More

    ಆರ್‌ಸಿಬಿ ತಂಡ ಕೂಡಿಕೊಂಡ ಸ್ಟಾರ್ ಬ್ಯಾಟ್ಸ್‌ಮನ್ ಎಬಿಡಿ

    ದುಬೈ: 14ನೇ ಆವೃತ್ತಿಯ ಐಪಿಎಲ್‌ನ ಭಾಗ-2ಕ್ಕೆ ದಿನಗಣನೆ ಆರಂಭಗೊಂಡಿದೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತದ ಆಟಗಾರರನ್ನು ಹೊರತುಪಡಿಸಿ ಬಹುತೇಕ ಆಟಗಾರರು ಯುಎಇಯತ್ತ ಧಾವಿಸುತ್ತಿದ್ದಾರೆ. ಎಲ್ಲ 8 ತಂಡಗಳು ಯುಎಇಯಲ್ಲಿ ಅಭ್ಯಾಸ ಆರಂಭಿಸಿವೆ. ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ ಸೋಮವಾರ ಬಯೋಬಬಲ್‌ಗೆ ಎಂಟ್ರಿಕೊಟ್ಟರು. ಮತ್ತೊಂದೆಡೆ, ಕೇನ್ ವಿಲಿಯಮ್ಸನ್ ಕೂಡ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಸೇರ್ಪಡೆಗೊಂಡರು. ಐಪಿಎಲ್ ಭಾಗ-2 ಸೆಪ್ಟೆಂಬರ್ 19 ರಿಂದ ಆರಂಭಗೊಳ್ಳಲಿದೆ. ದುಬೈ, ಶಾರ್ಜಾ ಹಾಗೂ ಅಬುಧಾಬಿಯಲ್ಲಿ ಉಳಿದ 31 ಪಂದ್ಯಗಳು ನಡೆಯಲಿವೆ.

    ಇದನ್ನೂ ಓದಿ: ಕೋವಿಡ್ ವೈರಸ್‌ನಿಂದಾಗಿ ಅಂತಿಮ ಟೆಸ್ಟ್‌ಗೂ ಕೋಚ್ ರವಿ ಶಾಸ್ತ್ರಿ ಗೈರು

    ಯುಎಇಗೆ ಆಗಮಿಸಿದ ಎಬಿಡಿ ಅವರಿಗೆ ಆರ್‌ಸಿಬಿ ತಂಡದಿಂದ ಭರ್ಜರಿ ಸ್ವಾಗತ ಕೋರಲಾಯಿತು. ತಂಡದ ವತಿಯಿಂದ ಎಬಿಡಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಾಯಿತು. ಎಬಿಡಿ ವಿಮಾನನಿಲ್ದಾಣಕ್ಕೆ ಬಂದಿಳಿದ ಫೋಟೋಗಳನ್ನು ಆರ್‌ಸಿಬಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಕುಟುಂಬ ಸಮೇತ ಆಗಮಿಸಿರುವ ಎಬಿಡಿ ಕೂಡ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಪ್ರಕಟಿಸಿದ್ದಾರೆ. ಇದೀಗ ತಂಡದೊಂದಿಗೆ ಅಭ್ಯಾಸ ಮಾಡುವುದಕ್ಕೂ ಮುನ್ನ ಎಬಿಡಿ 6 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.

    ವಿರಾಟ್ ಕೊಹ್ಲಿ ಸಾರಥ್ಯದ ಆರ್‌ಸಿಬಿ ತಂಡ ಸದ್ಯ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ 3ನೇ ಸ್ಥಾನ ಅಲಂಕರಿಸಿದೆ. ಇದುವರೆಗೂ 7 ಪಂದ್ಯಗಳನ್ನಾಡಿದ್ದು, ಪ್ಲೇಆ್ ಹಂತಕ್ಕೆ ಸನಿಹದಲ್ಲಿದೆ. ಆರ್‌ಸಿಬಿ ತಂಡ ಯುಎಇಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಎದುರಿಸಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts