More

    ‘ಭಾರತಕ್ಕೆ ಬೇಕು ಬಾಂಬ್’: ಪೊಲೀಸರಿಗೇ ಆತಂಕ ಮೂಡಿಸಿರುವ ಸಂಸತ್​ ಭದ್ರತಾ ಉಲ್ಲಂಘನೆ ಪ್ರಕಣರದ ಮಾಸ್ಟರ್​ಮೈಂಡ್​

    ನವದೆಹಲಿ: ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಯ ಮಾಸ್ಟರ್ ಮೈಂಡ್ ಎಂದೇ ಪರಿಗಣಿಸಲಾಗಿರುವ ಲಲಿತ್ ಮೋಹನ್ ಝಾ ಅವರನ್ನು ಗುರುವಾರ ಸಂಜೆ ಬಂಧಿಸಿದ ನಂತರ, ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಪೊಲೀಸರು ತೀವ್ರ ಪರಿಶೀಲನೆಗೆ ಒಳಪಡಿಸಿದ್ದಾರೆ. ಝಾ ಅವರು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡ ವಿಷಯ ಗಾಬರಿ ಹುಟ್ಟಿಸುವಂತಿದ್ದು, ಈ ಬಗ್ಗೆ ವಿಶೇಷ ಸೆಲ್ ಸಹ ಆತಂಕ ವ್ಯಕ್ತಪಡಿಸಿದೆ.

    “ಭಾರತಕ್ಕೆ ಬೇಕಾಗಿರುವುದು ಬಾಂಬ್” ಎಂದು ಅವರು ಅಕ್ಟೋಬರ್‌ನಲ್ಲಿ ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಸ್ಟ್​ನಲ್ಲಿ ಹೇಳಿದ್ದಾರೆ.

    ಪ್ರಸ್ತುತ ದೇಶದಲ್ಲಿರುವ ಪರಿಸ್ಥಿತಿಯ ಬಗ್ಗೆ ಝಾ ಅವರು ಅಸಮಾಧಾನ ವ್ಯಕ್ತಪಡಿಸಿರುವುದು ಸೇರಿದಂತೆ ಹಲವಾರು ಪೋಸ್ಟ್‌ಗಳು ಪೊಲೀಸರ ಗಮನ ಸೆಳೆದಿವೆ.
    ಇಂತಹ ಪೋಸ್ಟ್‌ಗಳ ಹಿಂದಿನ ಚಿಂತನೆಯ ಪ್ರಕ್ರಿಯೆ ಮತ್ತು ಅವರು ಅವುಗಳನ್ನು ಹಂಚಿಕೊಂಡ ಸಂದರ್ಭದ ಬಗ್ಗೆ ಝಾ ಅವರನ್ನು ವಿಚಾರಣೆಯ ಸಮಯದಲ್ಲಿ ಪ್ರಶ್ನಿಸಲಾಗಿದೆ.

    ಒಂದು ಪೋಸ್ಟ್‌ನಲ್ಲಿ ಅವರು “ವಾಟ್ ಇಂಡಿಯಾ ನೀಡ್ಸ್​ ಎ ಬಾಂಬ್” (ಭಾರತಕ್ಕೆ ಒಂದು ಬಾಂಬ್ ಬೇಕು) ಎಂದು ಬರೆದಿದ್ದಾರೆ, ನಂತರ ಬಂಗಾಳಿ ಭಾಷೆಯಲ್ಲಿ ಸಂದೇಶದಲ್ಲಿ “ದಬ್ಬಾಳಿಕೆ, ಅನ್ಯಾಯ ಮತ್ತು ಅರಾಜಕತೆಯ ವಿರುದ್ಧ ಪ್ರಬಲ ಧ್ವನಿ ಎತ್ತಲು ಭಾರತಕ್ಕೆ ಇಂದು ಬಾಂಬ್ ಅಗತ್ಯವಿದೆ” ಎಂದು ಹೇಳಿದ್ದಾರೆ.

    ಲಲಿತ್ ಝಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಇದೇ ರೀತಿಯ ವಿವಾದಾತ್ಮಕ ಪೋಸ್ಟ್‌ಗಳನ್ನು ಮಾಡಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಮಾತನಾಡುವವರನ್ನು ಅವರ ಹಿನ್ನೆಲೆಯನ್ನು ಪರಿಗಣಿಸದೆಯೇ ಕಮ್ಯುನಿಸ್ಟ್ ಎಂದು ಘೋಷಿಸುತ್ತಾರೆ ಎಂದು ನವೆಂಬರ್ 5ರ ಪೋಸ್ಟ್​ನಲ್ಲಿ ಹೇಳಿದ್ದಾರೆ,

    ಲಲಿತ್ ಝಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿನ ವಿಷಯಗಳು ಹುಬ್ಬೇರಿಸುವಂತಿದ್ದು, ಅವರ ಆನ್‌ಲೈನ್ ಚಟುವಟಿಕೆಗಳನ್ನು ವಿಶೇಷ ಸೆಲ್ ನಿಕಟವಾಗಿ ಮೇಲ್ವಿಚಾರಣೆ ಮಾಡುವಂತಾಗಿದೆ.

    ಬುಧವಾರ ನಡೆದ ಸಂಸತ್ ಭದ್ರತಾ ಉಲ್ಲಂಘನೆ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಸಭಾಂಗಣಕ್ಕೆ ಜಿಗಿದ ಇಬ್ಬರು ವ್ಯಕ್ತಿಗಳಾದ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ; ಸಂಸತ್ತಿನ ಹೊರಗೆ ಬಣ್ಣದ ಅನಿಲ ಡಬ್ಬಿಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸುತ್ತಿದ್ದ ನೀಲಂ ಆಜಾದ್ ಮತ್ತು ಅಮೋಲ್ ಶಿಂಧೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಕರಣದ ಐದನೇ ಆರೋಪಿ ಲಲಿತ್ ಝಾ ಗುರುವಾರ ದೆಹಲಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಆರನೇ ಆರೋಪಿ ಮಹೇಶ್ ಕುಮಾವತ್​ನನ್ನು ಶನಿವಾರ ಬಂಧಿಸಲಾಗಿದೆ.

    ಗಂಭೀರ ಕಳವಳಕಾರಿ ವಿಷಯ’: ಸಂಸತ್ತಿನ ಭದ್ರತಾ ಲೋಪದ ಕುರಿತು ಸಂಸದರಿಗೆ ಪತ್ರ ಬರೆದ ಸ್ಪೀಕರ್​

    ಮುಂದಿನ ವಾರ ಮಾರುಕಟ್ಟೆಗೆ 11 ಐಪಿಒಗಳು ಲಗ್ಗೆ: ಹೊಸ ಕಂಪನಿಯ ಷೇರು ಖರೀದಿಸುವವರಿಗೆ ಸುಗ್ಗಿ

    ವಿದ್ಯಾರ್ಥಿ ಜತೆ ಶಿಕ್ಷಕಿಯ ರತಿಕ್ರೀಡೆ: ಇದನ್ನು ಪತ್ತೆ ಮಾಡಲು ತಾಯಿ ಬಳಸಿದ ಟ್ರ್ಯಾಕಿಂಗ್ ಆ್ಯಪ್​ ಯಾವುದು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts