More

    ಚೀನಾ ಕಂಪನಿಗೆ ನೀಡಿದ್ದ ಗುತ್ತಿಗೆಯನ್ನು ದಿಢೀರ್ ರದ್ದು ಮಾಡಿದ ಭಾರತೀಯ ರೈಲ್ವೆ

    ನವದೆಹಲಿ: ಬೀಜಿಂಗ್ ರಾಷ್ಟ್ರೀಯ ರೈಲ್ವೆ ಸಂಶೋಧನೆ ಮತ್ತು ವಿನ್ಯಾಸ ಸಂಸ್ಥೆಗೆ ನೀಡಲಾಗಿದ್ದ ಸಿಗ್ನಲಿಂಗ್ ಕಾರ್ಯದ ಗುತ್ತಿಗೆಯನ್ನು ಭಾರತೀಯ ರೈಲ್ವೆಯ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ರದ್ದುಪಡಿಸಿದೆ.

    ಕಾನ್ಪುರ-ದೀನದಯಾಳ್ ಉಪಾಧ್ಯಾಯ ವಲಯದ 417 ಕಿಮೀ ಸಿಗ್ನಲಿಂಗ್ ಮತ್ತು ಟೆಲಿಕಮ್ಯುನಿಕೇಷನ್ ಕೆಲಸಕ್ಕೆ ಸಂಬಂಧಿಸಿದ 471 ಕೋಟಿ ರೂ. ವೆಚ್ಚದ ಈ ಗುತ್ತಿಗೆಯನ್ನು ಚೀನಾ ಕಂಪನಿಗೆ 2016ರಲ್ಲೇ ನೀಡಲಾಗಿತ್ತು. ಈವರೆಗೆ ಕಂಪನಿ ಕೇವಲ ಶೇಕಡಾ 20ರಷ್ಟು ಕೆಲಸವನ್ನು ಮಾತ್ರ ಮಾಡಿದೆ ಎಂಬ ಕಾರಣ ನೀಡಿ ದಿಡೀರನೇ ಗುತ್ತಿಗೆ ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ.

    ಇದನ್ನೂ ಓದಿ ಪಾಲ್ಗರ್​ನಲ್ಲಿ ​ಸಾಧುಗಳ ಹತ್ಯೆ: ಐವರು ಆರೋಪಿಗಳಿಗೆ ಕರೊನಾ

    ಗುತ್ತಿಗೆ ಕರಾರಿನ ಪ್ರಕಾರ ತಾಂತ್ರಿಕ ದಾಖಲೆಗಳನ್ನು ಒದಗಿಸುವುದಕ್ಕೂ ಚೀನಾ ಕಂಪನಿ ನಿರಾಕರಿಸುತ್ತಿದೆ. ಅಗತ್ಯವಿರುವ ಸ್ಥಳಗಳಲ್ಲಿ ಇಂಜಿನಿಯರ್‌ಗಳನ್ನು ಮತ್ತು ಅಧಿಕೃತ ಸಿಬ್ಬಂದಿಯನ್ನು ನಿಯೋಜಿಸುವಲ್ಲಿಯೂ ನಿರ್ಲಕ್ಷೃ ತೋರುತ್ತಿದೆ. ಈ ಬಗ್ಗೆ ಪದೇಪದೆ ಎಚ್ಚರಿಸಿದರೂ ಕಂಪನಿ ವರ್ತನೆ ಬದಲಿಸಿಕೊಂಡಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಭಾರತ ಮತ್ತು ಚೀನಾ ನಡುವೆ ಲಡಾಖ್ ಪ್ರದೇಶದಲ್ಲಿ ಘರ್ಷಣೆ ಉಂಟಾಗಿ ಭಾರತದ 20 ಯೋಧರು ಹುತಾತ್ಮರಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಚೀನಾ ವಿರುದ್ಧ ಹಂತ ಹಂತವಾಗಿ ಆರ್ಥಿಕ ಒತ್ತಡ ಹೇರುವ ಇಂತಹ ಇನ್ನೂ ಅನೇಕ ಆದೇಶಗಳನ್ನು ಹೊರಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಚೀನಾದ ಸುಮಾರು 100 ಉತ್ಪಾದನೆಗಳ ಆಮದನ್ನು ಭಾರತ ನಿರ್ಬಂಧಿಸುವ ಸಾಧ್ಯತೆ ಇದೆ. 5ಜಿ ಮಾರುಕಟ್ಟೆ ಸೇರಿದಂತೆ ದೊಡ್ಡ ಮತ್ತು ಮಹತ್ವದ ಯೋಜನೆಗಳಲ್ಲಿ ಚೀನಾ ಬಿಡ್ ಮಾಡುವುದನ್ನು ತಡೆಯುವುದಕ್ಕೂ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಮೆರಿಕ- ಚೀನಾ ಅಧ್ಯಕ್ಷರ ಸಂಬಂಧ ಬಿಚ್ಚಿಟ್ಟ ಭದ್ರತಾ ಸಲಹೆಗಾರ: ಪುಸ್ತಕ ಬಿಡುಗಡೆಗೆ ತಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts