More

    ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ನೇತೃತ್ವ

    ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಅತ್ಯಂತ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಹೊಣೆ ಹೊತ್ತ ಕಾರ್ಯಕಾರಿ ಮಂಡಳಿಯ ಮುಖ್ಯಸ್ಥ ಸ್ಥಾನವನ್ನು ಭಾರತ ಅಲಂಕರಿಸಲಿದೆ.

    ಮೇ 18 ಮತ್ತು 19ರಂದು ನಡೆದ 73ನೇ ವಿಶ್ವ ಆರೋಗ್ಯ ಸಭೆಯಲ್ಲಿ ಭಾರತವೂ ಸೇರಿದಂತೆ ಹತ್ತು ರಾಷ್ಟ್ರಗಳನ್ನು ಈ ಮಂಡಳಿಯ ಸದಸ್ಯ ದೇಶಗಳನ್ನಾಗಿ ಆಯ್ಕೆ ಮಾಡಲಾಗಿದೆ.

    ಇಡೀ ಜಗತ್ತು ಕರೊನಾದಿಂದ ತೊಂದರೆಗೆ ಒಳಗಾಗಿರುವಾಗ ಮತ್ತು ಕರೊನಾ ತಡೆಗಟ್ಟುವಲ್ಲಿ ಪ್ರಧಾನಿ ಮೋದಿ ಅವರು ವಹಿಸಿದ ಪಾತ್ರವನ್ನು ಇಡೀ ಜಗತ್ತು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿರುವಾಗ ಡಬ್ಲೂೃಎಚ್‌ಒದಲ್ಲಿ ಇಂತಹ ಮಹತ್ವದ ಸ್ಥಾನ ಭಾರತಕ್ಕೆ ಸಿಗುತ್ತಿದೆ.

    ಇದನ್ನೂ ಓದಿ ಕೋವಿಡ್​ ಕಾಲದಲ್ಲಿ ಗಗನಕ್ಕೇರಿದ ಪ್ರಧಾನಿ ಮೋದಿ ಕೀರ್ತಿ

    ಭಾರತವಲ್ಲದೆ, ಬೊಟ್ಸ್ವಾನಾ, ಕೊಲಂಬಿಯಾ, ಘಾನಾ, ಗಿನೀ-ಬಿಸಾವ್, ಮಡಗಾಸ್ಕರ್, ಒಮನ್, ರಿಪಬ್ಲಿಕ್ ಆಫ್ ಕೊರಿಯಾ, ರಷ್ಯಾ ಮತ್ತು ಬ್ರಿಟನ್ ಈ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಇವೆ. ಅಮೆರಿಕದ ಹೆಸರು ಈ ಪಟ್ಟಿಯಲ್ಲಿ ಇಲ್ಲದಿರುವುದು ಗಮನಾರ್ಹ. ಮುಂದಿನ ದಿನಗಳಲ್ಲಿ ಈ ರಾಷ್ಟ್ರಗಳ ಸಮೂಹವನ್ನು ಕಾರ್ಯಕಾರಿ ಮಂಡಳಿಯಲ್ಲಿ ಭಾರತವೇ ಮುನ್ನಡೆಸುವುದು ನಿಸ್ಸಂದೇಹ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

    ಕಳೆದ ಒಂದು ವರ್ಷದಿಂದ ಜಪಾನ್ ಈ ಮಂಡಳಿಯ ಮುಖ್ಯಸ್ಥ ಸ್ಥಾನದಲ್ಲಿತ್ತು. 2020-21ರಲ್ಲಿ ಡಬ್ಲ್ಯುಎಚ್‌ಒ ನಿರ್ಣಯ ತೆಗೆದುಕೊಳ್ಳುವುದರಲ್ಲಿ ಭಾರತ ಮಹತ್ವದ ಪಾತ್ರ ನಿರ್ವಹಿಸುವುದು ಈ ಮೂಲಕ ಖಚಿತವಾಗಲಿದೆ.

    ಇದನ್ನೂ ಓದಿ ಮೋದಿ ಭಾರತದ ರಕ್ಷಕ ಎಂದು ಬಿಂಬಿಸಲು ಬಿಜೆಪಿ ಸಿದ್ಧತೆ

    ಭಾರತದಲ್ಲಿ ಟಿಕ್​ಟಾಕ್​ ಆ್ಯಪ್​ ರೇಟಿಂಗ್​ ಕುಸಿತ; ಮೋದಿ ‘ಸ್ವಾವಲಂಬಿ ಭಾರತ’ ಕರೆಗೆ ಸ್ಪಂದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts