More

     8ನೇ ಬಾರಿ ಸ್ಯಾಫ್ ಪ್ರಶಸ್ತಿ ಗೆದ್ದ ಭಾರತ ಫುಟ್‌ಬಾಲ್ ತಂಡ

    ಮಾಲೆ: ಭಾರತ ಫುಟ್‌ಬಾಲ್ ತಂಡ 8ನೇ ಬಾರಿಗೆ ದಕ್ಷಿಣ ಏಷ್ಯಾ ಫುಟ್‌ಬಾಲ್ ಫೆಡರೇಷನ್ (ಸ್ಯಾಫ್) ಟ್ರೋಫಿ ಗೆದ್ದುಕೊಂಡಿತು. ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಸುನೀಲ್ ಛೇಟ್ರಿ ಬಳಗ 3-0 ಗೋಲುಗಳಿಂದ ನೇಪಾಳ ತಂಡವನ್ನು ಮಣಿಸಿತು. 13ನೇ ಆವೃತ್ತಿಯ ಟೂರ್ನಿಯಲ್ಲಿ 12ನೇ ಫೈನಲ್ ಪಂದ್ಯವಾಡಿದ ಭಾರತ ತಂಡ ದಕ್ಷಿಣ ಏಷ್ಯಾ ವಲಯದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿತು. ಈ ಮೂಲಕ ಇಗೊರ್ ಸ್ಟಿಮ್ಯಾಕ್ ಮಾರ್ಗದರ್ಶನದಲ್ಲಿ ಭಾರತ ತಂಡ ಜಯಿಸಿದ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಇದಾಗಿದೆ.

    ಮಳೆಯ ನಡುವೆಯೂ ಆರಂಭಗೊಂಡ ಹಣಾಹಣಿಯಲ್ಲಿ ಉಭಯ ತಂಡಗಳು ಆರಂಭಿಕ ನಿಮಿಷಗಳಲ್ಲಿ ಸಮಬಲದ ಹೋರಾಟ ನಡೆಸಿದವು. ಪಂದ್ಯ 21ನೇ ನಿಮಿಷದಲ್ಲಿ ನೇಪಾಳ ತಂಡಕ್ಕೆ ಗೋಲುಗಳಿಸುವ ಅವಕಾಶ ಲಭಿಸಿದರೂ ಸೂಕ್ತವಾಗಿ ಬಳಸಿಕೊಳ್ಳಲು ವಿಲವಾಯಿತು. ಮೊದಲಾರ್ಧದ ಅಂತ್ಯಕ್ಕೆ ಉಭಯ ತಂಡಗಳು ಗೋಲುರಹಿತ ಸಮಬಲ ಸಾಧಿಸಿದವು. ದ್ವಿತೀಯಾರ್ಧದ ಆರಂಭಗೊಂಡ ಕೆಲ ಹೊತ್ತಿನಲ್ಲೇ ನಾಯಕ ಸುನೀಲ್ ಛೇಟ್ರಿ (48ನೇ ನಿಮಿಷ) ತಂಡಕ್ಕೆ ಮೊದಲ ಗೋಲು ತಂದುಕೊಟ್ಟರು. ಕೆಲಹೊತ್ತಿನಲ್ಲೇ ಸುರೇಶ್ (50) ಮತ್ತೊಂದು ಗೋಲು ದಾಖಲಿಸಿದರು. 90ನೇ ನಿಮಿಷದಲ್ಲಿ ಸಾಹಲ್ ಗೆಲುವಿನ ಅಂತರವನ್ನು ಹಿಗ್ಗಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts