More

    ಭಾರತೀಯ ಪಡೆಗಳು ಮಾಲ್ಡೀವ್ಸ್ ತೊರೆಯಬೇಕಾಗಿದೆ – ಮೊಹಮದ್ ಮುಯಿಝು : ಚೀನಾದತ್ತ ವಾಲುತ್ತಿದೆಯೇ ಹಿಂದುಮಹಾಸಾಗರದ ದ್ವೀಪರಾಷ್ಟ್ರ ಮಾಲ್ಡೀವ್ಸ್​?

    ಮಾಲೆ(ಮಾಲ್ಡೀವ್ಸ್): ಮಾಲ್ಡೀವ್ಸ್ “ಸಂಪೂರ್ಣ ಸ್ವತಂತ್ರ್ಯ”ವನ್ನು ಹೊಂದಲು ಉದ್ದೇಶಿಸಿದೆ. ಹೀಗಾಗಿಯೇ ದ್ವೀಪ ರಾಷ್ಟ್ರದಲ್ಲಿ ನೆಲೆಸಿರುವ ಭಾರತೀಯ ಪಡೆಗಳನ್ನು ತೊರೆಯಲು ಬಯಸುತ್ತದೆ ಎಂದು ನಿಯೋಜಿತ ಅಧ್ಯಕ್ಷ ಮೊಹಮದ್ ಮುಯಿಝು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: 50 ಒತ್ತೆಯಾಳುಗಳನ್ನು ಅಮಾನುಷವಾಗಿ ಕೊಂದ ಹಮಾಸ್!
    ಹಿಂದು ಮಹಾಸಾಗರದ ದ್ವೀಪಸಮೂಹ ಮಾಲ್ಡೀವ್ಸ್​ನಲ್ಲಿ ಇತ್ತೀಚೆಗೆ ಚುನಾವಣೆ ನಡೆಯಿತು. ಪ್ರಚಾರದ ಸಂದರ್ಭದಲ್ಲಿ ದೇಶದ ಆಂತರಿಕ ವ್ಯವಹಾರಗಳನ್ನು ಭಾರತ ನಿಯಂತ್ರಿಸುತ್ತಿದೆ. ಭಾರತೀಯ ಸೈನಿಕರನ್ನು ಇಲ್ಲಿ ನೆಲೆಸಲು ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ದೇಶದ ಸಾರ್ವಭೌಮತೆಗೆ ದಕ್ಕೆ ಬಂದಿದೆ ಎಂದು ಮುಯಿಝು ಆರೋಪಿಸಿದ್ದರು.

    ಚುನಾವಣೆಯಲ್ಲಿ ಗೆದ್ದ ಮುಯಿಝು ಅಧಿಕಾರಕ್ಕೇರಲಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ದೇಶವು ಭಾರತೀಯ ಮಿಲಿಟರಿ ನೆಲೆಯಾಗಿದ್ದು, 70 ಸೇನಾ ಸಿಬ್ಬಂದಿ ನವದೆಹಲಿ ಪ್ರಾಯೋಜಿತ ರಾಡಾರ್ ಕೇಂದ್ರಗಳು ಮತ್ತು ಕಣ್ಗಾವಲು ವಿಮಾನಗಳನ್ನು ನಿರ್ವಹಿಸುತ್ತಿದ್ದಾರೆ. ಭಾರತೀಯ ಯುದ್ಧನೌಕೆಗಳು ಮಾಲ್ಡೀವ್ಸ್‌ನ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗಲು ಸಹಾಯ ಮಾಡುತ್ತಿವೆ. ಸೇನೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಭಾರತ ಸರ್ಕಾರದೊಂದಿಗೆ ಮಾತುಕತೆ ಪ್ರಾರಂಭಿಸಿದ್ದೇವೆ. ಅವು ಈಗಾಗಲೇ ಯಶಸ್ವಿಯಾಗಿವೆ ಎಂದು ಹೇಳಿದರು.

    “ನಾವು ಪರಸ್ಪರ ಪ್ರಯೋಜನಕಾರಿಯಾದ ದ್ವಿಪಕ್ಷೀಯ ಸಂಬಂಧವನ್ನು ಬಯಸುತ್ತೇವೆ” ಭಾರತೀಯ ಸೈನಿಕ ಜಾಗದಲ್ಲಿ ಇತರ ದೇಶಗಳ ಪಡೆಗಳಿಗೆ ಅವಕಾಶ ನೀಡುವುದಿಲ್ಲ. ಚೀನಾ ಅಥವಾ ಇತರ ಯಾವುದೇ ದೇಶಗಳಿಗೆ ತಮ್ಮ ಮಿಲಿಟರಿ ಪಡೆಗಳನ್ನು ಇಲ್ಲಿಗೆ ಕರೆತರಲು ನಾನು ಅವಕಾಶ ನೀಡಲಿದ್ದೇನೆ ಎಂದು ಇದನ್ನು ಅರ್ಥೈಸಬಾರದು ಎಂದು ಅವರು ಹೇಳಿದ್ದಾರೆ.

    ಹಿಂದು ಮಹಾಸಾಗರದ ಆಯಕಟ್ಟಿನ ಜಾಗ(ಮಾಲ್ಡೀವ್ಸ್​)ಕ್ಕಾಗಿ ಚೀನಾ ಮತ್ತು ಭಾರತದ ನಡುವಿನ ಹಗ್ಗ-ಜಗ್ಗಾಟ ನಡೆದೇ ಇದೆ. ಮಾಲ್ಡೀವ್ಸ್​ ಸರ್ಕಾರಗಳು ಭಾರತ ಅಥವಾ ಚೀನಾದ ಕಡೆಗೆ ವಾಲುವುದು ಸಾಮಾನ್ಯ. ಏಷ್ಯಾದ 2ಬೃಹತ್​ ರಾಷ್ಟ್ರಗಳು ಈ ದೇಶದಲ್ಲಿ ಮೂಲಸೌಕರ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಭಾರಿ ಹೂಡಿಕೆ ಮಾಡಿವೆ, ಇನ್ನು

    ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳಾದ ಜಪಾನ್ ಮತ್ತು ಆಸ್ಟ್ರೇಲಿಯಾಗಳು ಹೆಚ್ಚುತ್ತಿರುವ ಬೀಜಿಂಗ್ ಪ್ರಭಾವವನ್ನು ಕಡಿಮೆ ಮಾಡಲು ಎದುರು ನೋಡುತ್ತಿವೆ. ಈ ಹಿಂದಿನ ಅಧ್ಯಕ್ಷ ಸೋಲಿಹ್ ದೇಶವನ್ನು ಭಾರತಕ್ಕೆ ಹತ್ತಿರವಾಗಿಸಿದ ಕಾರಣ ಅದು ಫಲ ನೀಡುವಂತೆ ತೋರುತ್ತಿತ್ತು. ಆದರೆ ಚೀನಾ ಪರ ಒಲವು ಹೊಂದಿರುವ ಮುಯಿಝು ಅಧಿಕಾರಕ್ಕೆ ಬಂದ ನಂತರ ನಿಲುವು ಬದಲಿಸಿದ್ದು, ಭಾರತದ ಹೂಡಿಕೆಗಳು, ಪರಸ್ಪರ ಸಹಕಾರ ಏನಾಗಲಿದೆ ಎಂಬ ಪ್ರಶ್ನೆ ಮೂಡಿದೆ.

    ಆ ದೇಶಕ್ಕೆ ಭಾರತೀಯರು ಪ್ರಯಾಣಿಸಿದರೆ $1,000 ಹೆಚ್ಚುವರಿ ತೆರಿಗೆ ಕಟ್ಟಲೇಬೇಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts