More

    ಇಂಡಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

    ಇಂಡಿ: ಇಂಡಿ ತಾಲೂಕು ಸಮಗ್ರ ನೀರಾವರಿ ಮಾಡುವಂತೆ ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಶನಿವಾರ ಕರೆ ನೀಡಿದ್ದ ಇಂಡಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

    ಮಾಜಿ ಶಾಸಕ ರವಿಕಾಂತ ಪಾಟೀಲ, ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಡಿ. ಪಾಟೀಲ ಮಾತನಾಡಿ, ಕೂಡಲೇ ಜಲಸಂಪನ್ಮೂಲ ಸಚಿವ ಕಾರಜೋಳ ಅವರು ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕು ಎಂದರು.

    ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮಗೊಂಡ, ಮರೆಪ್ಪ ಗಿರಣಿವಡ್ಡರ, ವಿಜಯಕುಮಾರ ಭೋಸಲೆ ಮತ್ತಿತರರು ಮಾತನಾಡಿ, ಸರ್ಕಾರ ರೈತ ವಿರೋಧಿಯಾಗಿದೆ. ರೈತರ ಹೋರಾಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತಿಲ್ಲ.ರೈತರಿಗೆ ಸಹಕಾರ ನೀಡದಿದ್ದರೆ ಮುಂಬರುವ ದಿನಗಳಲ್ಲಿ ರೈತರು ತಮ್ಮ ಶಕ್ತಿ ಏನೆಂಬುದನ್ನು ತೋರಿಸಿ ಕೊಡುತ್ತಾರೆ ಎಂದರು.

    ಇಂಡಿ ತಾಲೂಕಿನ ಕೃಷ್ಣಾ ಯೋಜನೆಯ ಮಹತ್ವಾಕಾಂಕ್ಷಿ ಯೋಜನೆಗಳಾದ ಗುತ್ತಿ ಬಸವಣ್ಣ, ಚಿಮ್ಮಲಗಿ, ಇಂಡಿ ಏತ ನೀರಾವರಿ, ಶ್ರೀ ರೇವಣಸಿದ್ಧೇಶ್ವರ ಏತ ನೀರಾವರಿ ಕಾಲುವೆಗಳಲ್ಲಿ ನೀರು ಹರಿಯಬೇಕು. ಆಲಮಟ್ಟಿ ಆಣೆಕಟ್ಟೆ ಎತ್ತರ 524 ಮೀ. ಆಗಬೇಕು. ಕಳೆದ 24 ದಿನಗಳಿಂದ ಹೋರಾಟ ಮಾಡುತ್ತಿದ್ದು, ಹೋರಾಟ ಸ್ಥಳಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರವರು ಬರಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

    ಶ್ರೀಶೈಲಗೌಡ ಪಾಟೀಲ, ಡಿಎಸ್‌ಎಸ್‌ನ ನಾಗೇಶ ತಳಕೇರಿ, ಸಿಐಟಿಯು ಸಂಘಟನೆಯ ಭಾರತಿ ವಾಲಿ, ಬಿಸಿಯೂಟ ಸಂಘದ ಕಾಳಮ್ಮ ಬಡಿಗೇರ, ಅಲ್ಪ ಸಂಖ್ಯಾತರ ಘಟಕದ ವಾಜಿದ ಸೌದಾಗರ ಮತ್ತಿತರರು ಮಾತನಾಡಿದರು.

    ಬೆಳಗ್ಗೆಯಿಂದಲೇ ವ್ಯಾಪಾರಸ್ಥರು, ಎಪಿಎಂಸಿ ವರ್ತಕರು ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಿ ಹೋರಾಟಕ್ಕೆ ಸಹಕರಿಸಿದರು. ಸರ್ಕಾರಿ ಬಸ್‌ಗಳನ್ನು ಹೊರತುಪಡಿಸಿ ಇತರ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಮಿನಿ ವಿಧಾನಸೌಧದಿಂದ ಬೃಹತ್ ರ‌್ಯಾಲಿ ನಡೆಸಿ ಬಸವೇಶ್ವರ ವೃತ್ತಕ್ಕೆ ಬಂದು ಸಭೆ ನಡೆಸಲಾಯಿತು.

    ಹೋರಾಟದಲ್ಲಿ ಸಿದ್ದು ಡಂಗಾ, ಮಹಿಬೂಬ ಬೇವನೂರ, ಬಸವರಾಜ ಹಂಜಗಿ, ರಾಜು ಮುಲ್ಲಾ, ಹನುಮಂತ ಹೂನ್ನಳ್ಳಿ, ಪೀರಪ್ಪ ಹೊಟಕರ, ಮಹಮ್ಮದ ಬಾಗವಾನ, ತಮ್ಮನಗೌಡ ಬಿರಾದಾರ, ಮಾಳು ಮ್ಯಾಕೇರಿ, ತಾಪಂ ಮಾಜಿ ಸದಸ್ಯ ನಾನಾಗೌಡ ಪಾಟೀಲ, ಗ್ರಾಪಂ ಸದಸ್ಯ ಬಾಲಸಿಂಗ ರಾಠೋಡ, ಬಾಬು ಮೇತ್ರಿ, ಹೂವಣ್ಣ ಪೂಜಾರಿ, ಶಿವಾನಂದ ಅಂಗಡಿ, ಅಂಗವೀಕಲರ ಸಂಘದ ಭರಮಣ್ಣ ಪೂಜಾರಿ, ಹನುಮಂತ ಹಿರೇಕುರಬರ, ಅಂಬಣ್ಣ ಅಲಿಯಾಬಾದ, ಶರಣು ಡೆಂಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts