More

    ಇಂದು ಭಾರತ ಮಹಿಳಾ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವೆ 2ನೇ ಏಕದಿನ ಪಂದ್ಯ

    ಲಖನೌ: ಒಂದು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯವಾಡಿದ ಮೊದಲ ಪಂದ್ಯದಲ್ಲೇ ಮುಗ್ಗರಿಸಿರುವ ಭಾರತ ಮಹಿಳಾ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ಕೇವಲ ಅನುಭವಿ ಆಟಗಾರ್ತಿಯರ ನಿರ್ವಹಣೆಯನ್ನಷ್ಟೇ ಹೆಚ್ಚಾಗಿ ನಂಬಿಕೊಂಡಿರುವ ಭಾರತ ತಂಡಕ್ಕೆ ಯುವ ಆಟಗಾರ್ತಿಯರಿಂದ ನಿರೀಕ್ಷಿತ ಕೊಡುಗೆ ಸಿಗುತ್ತಿಲ್ಲ. ಮೊದಲ ಪಂದ್ಯದಲ್ಲಿ ಮಿಥಾಲಿ ಹಾಗೂ ಹರ್ಮಾನ್‌ಪ್ರೀತ್ ಕೌರ್ ಬ್ಯಾಟಿಂಗ್ ವಿಭಾಗದಲ್ಲಿ ಆಸರೆಯಾದರೆ, ಬೌಲಿಂಗ್ ಜೂಲನ್ ಗೋಸ್ವಾಮಿ ಮಾತ್ರ ಆಕ್ರಮಣಕಾರಿ ನಿರ್ವಹಣೆ ತೋರಿದರು. ಅಟಲ್ ಬಿಹಾರಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಲಿರುವ ಪಂದ್ಯ ಲಯ ಕಂಡುಕೊಳ್ಳುವ ದೃಷ್ಟಿಯಿಂದ ಭಾರತ ಮಹಿಳಾ ತಂಡಕ್ಕೆ ಪ್ರಮುಖವಾಗಿದೆ.

    ಇದನ್ನೂ ಓದಿ: ಕ್ರೀಡಾ ವಿಶ್ಲೇಷಕಿಯನ್ನು ವರಿಸಲಿದ್ದಾರೆ ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ..?

    ಭಾರತ ತಂಡ ಗೆದ್ದರಷ್ಟೇ ಮುಂದಿನ ಪಂದ್ಯಗಳಲ್ಲಿ ಸರಣಿ ಜಯಿಸಲು ಒತ್ತಡ ರಹಿತವಾಗಿ ಹೋರಾಡಬಹುದು. ಮುಂಬರುವ ಏಕದಿನ ವಿಶ್ವಕಪ್ ವಿಶ್ವಕಪ್ ಹಿತದೃಷ್ಟಿಯಿಂದ ತಂಡ ಸಂಯೋಜನೆಗಾಗಿ ಕೆಲವೊಂದು ಬದಲಾವಣೆಯೊಂದಿಗೆ ಮಿಥಾಲಿ ಪಡೆ ಕಣಕ್ಕಿಳಿಯಬಹುದು. ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ಮೋನಿಕಾ ಪಟೇಲ್ ಪದಾರ್ಪಣೆ ಮಾಡಿದ್ದರು. ಸರಣಿಯಲ್ಲಿ 6 ಯುವ ಆಟಗಾರ್ತಿಯರಿಗೆ ಅವಕಾಶ ನೀಡಿದ್ದು, ಹೊಸ ಆಟಗಾರ್ತಿಯರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಮತ್ತೊಂದೆಡೆ, ಸುಲಭ ಗೆಲುವಿನೊಂದಿಗೆ ಭರ್ಜರಿ ಶುಭಾರಂಭ ಕಂಡಿರುವ ದಕ್ಷಿಣ ಆಫ್ರಿಕಾ ತಂಡ ಮತ್ತೊಂದು ಗೆಲುವಿನ ಉತ್ಸಾಹದಲ್ಲಿದೆ.

    ಪಂದ್ಯ ಆರಂಭ: ಬೆಳಗ್ಗೆ 9 ಗಂಟೆಗೆ
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್-2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts