More

    ಶ್ರೀಲಂಕಾ ಎದುರು ಅಂತಿಮ ಏಕದಿನ ಪಂದ್ಯದಲ್ಲಿ ಎಡವಿದ ಭಾರತ

    ಕೊಲಂಬೊ: ಸರಣಿ ಕ್ಲೀನ್‌ಸ್ವೀಪ್ ಕನಸಿನಲ್ಲಿದ್ದ ಶಿಖರ್ ಧವನ್ ನಾಯಕತ್ವ ಭಾರತ ತಂಡ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಎದುರು 3 ವಿಕೆಟ್‌ಗಳಿಂದ ಮುಗ್ಗರಿಸಿತು. ಲಂಕಾದಲ್ಲಿ ಆತಿಥೇಯರ ಎದುರು ಸತತ 11ನೇ ಜಯದ ನಿರೀಕ್ಷೆಯಲ್ಲಿದ್ದ ಭಾರತ ತಂಡ ನಿರಾಸೆ ಕಂಡಿತು. ಸೋಲಿನ ನಡುವೆಯೂ ಭಾರತ ತಂಡ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿತು. ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, 43.1 ಓವರ್‌ಗಳಲ್ಲಿ 225 ರನ್‌ಗಳಿಗೆ ಸರ್ವಪತನ ಕಂಡಿತು. ಇನಿಂಗ್ಸ್ ನಡುವೆ ಬಿದ್ದ ಮಳೆಯಿಂದಾಗಿ ಪಂದ್ಯವನ್ನು ತಲಾ 47 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಇದರಿಂದ ಡಕ್‌ವರ್ಥ್-ಲೂಯಿಸ್ ನಿಯಮದನ್ವಯ ಶ್ರೀಲಂಕಾಕ್ಕೆ 227 ರನ್ ಗುರಿ ನೀಡಲಾಯಿತು. ಆರಂಭಿಕ ಅವಿಷ್ಕಾ ಫೆರ್ನಾಂಡೊ (76) ಹಾಗೂ ಭನುಕಾ ರಾಜಪಕ್ಸಾ (65) ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ 38.4 ಓವರ್‌ಗಳಲ್ಲಿ 7 ವಿಕೆಟ್‌ಗೆ 225 ರನ್‌ಗಳಿಸಿ ಜಯದ ನಗೆ ಬೀರಿತು.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ಕೋಟ್ಯಧಿಪತಿ! ರಾಜ್ಯ ಸರ್ಕಾರಗಳಿಂದ ಕೋಟಿ ಕೋಟಿ ಬಹುಮಾನ

    ಭಾರತ ದಿಢೀರ್ ಕುಸಿತ: ನಾಯಕ ಶಿಖರ್ ಧವನ್ (13) ಹಾಗೂ ಪೃಥ್ವಿ ಷಾ (49 ರನ್, 49 ಎಸೆತ, 8 ಬೌಂಡರಿ) ಜೋಡಿ ಆರಂಭದಲ್ಲೇ ಅಬ್ಬರಿಸಿತು. ಬಳಿಕ ಪೃಥ್ವಿ ಷಾ ಹಾಗೂ ಪದಾರ್ಪಣೆ ಪಂದ್ಯವಾಡಿದ ಸಂಜು ಸ್ಯಾಮ್ಸನ್ (46 ರನ್, 46 ಎಸೆತ, 5 ಬೌಂಡರಿ, 1 ಸಿಕ್ಸರ್) ಜೋಡಿ ತಂಡದ ಮೊತ್ತ ಹಿಗ್ಗಿಸಲು ಯತ್ನಿಸಿತು. ಕರ್ನಾಟಕದ ಅನುಭವಿ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ (11) ವೈಫಲ್ಯ ಮುಂದುವರಿಸಿದರೆ, ಸೂರ್ಯಕುಮಾರ್ (40) ದೊಡ್ಡಮೊತ್ತ ಪೇರಿಸಲು ವಿಫಲರಾದರು. ಹಾರ್ದಿಕ್ ಪಾಂಡ್ಯ (19) ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಲಿಲ್ಲ. ಪಾಂಡ್ಯ ನಿರ್ಗಮನದ ಬೆನ್ನಲ್ಲೇ ಭಾರತದ ಇನಿಂಗ್ಸ್ ದಿಢೀರ್ ಕುಸಿತ ಕಂಡಿತು. ನಿತೀಶ್ ರಾಣಾ (7), ಕನ್ನಡಿಗ ಕೆ.ಗೌತಮ್ (2) ಸಿಕ್ಕ ಅವಕಾಶ ಬಳಸಿಕೊಳ್ಳಲಿಲ್ಲ. ಕೇವಲ 35 ರನ್‌ಗಳ ಅಂತರದಲ್ಲಿ ಭಾರತ 5 ವಿಕೆಟ್ ಕೈಚೆಲ್ಲಿತು.

    ಇದನ್ನೂ ಓದಿ: VIDEO: ಟೋಕಿಯೊದಲ್ಲಿ ಕ್ರೀಡಾಹಬ್ಬ ಆರಂಭ ; ಸೂರ್ಯ ಉದಯಿಸುವ ನಾಡಲ್ಲಿ ಒಲಿಂಪಿಕ್ಸ್ ಶುರು, 

    ಭಾರತ: 43.1 ಓವರ್‌ಗಳಲ್ಲಿ 225 (ಪೃಥ್ವಿ ಷಾ 49, ಸಂಜು ಸ್ಯಾಮ್ಸನ್ 46, ಸೂರ್ಯಕುಮಾರ್ ಯಾದವ್ 40, ಅಖಿಲ ಧನಂಜಯ 44ಕ್ಕೆ 3, ದುಶ್ಮಂತ ಚಮೀರ 55ಕ್ಕೆ 2), ಶ್ರೀಲಂಕಾ : 39 ಓವರ್‌ಗಳಲ್ಲಿ 7 ವಿಕೆಟ್‌ಗೆ 227 (ಭಾನುಕ ರಾಜಪಕ್ಷ 65, ಅವಿಷ್ಕಾ ೆರ್ನಾಂಡೊ 76, ರಾಹುಲ್ ಚಹರ್ 54ಕ್ಕೆ 3, ಚೇತನ್ ಸಕಾರಿಯಾ 34ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts