More

    ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ಗೇರಲು ಭಾರತಕ್ಕೆ ಇನ್ನೂ 4 ಗೆಲುವು ಅಗತ್ಯ

    ನವದೆಹಲಿ: ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಅಮೋಘ ಗೆಲುವು ದಾಖಲಿಸಿದ ಸಾಧನೆಯ ನೆರವಿನಿಂದ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) 2ನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಸಲವಾಗಿದೆ. ನ್ಯೂಜಿಲೆಂಡ್ ತಂಡ ಪಾಕ್ ವಿರುದ್ಧದ ಮೊದಲ ಟೆಸ್ಟ್ ಗೆದ್ದ ಹೊರತಾಗಿಯೂ 3ನೇ ಸ್ಥಾನದಲ್ಲೇ ಉಳಿದುಕೊಂಡಿದ್ದರೆ, ಆಸೀಸ್ ಸೋಲಿನ ನಡುವೆಯೂ ಅಗ್ರಸ್ಥಾನ ಕಾಯ್ದುಕೊಂಡಿದೆ.

    ಕರೊನಾ ಹಾವಳಿಯಿಂದಾಗಿ ಡಬ್ಲ್ಯುಟಿಸಿಯ ಕೆಲ ಸರಣಿ ರದ್ದು-ಮುಂದೂಡಿಕೆಯಾದ ಬಳಿಕ ಐಸಿಸಿ ಅಂಕಪಟ್ಟಿಯಲ್ಲಿ ಶೇಕಡಾವಾರು ಆಧಾರದಲ್ಲಿ ಸ್ಥಾನ ನಿರ್ಣಯ ಮಾಡುತ್ತಿದೆ. ಅದರಂತೆ ಭಾರತ ಗರಿಷ್ಠ 390 ಅಂಕ ಹೊಂದಿದ್ದರೂ 2ನೇ ಸ್ಥಾನದಲ್ಲಿದೆ. ಕಿವೀಸ್ ತಂಡ (360) ಅಗ್ರಸ್ಥಾನಿ ಆಸೀಸ್‌ಗಿಂತ (322) ಅಂಕ ಹೊಂದಿದ್ದರೂ 3ನೇ ಸ್ಥಾನದಲ್ಲಿದೆ. ಶೇಕಡಾವಾರು ಅಂಕಗಳಿಕೆ ಲೆಕ್ಕಾಚಾರದಲ್ಲಿ ಆಸೀಸ್ (ಶೇ. 76.7) ಮುಂದಿದ್ದರೆ, ಭಾರತ (72.2) ಮತ್ತು ಕಿವೀಸ್ (66.7) ನಂತರದ ಸ್ಥಾನದಲ್ಲಿವೆ.

    ಇದನ್ನೂ ಓದಿ: ಯುವರಾಜ್ ಸಿಂಗ್ ಕ್ರಿಕೆಟ್‌ಗೆ ಮರಳದಂತೆ ತಡೆಯೊಡ್ಡಿದ ಬಿಸಿಸಿಐ

    ಅಗ್ರ 2 ತಂಡಗಳ ನಡುವೆ ಮುಂದಿನ ವರ್ಷ ಜೂನ್‌ನಲ್ಲಿ ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ವಿಜೇತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟವೇರಲಿದೆ. ಡಬ್ಲ್ಯುಟಿಸಿಯಲ್ಲಿರುವ 9 ತಂಡಗಳು ತಲಾ 6 ಟೆಸ್ಟ್ ಸರಣಿ ಆಡಬೇಕಾಗಿದ್ದು, ಪ್ರತಿ ಸರಣಿಗೆ 120ರಂತೆ ಒಟ್ಟು 720 ಅಂಕಗಳು ಪಣಕ್ಕಿವೆ. ಪ್ರತಿ ಸರಣಿಯಲ್ಲಿ ಕನಿಷ್ಠ 2ರಿಂದ ಗರಿಷ್ಠ 5 ಟೆಸ್ಟ್ ಪಂದ್ಯಗಳಿರಬಹುದಾಗಿದೆ.

    ಆದರೆ ಈ ಬಾರಿ ಕರೊನಾ ಹಾವಳಿಯಿಂದ ಎಲ್ಲ ತಂಡಗಳು ತಲಾ 6 ಸರಣಿ ಆಡಿ ಮುಗಿಸುವುದು ಅನುಮಾನವೆನಿಸಿದ್ದು, ಯಾವುದಾದರು ಸರಣಿ ರದ್ದುಗೊಂಡರೆ ಅದನ್ನು ಡ್ರಾ ಎಂದು ಪರಿಗಣಿಸಿ ಅಂಕ ಹಂಚಲಾಗುತ್ತದೆ. ಹೀಗಾಗಿ ಈ ಬಾರಿ, ಆಡಿದ ಸರಣಿಗಳ ಶೇಕಡಾವಾರು ಅಂಕ ಗಳಿಕೆ ಆಧಾರದಲ್ಲಿ ಸ್ಥಾನ ನಿರ್ಣಯ ಮಾಡಲಾಗುತ್ತಿದೆ.

    ಇದನ್ನೂ ಓದಿ: ಐಸಿಸಿಯಿಂದ ಟಿಕ್‌ಟಾಕ್ ಪ್ರಶಸ್ತಿ ಗೆದ್ದ ವಾರ್ನರ್! ಚಾಹಲ್‌ಗೂ ಪಾಲು ಕೊಡ್ತಾರಂತೆ!

    ಫೈನಲ್‌ಗೆ ನಿಕಟ ಪೈಪೋಟಿ
    ನ್ಯೂಜಿಲೆಂಡ್ ತಂಡ ಪಾಕ್ ವಿರುದ್ಧ 2-0ಯಿಂದ ಸರಣಿ ಗೆದ್ದರೆ, ಶೇಕಡಾವಾರು ಅಂಕಗಳಿಗೆ 70 ದಾಟಲಿದ್ದು, ಡಬ್ಲ್ಯುಟಿಸಿ ಫೈನಲ್‌ಗೇರುವುದು ಬಹುತೇಕ ಖಚಿತವೆನಿಸುತ್ತದೆ. ಆಗ ಫೈನಲ್‌ನ ಮತ್ತೊಂದು ಸ್ಥಾನಕ್ಕಾಗಿ ಭಾರತ ಮತ್ತು ಆಸೀಸ್ ನಡುವೆ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ಇದರಿಂದಾಗಿ ಭಾರತ ತಂಡಕ್ಕೆ ಆಸೀಸ್ ವಿರುದ್ಧದ ಕೊನೇ ಟೆಸ್ಟ್ ಮತ್ತು ಮುಂದಿನ ವರ್ಷ ತವರಿನಲ್ಲಿ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 4 ಟೆಸ್ಟ್ ಪಂದ್ಯಗಳ ಸರಣಿ ನಿರ್ಣಾಯಕವೆನಿಸಲಿದೆ. ಉಳಿದ 6 ಟೆಸ್ಟ್‌ಗಳ ಪೈಕಿ ಕನಿಷ್ಠ 4ರಲ್ಲಿ ಜಯಿಸುವುದು ಅಗತ್ಯವೆನಿಸಿದೆ. ಅಥವಾ 3 ಜಯ, 2 ಡ್ರಾ ಮೂಲಕ ಕನಿಷ್ಠ 120 ಅಂಕ ಕಲೆಹಾಕಬೇಕಾಗಿದೆ. ಆಸೀಸ್ ತಂಡಕ್ಕೂ ಭಾರತ ವಿರುದ್ಧದ ಸರಣಿಯ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ನಿರ್ಣಾಯಕವೆನಿಸಲಿದೆ.

    ಬಿಜೆಪಿಗೆ ಸೇರ್ಪಡೆಗೊಂಡ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಎಲ್. ಶಿವರಾಮಕೃಷ್ಣನ್

    VIDEO: ಮೈದಾನದೊಳಗೆ ನುಗ್ಗಿ ಪಂದ್ಯ ನಿಲ್ಲಿಸಿದ್ದ ನಾಯಿಯನ್ನೇ ದತ್ತು ಪಡೆದ ಫುಟ್ಬಾಲ್​ ಆಟಗಾರ

    PHOTO | ನವವಿವಾಹಿತ ಚಾಹಲ್‌ಗೆ ದುಬೈನಲ್ಲಿ ಭರ್ಜರಿ ಔತಣ ನೀಡಿದ ಧೋನಿ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts