More

    ಭಾರತದ 30 ಕೋಟಿ ಜನರಿಗೆ ಹರಡುತ್ತೆ ಕರೊನಾ ವೈರಸ್​! ಎಚ್ಚರ ತಪ್ಪಿದರೆ ನೀವೂ ಬಲಿಯಾಗುತ್ತೀರಿ ಎಂದ ಪರಿಣತ

    ನವದೆಹಲಿ: ಕರೊನಾ ವೈರಸ್​ ಚೀನಾದಲ್ಲಿ ಹುಟ್ಟಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಪೂರ್ತಿ ಜಗತ್ತನ್ನೇ ಆವರಿಸಿಕೊಂಡಿರುವ ಈ ವೈರಸ್​ಗೆ 11 ಸಾವಿರಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ. ಭಾರತದಲ್ಲಿಯೂ ಸಹ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೇ ರೀತಿಯಲ್ಲಿ ಮುಂದುವರೆದರೆ ದೇಶದಲ್ಲಿರುವ 30 ಕೋಟಿ ಜನರಿಗೆ ವೈರಸ್​ ಹರಡುತ್ತದೆ ಎಂದು ಪರಿಣತರೊಬ್ಬರು ತಿಳಿಸಿದ್ದಾರೆ.

    ಸೆಂಟರ್​ ಫಾರ್​ ಡಿಸೀಸ್​ ಡೈನಾಮಿಕ್ಸ್​, ಎಕಾನಾಮಿಕ್ಸ್​ ಆ್ಯಂಡ್​ ಪಾಲಿಸಿ (CDDEP)ಯ ನಿರ್ದೇಶಕರಾಗಿರುವ ರಮಣಮ್​ ಲಕ್ಷ್ಮೀನಾರಾಯಣ ಅವರು ಭಾರತದಲ್ಲಿ ಎಷ್ಟು ಜನರಿಗೆ ಕರೊನಾ ಬರಬಹುದು ಎಂದು ಅಂದಾಜಿಸಿದ್ದಾರೆ. ಯುಎಸ್​ ಮತ್ತು ಯುಕೆನಲ್ಲಿ ಕಂಡ ಸೋಂಕಿತರ ಸಂಖ್ಯೆಯ ಹೆಚ್ಚಳಿಕೆಗೆ ಹೋಲಿಸಿದರೆ ಭಾರತದಲ್ಲಿ ಒಟ್ಟು 30 ಕೋಟಿ ಜನರಿಗೆ ಸೋಂಕು ತಗುಲಬಹುದು ಎಂದು ಅವರು ತಿಳಿಸಿದ್ದಾರೆ.

    ಒಂದು ವೇಳೆ ನಾವು ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೆ ಆ ಸಂಖ್ಯೆಯನ್ನು 20 ಕೋಟಿಗೆ ಇಳಿಸಬಹುದು ಎಂದು ಅವರು ತಿಳಿಸಿದ್ದಾರೆ.

    ಪ್ರತಿ ವರ್ಷ ಒಂದಿಲ್ಲೊಂದು ಕಾಯಿಲೆ ಭಾರತದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಕರೊನಾ ಅದೆಲ್ಲಕ್ಕಿಂತ ಭಿನ್ನ. ಇದಕ್ಕೆ ಔಷಧವಿಲ್ಲವೆನ್ನುವುದು ಒಂದಾದರೆ ಇದರ ಮರಣ ಪ್ರಮಾಣವೂ ಹೆಚ್ಚು ಎನ್ನುವುದು ಇನ್ನೊಂದು ಸಮಸ್ಯೆ. ಇದು ಬಹುಬೇಗ ಒಬ್ಬರಿಂದ ಇನ್ನೊಬ್ಬರಿಗೆ ಹರಡಬಲ್ಲದ್ದಾಗಿದೆ. ಹಾಗಾಗಿ ಜನರು ಆದಷ್ಟು ಪ್ರತ್ಯೇಕವಾಗಿರುವುದೇ ಒಳಿತು ಎಂದು ಅವರು ಹೇಳಿದ್ದಾರೆ.

    ಭಾರತದಲ್ಲಿ ಸೋಂಕಿತರಿಗೆ ಚಿಕಿತ್ಸೆಯ ವ್ಯವಸ್ಥೆ ಸಿದ್ಧವಿಲ್ಲದಿದ್ದರೆ ನಾವು 20 ಲಕ್ಷದಿಂದ 25 ಲಕ್ಷದವರೆಗೆ ಸಾವನ್ನು ಕಾಣಬಹುದು. ಒಂದು ವೇಳೆ ಎಲ್ಲರಿಗೂ ಚಿಕಿತ್ಸೆ ಸರಿಯಾಗಿ ಸಿಕ್ಕಿದ್ದಾದಲ್ಲಿ ಸಾವಿನ ಸಂಖ್ಯೆ 10 ಲಕ್ಷದ ಒಳಗಾಗಬಹುದು. ಸಾಯುವವರಲ್ಲಿ ಬಹುಪಾಲು ಜನರು 60 ವರ್ಷ ಮೇಲ್ಪಟ್ಟವರಾಗಿರಲಿದ್ದಾರೆ ಎಂದು ರಮಣಮ್​ ಲಕ್ಷ್ಮೀನಾರಾಯಣ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    VIDEO| ಕೈ ತುಂಬ ಆಭರಣಗಳನ್ನಿಟ್ಟುಕೊಂಡು ಹ್ಯಾಂಡ್​ ವಾಶ್​ ಚಾಲೆಂಜ್​ ಸ್ವೀಕರಿಸಿದ ನಿರ್ದೇಶಕಿ; ಇದೆಂಥಾ ಅಸಡ್ಡೆ ಎಂದು ಪ್ರಶ್ನಿಸಿದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts