More

    ಭಾರತವನ್ನು ಕೊಳಕು ಎಂದು ಜರಿದ​ ಟ್ರಂಪ್: ಅಮೆರಿಕ ಅಧ್ಯಕ್ಷರ ಸಮರ್ಥನೆ ಹೀಗಿದೆ…

    ನ್ಯಾಶ್ವಿಲ್ಲೆ, ಟೆನ್ನೆಸ್ಸೀ: ಇಷ್ಟು ದಿನ ಭಾರತವನ್ನು ಹಾಡಿ ಹೊಗಳುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇದೀಗ ಭಾರತವನ್ನು ಕೊಳಕು ಎಂದು ಜರಿದಿದ್ದಾರೆ. ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಡೆಮೋಕ್ರೆಟಿಕ್​ ಪಕ್ಷದ ಎದುರಾಳಿ ಜೋ ಬಿಡೆನ್​ ಜತೆಗಿನ ಅಂತಿಮ ಹಂತದ ಅಧ್ಯಕ್ಷೀಯ ಚರ್ಚೆಯಲ್ಲಿ ಹವಾಮಾನ ಬದಲಾವಣೆ ಸಮಸ್ಯೆ ಕುರಿತು ಮಾತನಾಡುವಾಗ ಟ್ರಂಪ್​ ಭಾರತವನ್ನು ಕೊಳಕು ದೇಶ ಎಂದಿದ್ದಾರೆ.

    ಭಾರತ ಮಾತ್ರವಲ್ಲದೇ ಚೀನಾ, ರಷ್ಯಾ ಸಹ ಹೊಲಸು ಎಂದಿದ್ದಾರೆ. ಅಮೆರಿಕದೊಂದಿಗೆ ಹೋಲಿಸಿ ಇತರೆ ರಾಷ್ಟ್ರಗಳ ಎದುರು ಬೊಟ್ಟು ಮಾಡಿದ್ದಾರೆ. ಹವಾಮಾನ ಬದಲಾವಣೆ ವಿಚಾರದಲ್ಲಿ ನಮ್ಮ ರಾಷ್ಟ್ರಕ್ಕೆ ಹೋಲಿಸಿದರೆ ಭಾರತ, ಚೀನಾ ಮತ್ತು ರಷ್ಯಾ ತುಂಬಾ ಹೊಲಸಾಗಿವೆ. ನಮ್ಮಲ್ಲಿ ಶುದ್ಧವಾದ ಗಾಳಿ, ನೀರು ಮತ್ತು ಇಂಗಾಲದ ಹೊರಸೂಸುವಿಕೆಯು ಉತ್ತಮವಾಗಿದೆ. ಹೀಗಾಗಿ ಪ್ಯಾರಿಸ್​ ಒಪ್ಪಂದದಿಂದ ಹಿಂದೆ ಸರಿಯಲಾಯಿತು ಎಂದು ಸಮರ್ಥಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಮೋದಿಜೀ… ಸುಳ್​ ಹೇಳ್ಬೇಡಿ… ಬಿಹಾರಿಗಳಿಗೆ ಎಷ್ಟು ಉದ್ಯೋಗ ಕೊಟ್ಟಿದ್ದೀರಿ?

    ಇನ್ನು ಅಮೆರಿಕದಲ್ಲಿ ಕರೊನಾ ನಿರ್ವಹಣೆ ವಿಫಲತೆ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದರ ನಡುವೆಯೇ ಮೊದಲನೇ ಅಧ್ಯಕ್ಷಿಯ ಚರ್ಚೆಯಲ್ಲಿ ಭಾರತದಲ್ಲಿನ ಕರೊನಾ ಗಂಭೀರತೆಯ ಬಗ್ಗೆಯು ಮಾತನಾಡಿ, ತಮ್ಮನ್ನು ಸಮರ್ಥನೆ ಮಾಡಿಕೊಂಡಿದ್ದರು.

    ಕೈಗಾರಿಕಾಗಳಿಂದ ಈಗಾಗಲೇ ಸುಮಾರು ಒಂದು ಡಿಗ್ರಿ ಸೆಲ್ಸಿಯಸ್ (34 ಡಿಗ್ರಿ ಫ್ಯಾರನ್‌ಹೀಟ್) ಉಷ್ಣಾಂಶದಿಂದ​ ಜಗತ್ತು ಆಪತ್ತಿಗೆ ಸರಿಯುತ್ತಿದೆ. ಬರಗಳು ಮತ್ತು ಉಷ್ಣವಲಯದ ಬಿರುಗಾಳಿಗಳ ತೀವ್ರತೆ ಹೆಚ್ಚಿಸಲು ಹೀಗಿರುವ ಉಷ್ಣಾಂಶ ಸಾಕು. ಇದಕ್ಕಿಂತ ಹೆಚ್ಚಾದಲ್ಲಿ ಪರಿಣಾಮ ಇನ್ನು ಗಂಭೀರವಾಗಿರುತ್ತದೆ. ಜಾಗತಿಕ ತಾಪಮಾನ ಏರಿಕೆಯಲ್ಲಿ 2 ಡಿಗ್ರಿ ಸೆಲ್ಸಿಯಸ್​ಗಿಂತ ಕಡಿಮೆ ತಾಪಮಾನ ಗುರಿ ಹೊಂದಿದ್ದ ಅಮೆರಿಕ ಈಗಾಗಲೇ ಪ್ಯಾರಿಸ್​ ಒಪ್ಪಂದದಿಂದ ಹೊರ ನಡೆದಿದ್ದು, ಈ ಬಗ್ಗೆ ಮಾತನಾಡಿರುವ ಟಂಪ್​, ನಮ್ಮನ್ನು ತುಂಬಾ ಹೀನಾಯವಾಗಿ ನಡೆಸಿಕೊಳ್ಳಲಾಯಿತು. ಹೀಗಾಗಿ ಒಪ್ಪಂದದಿಂದ ಹಿಂದೆ ಸರಿದಿದ್ದೇವೆ ಮತ್ತು ಟ್ರಿಲಿಯನ್​ ಡಾಲರ್​ ಅನ್ನು ಸಹ ಹಿಂಪಡೆದುಕೊಂಡಿದ್ದೇವೆ ಎಂದಿದ್ದಾರೆ.

    ಇದನ್ನೂ ಓದಿ: ಮಾಜಿ ಗಂಡನಿಗೆ ತಿಂಗಳಿಗೆ 2 ಸಾವಿರ ರೂ. ಜೀವನಾಂಶ ನೀಡಲು ಮಹಿಳೆಗೆ ಕೋರ್ಟ್​ ಆದೇಶ..!

    ಇನ್ನು ಯುಎಸ್​ ಸೆಕ್ರೆಟರಿ ಮೈಕ್​ ಪೋಂಪಿಯೋ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್​ ಈಸ್ಪರ್​ ಯುಎಸ್​-ಇಂಡಿಯಾ ನಡುವಿನ ಪಾಲುದಾರಿಕೆ ಅಭಿವೃದ್ಧಿ ಕುರಿತು ಚರ್ಚಿಸಲು ಭಾರತಕ್ಕೆ ಭೇಟಿ ನೀಡುವ ಒಂದು ದಿನಕ್ಕೂ ಮುಂಚೆ ಟ್ರಂಪ್​, ಭಾರತ ಕುರಿತು ಈ ಮೇಲಿನ ಹೇಳಿಕೆ ನೀಡಿದ್ದಾರೆ.

    ಅಮೆರಿಕ ಅಧ್ಯಕ್ಷೀಯ ಚುನಾವನೆ ನವೆಂಬರ್​ 3 ರಂದು ನಡೆಯಲಿದ್ದು, ಚುನಾವಣಾ ಕಣ ರಂಗೇರಿದೆ. ಇಲ್ಲಿನ ಚುನಾವಣೆಯಲ್ಲಿ ಭಾರತೀಯರು ಸಹ ಪ್ರಮುಖ ಪಾತ್ರವಹಿಸಿದ್ದು, ಸ್ಪರ್ಧಿಗಳು ಭಾರತೀಯರ ಓಲೈಕೆಗೆ ಮುಂದಾಗಿದ್ದಾರೆ. ಆದರೆ, ಟ್ರಂಪ್​ ಇದೀಗ ಭಾರತದ ವಿರುದ್ಧ ನೀಡಿರುವ ಹೇಳಿಕೆ ಯಾವ ಪ್ರಭಾವ ಬೀರಲಿದೆ ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಕ್ರಿಕೆಟ್​ ದಿಗ್ಗಜ ಕಪಿಲ್​ ದೇವ್​ಗೆ ಹೃದಯಾಘಾತ- ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts