More

    ಜಿಪಿಎಸ್​ ಅಭಿಯಾನ 21ರಿ0ದ

    ಕೊಪ್ಪಳ: ಗ್ರಾಪಂ ಮಟ್ಟದಲ್ಲಿ ವಸತಿ ಯೋಜನೆ ಮನೆಗಳಿಗೆ ಜಿಪಿಎಸ್​ ಅಳವಡಿಕೆ ಅಭಿಯಾನ ಮೇ 21 ಮತ್ತು 22ರಂದು ನಡೆಯಲಿದೆ.

    ವಿವಿಧ ವಸತಿ ಯೋಜನೆಯಡಿ ಪ್ರಗತಿಯಲ್ಲಿರುವ ಮನೆಗಳನ್ನು ಪೂರ್ಣಗೊಳಿಸಲು ಹಾಗೂ ಅಪೂರ್ಣಗೊಂಡ ಮನೆಗಳ ಪ್ರತಿಯೊಬ್ಬ ಫಲಾನುಭವಿಗೆ ಗ್ರಾಪಂ ಮಟ್ಟದಲ್ಲಿ ನೋಟಿಸ್​ ಜಾರಿ ಮಾಡಿ ಪೂರ್ಣಗೊಳಿಸಲು ತಾಪಂ ಇಒಗಳಿಗೆ ತಿಳಿಸಲಾಗಿದೆ. ಗಂಗಾವತಿ ತಾಲೂಕಿನಲ್ಲಿ ಆರಂಭಿಸದೇ ಇರುವ 607, ತಳಪಾಯ 476, ಲಿಂಟಲ್​ 469, ಚಾವಣಿ 449, ಕುಕನೂರು 1252 ಆರಂಭವಾಗದ ಮನೆ, 830 ತಳಪಾಯ, 637 ಲಿಂಟಲ್​, 292 ಚಾವಣಿ, ಯಲಬುರ್ಗಾ 1365 ಆರಂಭವಾಗದ ಮನೆ, 1167 ತಳಪಾಯ, 885 ಲಿಂಟಲ್​, 404 ಚಾವಣಿ ಹಂತದಲ್ಲಿವೆ.

    ಕನಕಗಿರಿ 400 ಆರಂಭವಾಗದ ಮನೆ, 294 ತಳಪಾಯ, 204 ಲಿಂಟಲ್​, 112 ಚಾವಣಿ, ಕಾರಟಗಿ 665 ಆರಂಭವಾಗದ ಮನೆ, 550 ತಳಪಾಯ, 370 ಲಿಂಟಲ್​, 191 ಚಾವಣಿ, ಕುಷ್ಟಗಿ 659 ಆರಂಭವಾಗದ ಮನೆ, 939 ತಳಪಾಯ, ಲಿಂಟಲ್​ 678, ಚಾವಣಿ 291, ಕೊಪ್ಪಳ ತಾಲೂಕಿನಲ್ಲಿ ಆರಂಭವಾಗದ 594 ಮನೆ, 868 ತಳಪಾಯ, ಲಿಂಟಲ್​ 763, ಚಾವಣಿ ಹಂತದಲ್ಲಿ 644 ಮನೆಗಳಿವೆ. ಜಿಲ್ಲಾದ್ಯಂತ 5532 ಆರಂಭವಾಗದ ಮನೆ, 5124 ತಳಪಾಯ, 4006 ಲಿಂಟಲ್​, 2383 ಚಾವಣಿ ಹಂತದ ಮನೆಗಳಿವೆ. ಮೇ 21ರಿಂದ ಬೆಳಗ್ಗೆ 8ರಿಂದ ಗ್ರಾಪಂ ಪಿಡಿಒಗಳು ಜಿಪಿಎಸ್​ ಮಾಡಿ ಮುಂದಿನ ಕ್ರಮವಹಿಸುವರೆಂದು ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts