More

    ಶ್ರೀಲಂಕಾ ಎದುರು ಅಬ್ಬರಿಸಿದ ಭಾರತ; ಹ್ಯಾಟ್ರಿಕ್ ಟಿ20 ಸರಣಿ ಗೆದ್ದ ರೋಹಿತ್ ಶರ್ಮ ಪಡೆ

    ಧರ್ಮಶಾಲಾ: ರನ್‌ಮಳೆಗೆ ಸಾಕ್ಷಿಯಾದ ಕಾದಾಟದಲ್ಲಿ ಶ್ರೇಯಸ್ ಅಯ್ಯರ್ (74*ರನ್, 44 ಎಸೆತ, 6 ಬೌಂಡರಿ, 4 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಲವಾಗಿ ಭಾರತ ತಂಡ 2ನೇ ಟಿ20 ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು. ಸಂಜು ಸ್ಯಾಮ್ಸನ್ (39 ರನ್, 25 ಎಸೆತ, 2 ಬೌಂಡರಿ, 3 ಸಿಕ್ಸರ್) ಹಾಗೂ ರವೀಂದ್ರ ಜಡೇಜಾ (45*ರನ್, 18 ಎಸೆತ, 7 ಬೌಂಡರಿ, 1 ಸಿಕ್ಸರ್) ಕೂಡ ಅಬ್ಬರಿಸುವ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರಿಂದ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ ತಂಡ 2-0ಯಿಂದ ಚುಟುಕು ಕ್ರಿಕೆಟ್ ಸರಣಿಯನ್ನು ವಶಪಡಿಸಿಕೊಂಡಿತು.

    ರೋಹಿತ್ ಶರ್ಮ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಂಡ ಬಳಿಕ ಭಾರತಕ್ಕೆ ಇದು ಸತತ 3ನೇ ಟಿ20 ಸರಣಿ ಗೆಲುವಾಗಿದೆ. ಈ ಮೂಲಕ ಭಾರತ ಟಿ20 ಕ್ರಿಕೆಟ್‌ನಲ್ಲಿ ಸತತ 11ನೇ ಪಂದ್ಯ ಗೆಲುವು ದಾಖಲಿಸಿತು. ಎಚ್‌ಪಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಶ್ರೀಲಂಕಾ ತಂಡ ಪಥುಮ್ ನಿಸ್ಸಂಕ (75ರನ್, 53 ಎಸೆತ, 11 ಬೌಂಡರಿ) ಭರ್ಜರಿ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‌ಗೆ 183 ರನ್‌ಗಳಿಸಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಭಾರತ ತಂಡ 17.1 ಓವರ್‌ಗಳಲ್ಲಿ 3 ವಿಕೆಟ್‌ಗೆ 186 ರನ್‌ಗಳಿಸಿ ಜಯದ ನಗೆ ಬೀರಿತು.

    ಶ್ರೀಲಂಕಾ: 5 ವಿಕೆಟ್‌ಗೆ 183 (ಪಥುನ್ ನಿಸ್ಸಂಕ 75, ಧನುಷ್ಕಾ ಗುಣತಿಲಕ 38, ದಸುನ್ ಶನಕ 47*, ಭುವನೇಶ್ವರ್ ಕುಮಾರ್ 36ಕ್ಕೆ 1, ಜಸ್‌ಪ್ರೀತ್ ಬುಮ್ರಾ 24ಕ್ಕೆ 1, ಯಜುವೇಂದ್ರ ಚಾಹಲ್ 27ಕ್ಕೆ 1, ರವೀಂದ್ರ ಜಡೇಜಾ 37ಕ್ಕೆ 1), ಭಾರತ: 17.1 ಓವರ್‌ಗಳಲ್ಲಿ 3 ವಿಕೆಟ್‌ಗೆ 186 (ಶ್ರೇಯಸ್ ಅಯ್ಯರ್ 74*, ಸಂಜು ಸ್ಯಾಮ್ಸನ್ 39, ರವೀಂದ್ರ ಜಡೇಜಾ 45*, ಲಹಿರು ಕುಮಾರ 31ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts