More

    26 ರಫೇಲ್ ಮೆರೈನ್​ ಜೆಟ್‌ಗಳ ಖರೀದಿ ಪ್ರಕ್ರಿಯೆ ಶುರು: ಫ್ರಾನ್ಸ್​ಗೆ ಪತ್ರ ರವಾನಿಸಿದ ಭಾರತ

    ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ನೌಕಾಪಡೆಗೆ 26 ರಫೇಲ್ ಮೆರೈನ್ ಯುದ್ಧ ವಿಮಾನಗಳು ಮತ್ತು ಸಲಕರಣೆಗಳ ಖರೀದಿಗಾಗಿ ಭಾರತವು ಫ್ರೆಂಚ್ ಸರ್ಕಾರದೊಂದಿಗಿನ ಔಪಚಾರಿಕ ಪ್ರಕ್ರಿಯೆ ಪ್ರಾರಂಭಿಸಿದೆ. ಅದರಂತೆ ಶನಿವಾರ ಪತ್ರವನ್ನು ಮನವಿ ನೀಡಿದೆ.

    ಇದನ್ನೂ ಓದಿ: ನಮ್ಮ ಮೆಟ್ರೋಗೆ ಬಸವೇಶ್ವರರ ಹೆಸರಿಡಲು ಬೇಡಿಕೆ; ಸಿಎಂ ಜತೆ ಚರ್ಚಿಸಲಾಗುವುದು: ಎಂ.ಬಿ. ಪಾಟೀಲ

    ಕೆಲವು ದಿನಗಳ ಹಿಂದೆ ಫ್ರೆಂಚ್ ಸರ್ಕಾರಕ್ಕೆ ಮನವಿ ಪತ್ರವನ್ನು ತಲುಪಿಸಲಾಗಿದೆ. ಅದು ಭಾರತೀಯ ವಿನಂತಿಯನ್ನು ನಿರ್ಧರಿಸುತ್ತಾರೆ. ಮುಂದಿನ ದಿನಗಳಲ್ಲಿ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ ಎಂದು ಉನ್ನತ ರಕ್ಷಣಾ ಮೂಲಗಳು ತಿಳಿಸಿವೆ.

    ಪ್ರಾನ್ಸ್​ ಗೆ ಸಲ್ಲಿಸಿರುವ ಪ್ರಸ್ತಾಪದ ಪ್ರಕಾರ ಭಾರತೀಯ ನೌಕಾಪಡೆಯು ನಾಲ್ಕು ತರಬೇತುದಾರ ವಿಮಾನಗಳೊಂದಿಗೆ 22 ಸಿಂಗಲ್​ ಆಸನದ ರಫೇಲ್ ಮೆರೈನ್ ವಿಮಾನಗಳನ್ನು ಪಡೆಯಲಾಗುತ್ತದೆ. ವಿಮಾನವಾಹಕ ನೌಕೆಗಳಾದ ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ರಫೇಲ್ ಮೆರೈನ್ ವಿಮಾನಗಳನ್ನು ಅಳವಡಿಸಲಾಗುತ್ತದೆ.

    ಪ್ರಸ್ತಾವಿತ ಒಪ್ಪಂದಕ್ಕಾಗಿ ಭಾರತೀಯ ರಕ್ಷಣಾ ಸಚಿವಾಲಯವು ಫ್ರೆಂಚ್ ಡೈರೆಕ್ಟರೇಟ್ ಜನರಲ್ ಆಫ್ ಆರ್ಮಮೆಂಟ್‌ಗೆ ವಿನಂತಿಯ ವಿವರವಾದ ಪತ್ರವನ್ನು ನೀಡಿದೆ, ಇದರಲ್ಲಿ 22 ಸಿಂಗಲ್-ಸೀಟ್ ಜೆಟ್‌ಗಳು ಮತ್ತು ನಾಲ್ಕು ಅವಳಿ ಆಸನ ತರಬೇತುದಾರರು, ಶಸ್ತ್ರಾಸ್ತ್ರಗಳು, ಸಿಮ್ಯುಲೇಟರ್, ಬಿಡಿಭಾಗಗಳು, ಸಿಬ್ಬಂದಿ ತರಬೇತಿ ಮತ್ತು ಇತರ ಪರಿಕರಗಳ ಪೂರೈಕೆ ಸೇರಿದೆ ಎಂದು ಮೂಲಗಳು ತಿಳಿಸಿವೆ.

    ಈ ವರ್ಷ ಜುಲೈನಲ್ಲಿ ಬಾಸ್ಟಿಲ್ ಡೇ ಪರೇಡ್‌ಗೆ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ಗೆ ಭೇಟಿ ನೀಡುವ ಮುನ್ನ ರಕ್ಷಣಾ ಇಲಾಖೆ ಸುಮಾರು 5.5 ಶತಕೋಟಿ ಯುರೋ(50,000 ಕೋಟಿ ರೂ.ಗಳ ಅಂದಾಜು ಮೊತ್ತದ ) ಮೌಲ್ಯದ ರಫೇಲ್​ ವಿಮಾನ ಪೂರೈಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
    ಯುದ್ಧವಿಮಾನ ಮತ್ತು ಜಲಾಂತರ್ಗಾಮಿ ಒಪ್ಪಂದಗಳೆರಡಕ್ಕೂ ಪೂರ್ವಭಾವಿ ಅನುಮೋದನೆ ಅಥವಾ ಅಗತ್ಯತೆಯ ಸ್ವೀಕಾರವನ್ನು ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯು ಜುಲೈ 13 ರಂದು ಪ್ಯಾರಿಸ್‌ನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್​ ಅಧ್ಯಕ್ಷ ಮ್ಯಾಕ್ರಾನ್ ಶೃಂಗಸಭೆಯ ಒಂದು ದಿನದ ಮೊದಲು ಮಾಡಿಕೊಂಡ ಒಪ್ಪಂದವಾಗಿತ್ತು.

    ವಿಮಾನವಾಹಕ ನೌಕೆಗಳಾದ ಐಎನ್​ಎಸ್ ವಿಕ್ರಮಾದಿತ್ಯ ಮತ್ತು ವಿಕ್ರಾಂತ್ ಮಿಗ್​ -29 ಯುದ್ಧ ವಿಮಾನಗಳನ್ನು ಭಾರತ ನಿರ್ವಹಿಸುತ್ತಿವೆ. ಇವೆರಡರ ಜತೆಗೆ ರಫೇಲ್‌ ವಿಮಾನಗಳ ಅಗತ್ಯವಿದೆ. ಹೀಗಾಗಿಯೇ ಭಾರತವು ಫ್ರಾನ್ಸ್‌ನಿಂದ ಒಪ್ಪಂದದ ಭಾಗವಾಗಿ ಯುದ್ಧ ವಿಮಾನಗಳ ಪೂರೈಕೆಗೆ ವಿನಂತಿಸಿದೆ.
    2016ರ ಸೆಪ್ಟೆಂಬರ್‌ನಲ್ಲಿ ಐಎಎಫ್‌ಗೆ 36 ರಫೇಲ್‌ಗಳಿಗೆ 59,000 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದ್ದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2019 ರ ಸಾರ್ವತ್ರಿಕ ಚುನಾವಣೆ ಪ್ರಚಾರದಲ್ಲಿ ಭ್ರಷ್ಟಾಚಾರ ಆರೋಪವನ್ನು ಹೊರೆಸಿದ್ದರು. ಆದರೆ ಕೇಂದ್ರ ಸರ್ಕಾಕಾರವು ಎಲ್ಲಾ ಆರೋಪಗಳನ್ನು ತಳ್ಳಿಹಾಕಿತ್ತು.

    ಭಾರತೀಯ ಪಡೆಗಳು ಮಾಲ್ಡೀವ್ಸ್ ತೊರೆಯಬೇಕಾಗಿದೆ – ಮೊಹಮದ್ ಮುಯಿಝು : ಚೀನಾದತ್ತ ವಾಲುತ್ತಿದೆಯೇ ಹಿಂದುಮಹಾಸಾಗರದ ದ್ವೀಪರಾಷ್ಟ್ರ ಮಾಲ್ಡೀವ್ಸ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts