More

    ಭಾರತ-ಲಂಕಾ ಫೈನಲ್ ಫೈಟ್: ಸಾಧಾರಣ ಮೊತ್ತದತ್ತ ಧವನ್ ಪಡೆ..

    ಕೊಲಂಬೊ: ಶ್ರೀಲಂಕಾ ವಿರುದ್ಧ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.

    ಸರಣಿಯನ್ನು ಕ್ಲೀನ್ ಸ್ವಿಪ್ ಮಾಡಲು ಧವನ್ ನೇತೃತ್ವದ ತಂಡ ಸಿದ್ಧರಾಗಿದ್ದು, ತಂಡದಲ್ಲಿ ಆರು ಪ್ರಮುಖ ಬದಲಾವಣೆ ಮಾಡಿಕೊಳ್ಳಲಾಗಿದೆ. ಸಂಜು ಸ್ಯಾಮ್ಸನ್, ನಿತಿಶ್ ರಾಣಾ, ಚೇತನ್ ಸಕಾರಿಯಾ, ಕೆ. ಗೌತಮ್ ಮತ್ತು ರಾಹುಲ್ ಚಹರ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ನವದೀಪ್ ಸೈನಿ ತಂಡವನ್ನು ಸೇರಿಕೊಂಡಿದ್ದು, ಮತ್ತಷ್ಟು ಬಲ ನೀಡಿದೆ.

    ಇದನ್ನೂ ಓದಿ:  VIDEO | ಪ್ರವಾಹಪೀಡಿತ ಪಟ್ಟಣದಿಂದ ಭಯಾನಕ ವಿಡಿಯೋ ವೈರಲ್!

    ಯುವ ಪ್ರತಿಭಾನಿತ್ವ ಆಟಗಾರರೇ ಕೂಡಿರುವ ನಮ್ಮ ತಂಡ, ಕೊನೆ ಪಂದ್ಯ ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಳ್ಳಲಿದೆ ಎಂದು ನಾಯಕ ಧವನ್ ಟಾಸ್ ಗೆದ್ದ ನಂತರ ಪ್ರತಿಕ್ರಿಯೆ ನೀಡಿದರು. ಇನ್ನು ಎದುರಾಳಿ ಶ್ರೀಲಂಕಾ ತಂಡದಲ್ಲಿಯೂ ಮೂರು ಬದಲಾವಣೆ ಮಾಡಲಾಗಿದ್ದು, ಇಶನ್ ಜಯರತ್ನೆ, ಅಖಿಲಾ ಧನಂಜಯಾ, ರಮೇಶ್ ಮೆಂಡೀಸ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಲಂಕಾ ನಾಯಕ ದಸುನ್ ಶನಕ ತಿಳಿಸಿದ್ದಾರೆ.

    ಹನ್ನೊಂದರ ಬಳಗ ( ಟೀಂ ಇಂಡಿಯಾ): ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಮನೀಷ್ ಪಾಂಡೆ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಹಾರ್ಧಿಕ್ ಪಾಂಡ್ಯ, ನಿತಿಶ್ ರಾಣಾ, ಕೆ.ಗೌತಮ್, ರಾಹುಲ್ ಚಹರ್, ನವದೀಪ್ ಸೈನಿ, ಚೇತನ್ ಸಕಾರಿಯಾ.

    ಹನ್ನೊಂದರ ಬಳಗ ( ಟೀಂ ಶ್ರೀಲಂಕಾ): ಆವಿಷ್ಕ ಫರ್ನಾಂಡೋ, ಮಿನೋದ್ ಭನುಕ, ಭನುಕ ರಾಜಪಕ್ಸಾ, ಧನಂಜಯಾ ಡಿಸಿಲ್ವಾ, ಚರಿತ್ ಅಸಲಾಂಕಾ, ಧನುಶ್ ಶನಕಾ (ನಾಯಕ), ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನೆ, ಚಮೀರಾ, ಅಖಿಲಾ ಧನಂಜಯಾ, ಪ್ರವೀಣ್ ಜಯವಿಕ್ರಮ. (ಏಜೆನ್ಸೀಸ್)

    ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಭರ್ಜರಿ ತಾಲೀಮು..

    ‘ನಾನು ಬ್ರಾಹ್ಮಣ’ ಎಂದ ರೈನಾ: ಜಾಲತಾಣದಲ್ಲಿ ಭುಗಿಲೆದ್ದ ಆಕ್ರೋಶ- ಅಭಿಮಾನಿಗಳನ್ನು ಕಳಕೊಂಡ ಕ್ರಿಕೆಟಿಗ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts