More

    ಆಮಿಷಗಳಿಗೆ ಒಳಗಾಗದೆ ಹಕ್ಕು ಚಲಾಯಿಸಿ

    ಯಲಬುರ್ಗಾ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಗಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಪಂ ಇಒ ಸಂತೋಷ ಪಾಟೀಲ್ ಹೇಳಿದರು.

    ತಾಲೂಕಿನ ಹಿರೇವಂಕಲಕುಂಟಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಮ್ಮ ನಡೆ ಮತಗಟ್ಟೆ ಕಡೆ ಜಾಗೃತಿ ಅಭಿಯಾನ ಅಂಗವಾಗಿ ಚುನಾವಣಾ ಪರ್ವ ದೇಶದ ಗರ್ವ ಧ್ವಜ ಹಾರಿಸಿ ಮಾತನಾಡಿದರು.

    ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಅಮೂಲ್ಯ ಮತವನ್ನು ಸೂಕ್ತ ವ್ಯಕ್ತಿಗೆ ಹಾಕಿ. ಇಂದಿನಿಂದ ಎಲ್ಲ ಮತಗಟ್ಟೆಗಳ ಮೇಲೆ ಧ್ವಜಾರೋಹಣ ಇರಲಿದೆ. ಎಲ್ಲರೂ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡು ಮೆ.7ರಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

    ಗ್ರಾಪಂ ಪಿಡಿಒ ಗೋಣೆಪ್ಪ ಜಿರ್ಲಿ, ಕಾರ್ಯದರ್ಶಿ ಶಿವಪ್ಪ ಪುರ್ತಗೇರಿ, ಕರವಸೂಲಿಗಾರ ಬಸಯ್ಯ ಹಿರೇಮಠ, ಬಿಎಲ್‌ಒ ಸಂಗಮೇಶ ಬಂಗಾರಿ, ಅಂಗನವಾಡಿ ಮೇಲ್ವಿಚಾರಕಿ ಲಲಿತಾ ನಾಯ್ಕ, ಸ್ವಸಹಾಯ ಗುಂಪಿನ ಗಿರಿಜಾ, ಗ್ರಂಥಪಾಲಕ ಶರಣಪ್ಪ ದಾಸರ, ಆಶಾ ಕಾರ್ಯಕರ್ತೆಯರಾದ ರೇಣುಕಾ, ಗೀತಾ, ಶಿಕ್ಷಕರಾದ ಭಾರತಿ, ಪಾರ್ವತಿ, ಲಕ್ಷ್ಮೀ, ಲಲಿತಾ, ಪ್ರಮುಖರಾದ ತಿರುಪತಿ ದಾಸರ, ಹುಸೇನ್‌ಬಾಷಾ ಅತ್ತಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts