More

    ಕೋವಿಡ್​ 19 ಪಿಡುಗಿನ ನಡುವೆ ಸಂತಸದ ಸುದ್ದಿ, ಇನ್ನು ಚೀನಾ ತಂಟೆ ತೆಗೆದರೆ ಅದಕ್ಕೆ ತಕ್ಕ ಶಾಸ್ತಿ

    ನವದೆಹಲಿ: ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶದ ವಿಷಯವಾಗಿ ಭಾರತದೊಂದಿಗೆ ಚೀನಾ ಸದಾ ಜಟಾಪಟಿಗೆ ಇಳಿಯುತ್ತದೆ. ಅದರಲ್ಲೂ ವಿಶೇಷವಾಗಿ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಡೊಕ್ಲಾಮ್​ ಪ್ರದೇಶದಲ್ಲಿ ಅದರ ಉಪಟಳ ಮೇರೆ ಮೀರಿದೆ. ಇದನ್ನು ತಡೆಗಟ್ಟಲು ಹಾಗೂ ತಂಟೆ ತೆಗೆದರೆ ತಕ್ಷಣವೇ ಆ ಸ್ಥಳಕ್ಕೆ ಸೇನಾಪಡೆಯನ್ನು ರವಾನಿಸಲು ಅನುಕೂಲವಾಗುವಂತೆ ಭಾರತ ಇದೀಗ ಸೇತುವೆಯನ್ನು ನಿರ್ಮಿಸಿದೆ.

    40 ಟನ್​ ಭಾರವನ್ನು ತಡೆಯಬಹುದಾದ ಈ ಸೇತುವೆ ಚೀನಾದ ಪಾಲಿಗೆ ನುಂಗಲಾರದ ತುತ್ತಾಗಲಿದೆ ಇದರಿಂದಾಗಿ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧದ ವಿಚಾರದಲ್ಲಿ ಬಹುದೊಡ್ಡ ಅಡ್ಡಿಯಾಗಿ ಮಾರ್ಪಡುವ ಸಾಧ್ಯತೆ ಇದೆ ಎಂದು ರಕ್ಷಣಾ ತಜ್ಞ ನಿತಿನ್​ ಗೋಖಲೆ ಅಭಿಪ್ರಾಯಪಟ್ಟಿದ್ದಾರೆ.

    2017ರಲ್ಲಿ ಡೊಕ್ಲಾಮ್​ ವಿವಾದ ತೀವ್ರವಾಗಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ತಕ್ಷಣವೇ ಸೇನಾಪಡೆ ಹಾಗೂ ಯುದ್ಧೋಪಕರಣಗಳನ್ನು ರವಾನಿಸಲು ಭಾರಿ ಅಡಚಣೆ ಉಂಟಾಗಿತ್ತು. ಆ ಪ್ರದೇಶಕ್ಕೆ ಸಂಪರ್ಕ ಒದಗಿಸುವ ಸೇತುವೆ ಇಲ್ಲದೇ ಹೋಗಿದ್ದು ಇದಕ್ಕೆ ಕಾರಣವಾಗಿತ್ತು ಎಂದು ಅವರು ವಿವರಿಸಿದ್ದಾರೆ.

    ಭಾರತ ಮತ್ತು ಚೀನಾ ನಡುವೆ ಇರುವ 3,488 ಕಿ.ಮೀ. ಉದ್ದದ ಗಡಿ ಭಾಗದಲ್ಲಿ ಹಲವು ವಿವಾದಿತ ಪ್ರದೇಶಗಳಿವೆ. ಈ ಭಾಗವನ್ನು ನಿಖರವಾಗಿ ಗುರುತಿಸದಿರುವುದರಿಂದ, ಚೀನಾ ಯೋಧರು 600ಕ್ಕೂ ಹೆಚ್ಚು ಬಾರಿ ಅತಿಕ್ರಮಣ ಮಾಡಿದ್ದಾರೆ ಎಂದು ಭಾರತೀಯ ಸೇನಾಪಡೆಯ ವಕ್ತಾರ ಅಮನ್​ ಆನಂದ್​ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ತನ್ನೆಲ್ಲ ಗಡಿಭಾಗದಲ್ಲಿನ ಮೂಲಸೌಕರ್ಯವನ್ನು ಉತ್ತಮ ಪಡಿಸಿಕೊಳ್ಳುತ್ತಿದೆ. ಆದರೆ ಯಾವುದೇ ದೇಶವನ್ನು ಗುರಿಯಾಗಿಸಿಕೊಂಡು ಈ ಕಾರ್ಯ ಮಾಡುತ್ತಿಲ್ಲ. ಬದಲಿಗೆ ಭಾರತದ ಗಡಿಭಾಗದಲ್ಲಿ ಶತ್ರುಗಳ ಉಪಟಳ ತಡೆಗಟ್ಟಲು ತಕ್ಷಣವೇ ಕ್ರಮ ಕೈಗೊಳ್ಳುವ ಉದ್ದೇಶವನ್ನು ಹೊಂದಿದೆ. ದೇಶದ ಪೂರ್ವ ಭಾಗದಲ್ಲಿ ಇದುವರೆಗೆ 74 ಆಯಕಟ್ಟಿನ ಪ್ರದೇಶಗಳಲ್ಲಿ ಮೂಲಸೌಕರ್ಯವನ್ನು ಉತ್ತಮಪಡಿಸಲಾಗಿದೆ. ಮುಂದಿನ 20 ವರ್ಷಗಳಲ್ಲಿ ಮೂಲಸೌಕರ್ಯವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕೋವಿಡ್​ 19 ಲಾಕ್​ಡೌನ್​ ನಡುವೆಯೂ ಈ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಪತ್ರಕರ್ತ ಅರ್ನಬ್​ ಗೋಸ್ವಾಮಿ ವಿರುದ್ಧದ ಎಫ್​ಐಆರ್​ಗೆ ಸುಪ್ರೀಂ ತಡೆ: ರಕ್ಷಣೆ ನೀಡುವಂತೆ ಮುಂಬೈ ಪೊಲೀಸರಿಗೆ ಕೋರ್ಟ್​ ನಿರ್ದೇಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts