More

    ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಕಂಚು; ಸೋತರೂ ಗೆದ್ದ ಲವ್ಲೀನಾ!

    ಟೋಕಿಯೋ : ಟೋಕಿಯೋ ಒಲಿಂಪಿಕ್ಸ್​ನಲ್ಲಿ ಇಂದು ನಡೆದ ಮಹಿಳೆಯರ ಬಾಕ್ಸಿಂಗ್​ ವೆಲ್ಟರ್​​ವೇಯ್ಟ್ ಕ್ಯಾಟಗರಿ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತದ ಲವ್ಲೀನಾ ಬೊರ್ಗೊಹೈನ್ ಪರಾಜಯ ಅನುಭವಿಸಿದರೂ, ಭಾರತಕ್ಕೆ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಬಾಕ್ಸಿಂಗ್ ಕ್ಷೇತ್ರದಲ್ಲಿ ಭಾರತಕ್ಕೆ ಲಭಿಸಿರುವ ಈವರೆಗಿನ ಮೂರನೇ ಪದಕವಾಗಿದ್ದು, ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಒಟ್ಟಾರೆಯಾಗಿ ಲಭಿಸಿರುವ ಮೂರನೇ ಪದಕ ಕೂಡ ಆಗಿದೆ.

    ಬಾಕ್ಸಿಂಗ್​ ವೆಲ್ಟರ್​ (64-69 ಕೆಜಿ) ವಿಭಾಗದಲ್ಲಿ ಮೊದಲ ಬಾರಿ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ ಅಸ್ಸಾಂನ ಲವ್ಲೀನಾ, ಜುಲೈ 30 ರಂದು ನಡೆದ ಕ್ವಾರ್ಟರ್​ ಫೈನಲ್ಸ್​ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಚೀನಾದ ಚೆನ್ ನೈನ್-ಚಿನ್ ಅವರನ್ನು 4:1 ಸ್ಕೋರ್​ನಿಂದ ಮಣಿಸಿ, ಸೆಮಿಫೈನಲ್ಸ್​ ತಲುಪಿದ್ದರು.

    ಇದನ್ನೂ ಓದಿ: ಅವಳಿ ಪದಕದ ಒಡತಿ ಪಿವಿ ಸಿಂಧುಗೆ ಅದ್ಧೂರಿ ಸ್ವಾಗತ

    ಇಂದು ಟೋಕಿಯೋದ ಕೋಕುಗಿಕಾನ್ ಅರೆನಾದಲ್ಲಿ ನಡೆದ ಸೆಮಿಫೈನಲ್ಸ್​ನಲ್ಲಿ ವರ್ಲ್ಡ್​ ಚ್ಯಾಂಪಿಯನ್ ಆದ ಟರ್ಕಿಯ ಬುಸೆನಾಜ್ ಸೂರ್ಮೆನೆಲಿ ಅವರನ್ನು ಎದುರಿಸಿದ ಲವ್ಲೀನಾ, 0:5 ಸ್ಕೋರ್​ನೊಂದಿಗೆ ಸೋಲನುಭವಿಸಿದರು. ಮೂರು ಸುತ್ತುಗಳ ಪಂದ್ಯದಲ್ಲಿ ತೀರ್ಪುಗಾರರ ಸರ್ವಾನುಮತದ ನಿರ್ಣಯದೊಂದಿಗೆ ಬೂಸೆನಾಜ್​ ಗೆಲುವು ಸಾಧಿಸಿದ್ದು, ಒಲಿಂಪಿಕ್ಸ್​ ಫೈನಲ್ಸ್​ ತಲುಪಿದ್ದಾರೆ. (ಏಜೆನ್ಸೀಸ್)

    ಒಲಿಂಪಿಕ್ಸ್​: ಮೊದಲನೇ ಎಸೆತದಲ್ಲೇ ಫೈನಲ್ಸ್​​ಗೆ ಆಯ್ಕೆಯಾದ ಭಾರತದ ನೀರಜ್​ ಚೋಪ್ರ

    “ನಿನ್ನ ಜೊತೆ ನಾನಿದ್ದೇನೆ” – ಶಿಲ್ಪಾ ಶೆಟ್ಟಿಗೆ ಧೈರ್ಯ ತುಂಬಿದ ಸೋದರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts