More

    ಇಂಗ್ಲೆಂಡ್ ಎದುರು ಭಾರತಕ್ಕೆ 157 ರನ್ ಜಯ, ಸರಣಿಯಲ್ಲಿ 2-1 ರಿಂದ ಮುನ್ನಡೆ

    ಲಂಡನ್: ವೇಗದ ಬೌಲರ್‌ಗಳ ಮಾರಕ ದಾಳಿ ನೆರವಿನಿಂದ ಪ್ರವಾಸಿ ಭಾರತ ತಂಡ 4ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು 157 ರನ್‌ಗಳಿಂದ ಭರ್ಜರಿ ಜಯ ದಾಖಲಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದ ಭಾರತ ತಂಡ, ಪ್ರತಿಷ್ಠಿತ ಲಾರ್ಡ್ಸ್ ಹಾಗೂ ಓವಲ್ ಮೈದಾನಗಳಲ್ಲಿ ಜಯ ದಾಖಲಿಸುವ ಮೂಲಕ ಇಂಗ್ಲೆಂಡ್ ಪ್ರವಾಸದ ಇತಿಹಾಸದಲ್ಲೇ ಐತಿಹಾಸಿಕ ಸಾಧನೆ ಮಾಡಿತು. ಅಲ್ಲದೆ, 50 ವರ್ಷಗಳ ಬಳಿಕ ಓವಲ್ ಮೈದಾನದಲ್ಲಿ ಗೆಲುವಿನ ನಗೆ ಬೀರಿತು. 1971ರಲ್ಲಿ ಕಡೇ ಬಾರಿಗೆ ಈ ಮೈದಾನದಲ್ಲಿ ಭಾರತಕ್ಕೆ ಜಯ ಒಲಿದಿತ್ತು.

    ಇದನ್ನೂ ಓದಿ: ಆರ್‌ಸಿಬಿ ತಂಡ ಕೂಡಿಕೊಂಡ ಸ್ಟಾರ್ ಬ್ಯಾಟ್ಸ್‌ಮನ್ ಎಬಿಡಿ

    ಭಾರತ ನೀಡಿದ ಬೃಹತ್ 368 ರನ್ ಗೆಲುವಿನ ಗುರಿ ಪ್ರತಿಯಾಗಿ ವಿಕೆಟ್ ನಷ್ಟವಿಲ್ಲದೆ 77 ರನ್‌ಗಳಿಂದ 5ನೇ ಹಾಗೂ ಅಂತಿಮ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ, ಉಮೇಶ್ ಯಾದವ್ (76ಕ್ಕೆ 3), ಜಸ್‌ಪ್ರೀತ್ ಬುಮ್ರಾ (67ಕ್ಕೆ 2) ಹಾಗೂ ರವೀಂದ್ರ ಜಡೇಜಾ (36ಕ್ಕೆ 2) ಮಾರಕ ದಾಳಿಗೆ ನಲುಗಿ 92.2 ಓವರ್‌ಗಳಲ್ಲಿ 210 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ ಮೊದಲ ಇನಿಂಗ್ಸ್ 191 ರನ್‌ಗಳಿಸಿದರೆ, ಪ್ರತಿಯಾಗಿ ಇಂಗ್ಲೆಂಡ್ 290 ರನ್ ಪೇರಿಸಿ 99 ರನ್ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ದಿಟ್ಟ ನಿರ್ವಹಣೆ ತೋರಿದ್ದ ಭಾರತ 466 ರನ್ ಕಲೆಹಾಕಿತ್ತು.

    ಇದನ್ನೂ ಓದಿ: ಕೋವಿಡ್ ವೈರಸ್‌ನಿಂದಾಗಿ ಅಂತಿಮ ಟೆಸ್ಟ್‌ಗೂ ಕೋಚ್ ರವಿ ಶಾಸ್ತ್ರಿ ಗೈರು

    ಭಾರತ : 191 ಮತ್ತು 466, ಇಂಗ್ಲೆಂಡ್: 290 ಮತ್ತು 92.2 ಓವರ್‌ಗಳಲ್ಲಿ 210 (ರೋರಿ ಬರ್ನ್ಸ್ 50, ಹಸೀಬ್ ಹಮೀದ್ 63, ಜೋ ರೂಟ್ 36, ಕ್ರಿಸ್ ವೋಕ್ಸ್ 18, ಉಮೇಶ್ ಯಾದವ್ 60ಕ್ಕೆ 3, ಜಸ್‌ಪ್ರೀತ್ ಬುಮ್ರಾ 27ಕ್ಕೆ 2, ರವೀಂದ್ರ ಜಡೇಜಾ 50ಕ್ಕೆ 2, ಶಾರ್ದೂಲ್ ಠಾಕೂರ್ 22ಕ್ಕೆ 2).

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts