More

    ಈ ವರ್ಷ ಐಪಿಎಲ್ ಆಯೋಜನೆಗೆ ಯುಎಇಗಿಂತ ಭಾರತವೇ ಸುರಕ್ಷಿತ ತಾಣ!

    ನವದೆಹಲಿ: ಈ ವರ್ಷ ನಡೆಯಲಿರುವ ಐಪಿಎಲ್ 14ನೇ ಆವೃತ್ತಿಯನ್ನು ಭಾರತದಲ್ಲೇ ಆಯೋಜಿಸುವ ಸಂಕಲ್ಪ ಮಾಡಿಕೊಂಡಿರುವ ಬಿಸಿಸಿಐ, ಬದಲಿ ವಿದೇಶಿ ತಾಣವನ್ನೂ ಆಯ್ಕೆ ಮಾಡಿಕೊಂಡಿಲ್ಲ. ಭಾರತದಲ್ಲಿ ಸದ್ಯ ಕರೊನಾ ವೈರಸ್ ಹಾವಳಿ ಬಹುತೇಕ ನಿಯಂತ್ರಣಕ್ಕೆ ಬಂದಿರುವುದು ಇದಕ್ಕೆ ಕಾರಣ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಶನಿವಾರ ತಿಳಿಸಿದ್ದಾರೆ.

    ‘ಈ ವರ್ಷ ಭಾರತದಲ್ಲಿಯೇ ಐಪಿಎಲ್ ಟೂರ್ನಿ ಆಯೋಜಿಸಲು ನಾವು ಯೋಜನೆ ಸಿದ್ಧಪಡಿಸಿದ್ದೇವೆ. ಯಶಸ್ವಿಯಾಗಿ ಟೂರ್ನಿ ಆಯೋಜಿಸುವ ವಿಶ್ವಾಸವೂ ನಮಗಿದೆ. ಈಗಿನ ಪರಿಸ್ಥಿತಿಯಲ್ಲಿ ನಾವು ಐಪಿಎಲ್‌ಗೆ ಬದಲಿ ತಾಣದ ಬಗ್ಗೆಯೂ ಯೋಚಿಸುತ್ತಿಲ್ಲ. ಸದ್ಯ ಯುಎಇಗಿಂತ ಭಾರತವೇ ಟೂರ್ನಿ ನಡೆಸಲು ಸುರಕ್ಷಿತ ತಾಣವೆನಿಸಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿನ ಪರಿಸ್ಥಿತಿ ಇನ್ನಷ್ಟು ಸುಧಾರಿಸುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಅರುಣ್ ಧುಮಾಲ್ ತಿಳಿಸಿದ್ದಾರೆ.

    ಇದನ್ನೂ ಓದಿ: ಸಚಿನ್, ಕೊಹ್ಲಿ ಬಳಿಕ ಈ ಹೊಸ ಬ್ಯಾಟ್ಸ್‌ಮನ್ ಬ್ಯಾಟ್ ಪ್ರಾಯೋಜಕತ್ವಕ್ಕೆ ಎಂಆರ್‌ಎಫ್​ ಸಿದ್ಧತೆ!

    ಇತ್ತೀಚೆಗಿನ ದಿನಗಳಲ್ಲಿ ಭಾರತದಲ್ಲಿ ಹೊಸ ಕರೊನಾ ಪ್ರಕರಣಗಳ ಸಂಖ್ಯೆ ಭಾರಿ ಇಳಿಕೆ ಕಾಣುತ್ತಿದ್ದರೆ, ಅತ್ತ ಅರಬ್ ರಾಷ್ಟ್ರ ಯುಎಇಯಲ್ಲಿ ಕರೊನಾ ಪ್ರಕರಣಗಳು ಭಾರಿ ಏರಿಕೆ ಕಾಣುತ್ತಿವೆ. ಕಳೆದೊಂದು ವಾರದಿಂದ ಯುಎಇಯಲ್ಲಿ ಪ್ರತಿದಿನ ಮೂರೂವರೆ ಸಾವಿರಕ್ಕೂ ಅಧಿಕ ಹೊಸ ಕರೊನಾ ಪ್ರಕರಣಗಳು ದಾಖಲಾಗುತ್ತಿವೆ.

    ಕಳೆದ ವರ್ಷ ಭಾರತದಲ್ಲಿ ಕರೊನಾ ಹಾವಳಿ ಹೆಚ್ಚಾಗಿದ್ದರಿಂದ ಯುಎಇಯಲ್ಲಿ ಐಪಿಎಲ್ 13ನೇ ಆವೃತ್ತಿಯನ್ನು ತಡವಾಗಿ ಸೆಪ್ಟೆಂಬರ್-ನವೆಂಬರ್‌ನಲ್ಲಿ ಆಯೋಜಿಸಲಾಗಿತ್ತು. ಆಗ ಯುಎಇಯಲ್ಲಿ ಪ್ರತಿದಿನ 800ಕ್ಕೂ ಕಡಿಮೆ ಕರೊನಾ ಪ್ರಕರಣಗಳಿದ್ದವು. ಆಗ ಭಾರತದಲ್ಲಿ ಪ್ರತಿದಿನ 90 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದ್ದರೆ, ಈಗ 14 ಸಾವಿರಕ್ಕೂ ಕೆಳಕ್ಕೆ ಇಳಿದಿವೆ. ಉಭಯ ದೇಶಗಳ ಜನಸಂಖ್ಯೆಗೆ ಹೋಲಿಸಿದರೆ ಭಾರತದಲ್ಲಿ ಕರೊನಾ ಪ್ರಕರಣ ಭಾರಿ ಇಳಿಕೆಯಾಗಿದೆ ಎನ್ನಬಹುದು.

    ಭಾರತಕ್ಕೆ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ನಂ. 1 ಪಟ್ಟಕ್ಕೇರುವ ಅವಕಾಶ

    ಟೆಸ್ಟ್​ ವಿಶ್ವಕಪ್​ ಫೈನಲ್‌ಗೇರಲು ಭಾರತ-ಇಂಗ್ಲೆಂಡ್ ಪೈಪೋಟಿ, ರೇಸ್‌ನಲ್ಲಿವೆ ಆಸೀಸ್, ಕಿವೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts