More

    ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದು ಒಲಿಂಪಿಕ್ಸ್ ಟಿಕೆಟ್ ಪಡೆದ ಭಾರತ: ಹಾಕಿ ಇಂಡಿಯಾದಿಂದ ಬಹುಮಾನ ಮೊತ್ತ ಘೋಷಣೆ

    ಹಾಂಗ್‌ರೆೌ: ಸತತ ಏಳನೇ ಪಂದ್ಯಕ್ಕೆ ಗೆಲುವಿನ ಓಟ ವಿಸ್ತರಿಸಿದ ಭಾರತದ ಪುರುಷರ ಹಾಕಿ ತಂಡ ಏಷ್ಯಾಡ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ. ಇದರೊಂದಿಗೆ ಹರ್ಮಾನ್‌ಪ್ರೀತ್ ಸಿಂಗ್ ಬಳಗ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರಪ್ರವೇಶವನ್ನೂ ಒಲಿಸಿಕೊಂಡಿದೆ. ಭಾರತ ೈನಲ್ ಪಂದ್ಯದಲ್ಲಿ 2018ರ ಚಾಂಪಿಯನ್ ಜಪಾನ್ ತಂಡವನ್ನು 5-1 ರಿಂದ ಬಗ್ಗು ಬಡಿಯಿತು. ಈ ಮೂಲಕ ಕೂಟದಲ್ಲಿ 4ನೇ ಬಾರಿಗೆ ಸ್ವರ್ಣ (1966, 1998, 2014, 2023) ಪದಕ ಜಯಿಸಿತು. ಭಾರತದ ಪರ ನಾಯಕ ಹರ್ಮಾನ್‌ಪ್ರೀತ್ ಸಿಂಗ್ (32, 59ನೇ ನಿಮಿಷ) ಎರಡು ಮತ್ತು ಮನ್‌ಪ್ರೀತ್ ಸಿಂಗ್ (25), ಅಮಿತ್ ರೋಹಿದಾಸ್ (37), ಅಭಿಷೇಕ್ (48) ತಲಾ ಒಂದು ಗೋಲು ಸಿಡಿಸಿದರು.

    41: ಭಾರತ ಹಾಕಿ ತಂಡ 41 ವರ್ಷಗಳ ಬಳಿಕ ಒಲಿಂಪಿಕ್ಸ್ (ಕಂಚು), ಕಾಮನ್ವೆಲ್ತ್ (ಬೆಳ್ಳಿ) ಹಾಗೂ ಏಷ್ಯನ್ ಗೇಮ್ಸ್ (ಚಿನ್ನ) ಮೂರು ಕೂಟಗಳಲ್ಲಿ ಪದಕ ಸಾಧನೆ ಮಾಡಿದೆ.

    https://x.com/ChennaiIPL/status/1710330910464414151?s=20

    ತಲಾ 5 ಲಕ್ಷ ರೂ. ಬಹುಮಾನ ಮೊತ್ತ
    ಏಷ್ಯಾಡ್‌ನಲ್ಲಿ 4ನೇ ಬಾರಿಗೆ ಸ್ವರ್ಣ ಸಂಭ್ರಮ ಕಂಡಿರುವ ಭಾರತ ಹಾಕಿ ತಂಡ ಪ್ರತಿ ಆಟಗಾರರಿಗೆ ತಲಾ 5 ಲಕ್ಷ ರೂಪಾಯಿ ಹಾಗೂ ತರಬೇತಿ ಸಿಬ್ಬಂದಿಗೆ 2.5 ಲಕ್ಷ ರೂಪಾಯಿ ಬಹುಮಾನ ಮೊತ್ತವನ್ನು ಹಾಕಿ ಇಂಡಿಯಾ ೋಷಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts