More

    ಕನ್ನಡಿಗ ಕೆಎಲ್ ರಾಹುಲ್ ಅರ್ಧಶತಕದಾಟ; ಮುನ್ನಡೆಯತ್ತ ಭಾರತ

    ನಾಟಿಂಗ್‌ಹ್ಯಾಂ: ಕನ್ನಡಿಗ ಕೆಎಲ್ ರಾಹುಲ್ (57*ರನ್, 151 ಎಸೆತ, 9 ಬೌಂಡರಿ) ಅರ್ಧಶತಕದ ನೆರವಿನಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಇನಿಂಗ್ಸ್ ಮುನ್ನಡೆಯ ಹಾದಿಯಲ್ಲಿದ್ದು, 2ನೇ ದಿನದ ಆಟಕ್ಕೆ ಮಳೆ ಅಡ್ಡಿಪಡಿಸಿದೆ. ಭೋಜನ ವಿರಾಮದ ಬಳಿಕ ಮಳೆಯಿಂದಾಗಿ ಹೆಚ್ಚಿನ ಆಟ ನಡೆಯದೆ ದಿನದಾಟ ಬೇಗನೆ ಮುಕ್ತಾಯಗೊಂಡಿತು. ಟ್ರೆಂಟ್‌ಬ್ರಿಜ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 21 ರನ್‌ಗಳಿಂದ ದಿನದಾಟ ಆರಂಭಿಸಿದ ಭಾರತ ತಂಡ ಮಳೆಯಿಂದಾಗಿ ಆಟ ನಿಂತಾಗ 4 ವಿಕೆಟ್ 125 ರನ್ ಪೇರಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನೂ 58 ರನ್ ಗಳಿಸಬೇಕಿದೆ.

    ಇದನ್ನೂ ಓದಿ: ಕುಸ್ತಿಯಲ್ಲಿ ಭಾರತದ ಚಿನ್ನದ ಕನಸು ಭಗ್ನ: ಬೆಳ್ಳಿ ಪದಕ ಗೆದ್ದ ರವಿಕುಮಾರ್ ದಾಹಿಯ

    ರಾಷ್ಟ್ರೀಯ ತಂಡದಲ್ಲಿದ್ದರೂ ಕಳೆದ 2 ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಲರಾಗುತ್ತಿದ್ದ ರಾಹುಲ್, ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡರು. ತಲಾ 9 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ರಾಹುಲ್ ಹಾಗೂ ರೋಹಿತ್ (36ರನ್, 107 ಎಸೆತ, 6 ಬೌಂಡರಿ) ಜೋಡಿ ಎಚ್ಚರಿಕೆ ನಿರ್ವಹಣೆ ತೋರಿತು. ಈ ಜೋಡಿ ಮೊದಲ ವಿಕೆಟ್‌ಗೆ 97 ರನ್ ಜತೆಯಾಟವಾಡಿತು. ರಾಬಿನ್‌ಸನ್ ಎಸೆತದಲ್ಲಿ ದೊಡ್ಡ ಹೊಡೆತ ಹೊಡೆಯಲು ಮುಂದಾದ ರೋಹಿತ್ ಬೌಂಡರಿ ಲೈನ್‌ನಲ್ಲಿದ್ದ ಸ್ಯಾಮ್ ಕರ‌್ರನ್‌ಗೆ ಕ್ಯಾಚ್ ನೀಡಿದರು. ಬಳಿಕ ಜೇಮ್ಸ್ ಆಂಡರ್‌ಸನ್ ದಾಳಿಗೆ ಭಾರತ ದಿಢೀರ್ ಕುಸಿತ ಕಂಡಿತು. ಟೆಸ್ಟ್ ತಜ್ಞ ಚೇತೇಶ್ವರ ಪೂಜಾರ (4) ಡಿಆರ್‌ಎಸ್ ನೆರವಿನಿಂದ ಒಮ್ಮೆ ಪಾರಾದರೂ ಅಂತಿಮವಾಗಿ ಆಂಡರ್‌ಸನ್ ಎಸೆತದಲ್ಲಿ ಬಟ್ಲರ್‌ಗೆ ಕ್ಯಾಚ್ ನೀಡಿದರು. ಮರು ಎಸೆತದಲ್ಲೇ ನಾಯಕ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಸುತ್ತಿದರು. ಇದರ ಬೆನ್ನಲ್ಲೇ ಇಲ್ಲದ ರನ್ ಕದಿಯಲು ಹೋಗಿ ಉಪನಾಯಕ ಅಜಿಂಕ್ಯ ರಹಾನೆ (5) ರನೌಟ್ ಬಲೆಗೆ ಬಿದ್ದರು. ಕೇವಲ 15 ರನ್‌ಗಳ ಅಂತರದಲ್ಲಿ ಭಾರತ 4 ವಿಕೆಟ್ ಕೈಚೆಲ್ಲಿತು. ಒಂದೆಡೆ ಬೀಳುತ್ತಿದ್ದರೂ ಮತ್ತೊಂದೆಡೆ ರಾಹುಲ್ ತಾಳ್ಮೆಯ ಬ್ಯಾಟಿಂಗ್ ಮೂಲಕ ಗಮನಸೆಳೆದರು. ರಾಹುಲ್ ಹಾಗೂ ರಿಷಭ್ ಪಂತ್ (7*) ಜೋಡಿ ಮುರಿಯದ 5ನೇ ವಿಕೆಟ್‌ಗೆ 13 ರನ್ ಕಲೆಹಾಕಿದೆ. ಚಹಾ ವಿರಾಮದ ಬಳಿಕ ಪಂದ್ಯ 2 ಬಾರಿ ಆಟ ಪುನರಾರಂಭಗೊಂಡರೂ ತಲಾ 2 ಎಸೆತಗಳಿಗಷ್ಟೇ ಸೀಮಿತವಾಯಿತು.

    ಇಂಗ್ಲೆಂಡ್: 183, ಭಾರತ: 46.4 ಓವರ್‌ಗಳಲ್ಲಿ 4 ವಿಕೆಟ್‌ಗೆ 125 (ರಾಹುಲ್ 57*, ರೋಹಿತ್ ಶರ್ಮ 36, ಚೇತೇಶ್ವರ್ ಪೂಜಾರ 4, ವಿರಾಟ್ ಕೊಹ್ಲಿ 0, ಅಜಿಂಕ್ಯ ರಹಾನೆ 5, ರಿಷಭ್ ಪಂತ್ 7, ಜೇಮ್ಸ್ ಆಂಡರ್‌ಸನ್ 15ಕ್ಕೆ2, ಓಲಿ ರಾಬಿನ್‌ಸನ್ 32ಕ್ಕೆ 1)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts