More

    ಐಸಿಸಿ ರ‍್ಯಾಂಕಿಂಗ್ ಬ್ಲಂಡರ್: ಭಾರತ ಮಧ್ಯಾಹ್ನ ನಂ. 1, ಸಂಜೆ ಮತ್ತೆ ನಂ. 2!

    ನವದೆಹಲಿ: ಭಾರತ ತಂಡ ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಯ ವೇಳೆ ಅಗ್ರಸ್ಥಾನಕ್ಕೆ ಏರಿತು. ಆಸ್ಟ್ರೇಲಿಯಾ ವಿರುದ್ಧದ ನಾಗ್ಪುರ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ ಈ ಬಡ್ತಿ ಲಭಿಸಿದೆ ಮತ್ತು ಭಾರತ ಐಸಿಸಿಯ ಎಲ್ಲ 3 ಪ್ರಕಾರದ ರ್ಯಾಂಕಿಂಗ್​ನಲ್ಲಿ ಏಕಕಾಲದಲ್ಲಿ ಅಗ್ರಸ್ಥಾನಕ್ಕೇರಿದ ಅಪರೂಪದ ಸಾಧನೆ ಮಾಡಿದೆ ಎಂದು ಕ್ರಿಕೆಟ್ ಪ್ರೇಮಿಗಳೆಲ್ಲರೂ ಸಂಭ್ರಮಿಸಿದರು. ಆದರೆ ಸಂಜೆ 7 ಗಂಟೆಯ ವೇಳೆಗೆ ಭಾರತ ತಂಡ ಮತ್ತೆ 2ನೇ ಸ್ಥಾನಕ್ಕೆ ಕುಸಿಯಿತು ಮತ್ತು ಆಸ್ಟ್ರೇಲಿಯಾ ತಂಡ ಮತ್ತೆ ಅಗ್ರಸ್ಥಾನಕ್ಕೇರಿತು.

    ಐಸಿಸಿ ರ‍್ಯಾಂಕಿಂಗ್ ಪದ್ಧತಿ ನಿರ್ವಹಿಸುವ ತಂಡದ ಅವಾಂತರದಿಂದಾಗಿ ಭಾರತ ತಂಡ 6 ಗಂಟೆಗಳ ಕಾಲ ನಂ. 1 ಪಟ್ಟದಲ್ಲಿ ನೆಲೆಸುವಂತಾಯಿತು. ಐಸಿಸಿ ವೆಬ್​ಸೈಟ್​ನಲ್ಲಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಈ ದೋಷ ಕಾಣಿಸಿತ್ತು. ಸಾಮಾನ್ಯವಾಗಿ ಟೆಸ್ಟ್ ರ‍್ಯಾಂಕಿಂಗ್ ಪ್ರತಿ ಸರಣಿಯ ಬಳಿಕ ಪರಿಷ್ಕೃತಗೊಳ್ಳುತ್ತದೆ. ಆದರೆ ಬುಧವಾರ ಮಾತ್ರ, ಸರಣಿಯ ಮೊದಲ ಪಂದ್ಯದ ಬಳಿಕವೇ ‘ಅಪ್​ಡೇಟ್’ ಆಗಿತ್ತು. ಸಂಜೆಯ ವೇಳೆಗೆ ಐಸಿಸಿ ಈ ದೋಷ ಸರಿಪಡಿಸಿಕೊಂಡಿತು. ಆದರೆ ಭಾರತಕ್ಕೆ ಈಗಲೂ 2-0, 3-1 ಅಥವಾ ಇದಕ್ಕಿಂತ ಹೆಚ್ಚಿನ ಅಂತರದಿಂದ ಸರಣಿ ಗೆದ್ದರೆ ನಂ. 1 ಪಟ್ಟಕ್ಕೇರುವ ಅವಕಾಶವಿದೆ.

    ಬೌಲಿಂಗ್​ನಲ್ಲಿ 2ನೇ ಸ್ಥಾನಕ್ಕೇರಿದ ಅಶ್ವಿನ್
    ಐಸಿಸಿ ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್​ನಲ್ಲಿ ಆರ್. ಅಶ್ವಿನ್ 2ನೇ ಸ್ಥಾನಕ್ಕೇರಿದ್ದಾರೆ. ನಾಗ್ಪುರ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಕಬಳಿಸಿದ ಸಾಧನೆಯಿಂದ ಅಶ್ವಿನ್ ಈ ಬಡ್ತಿ ಪಡೆದಿದ್ದಾರೆ. ರವೀಂದ್ರ ಜಡೇಜಾ 16ನೇ ಸ್ಥಾನಕ್ಕೇರಿದ್ದಾರೆ. ಅಗ್ರಸ್ಥಾನದಲ್ಲಿರುವ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್​ರಿಂದ ಅಶ್ವಿನ್ ಸದ್ಯ 21 ರೇಟಿಂಗ್ ಪಾಯಿಂಟ್ ಹಿಂದಿದ್ದು, ದೆಹಲಿ ಟೆಸ್ಟ್​ನಲ್ಲೂ ಮಿಂಚಿದರೆ 2017ರ ಬಳಿಕ ಮತ್ತೆ ಅಗ್ರಸ್ಥಾನಕ್ಕೆ ಮರಳುವ ಅವಕಾಶ ಹೊಂದಿದ್ದಾರೆ.

    ಆರ್​ಸಿಬಿಗೆ ಸಾನಿಯಾ ಮೆಂಟರ್: ಬೆಂಗಳೂರಿನ ಮಹಿಳಾ ಕ್ರಿಕೆಟ್ ಫ್ರಾಂಚೈಸಿಗೆ ಟೆನಿಸ್ ತಾರೆ ಮಾರ್ಗದರ್ಶನ

    ಶಾಲೆಯಲ್ಲೇ 2ನೇ ಮದ್ವೆಯಾದ ಹೆಡ್​ ಮಾಸ್ಟರ್​ಗೆ ಮರುಕ್ಷಣವೇ ಮೊದಲ ಪತ್ನಿಯಿಂದ ಬಿಗ್​ ಶಾಕ್!​​

    ಮಾವಿನ ಹಣ್ಣುಗಳನ್ನು ಕದ್ದು ಸಸ್ಪೆಂಡ್​ ಆಗಿರುವ ಪೊಲೀಸ್​ ಅಧಿಕಾರಿಗೆ ಎದುರಾಯ್ತು ಭಾರೀ ಸಂಕಷ್ಟ! 15 ದಿನ ಡೆಡ್​ಲೈನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts