ ಹೊಂದಿರುವ ವ್ಯಕ್ತಿ ಕರೊನಾ ಸೋಂಕಿತನಾಗಿದ್ದರೂ ಆ ಬಗ್ಗೆ ತಕ್ಷಣವೇ ಮಾಹಿತಿ ನೀಡಿ, ಆರೋಗ್ಯವಂತರಿಗೆ ಎಚ್ಚರಿಕೆಯಿಂದ ಇರಲು ಸೂಚಿಸುತ್ತದೆ. ಈ ಎಲ್ಲ ಕಾರಣಗಳಿಗಾಗಿ ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಆರೋಗ್ಯ ಸೇತು ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.

    VIDEO| ಮರಿ ಚಿರತೆಗಳ ಸ್ವಚ್ಛಂದ ಆಟ ನೋಡಿದರೆ ನಿಮ್ಮ ಮುಖದಲ್ಲಿ ನಗು ಮೂಡುವುದು ಗ್ಯಾರಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts