More

    ವೈದ್ಯರ ಸೇವೆಗೆ ಗೌರವಿಸೋಣ

    ಇಂಡಿ: ಕರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರು ತಮ್ಮ ಪ್ರಾಣ ಲೆಕ್ಕಿಸದೆ ಕರ್ತವ್ಯ ನಿರ್ವಹಿಸಿದ್ದು ಶ್ಲಾಘನೀಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

    ತಾಲೂಕಿನ ಅಗರಖೇಡ ಗ್ರಾಮದಲ್ಲಿ 1.20 ಕೋಟಿ ರೂ. ವೆಚ್ಚದಲ್ಲಿ ವೈದ್ಯರ ವಸತಿ ಗೃಹಗಳ ಭೂಮಿಪೂಜೆ ಹಾಗೂ ಪ್ರಭುಲಿಂಗೇಶ್ವರ ವಿರಕ್ತಮಠದಲ್ಲಿ ಯಾತ್ರಿನಿವಾಸ ಕಟ್ಟಡದ ಅಡಿಗಲ್ಲು ಸಮಾರಂಭ ಮಂಗಳವಾರ ನೆರವೇರಿಸಿ ಅವರು ಮಾತನಾಡಿದರು.

    ವೈದ್ಯರು-ಸಿಬ್ಬಂದಿ ಹಗಲು-ರಾತ್ರಿ ಎನ್ನದೆ ಕರೊನಾ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಅವರ ಸೇವೆಗೆ ನಾವೆಲ್ಲ ಗೌರವಿಸಬೇಕಾಗಿದೆ ಎಂದರು.

    ಪ್ರಸ್ತುತ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
    ಭಾರತ ದೇಶದಲ್ಲಿ ಮಠ-ಮಾನ್ಯಗಳಿಗೆ ಅದರದೆ ಆದ ಗೌರವವಿದೆ. ಗುರುಗಳ ಮಾತನ್ನು ಬಹಳಷ್ಟು ಜನ ಪಾಲಿಸುತ್ತಾರೆ. ಗುರುಗಳು ಪಾಠ ಬೋಧನೆ ಮುಖಾಂತರ ಸ್ವಾಸ್ಥೃ ಸಮಾಜ ನಿರ್ಮಾಣ ಮಾಡುತ್ತಿದ್ದಾರೆ ಎಂದರು.

    ಅಗರಖೇಡ ಗ್ರಾಮದಲ್ಲಿ ಯಾತ್ರಿನಿವಾಸ ಕಟ್ಟಡಕ್ಕೆ ಅನುದಾನ ಬಿಡುಗಡೆಯಾಗಿದ್ದು, ಉತ್ತಮ ಕಟ್ಟಡ ನಿರ್ಮಾಣವಾಗಲು ಸಾರ್ವಜನಿಕರು ಮುಂದೆ ನಿಂತು ಕಾಮಗಾರಿ ಪರೀಕ್ಷಿಸಬೇಕೆಂದು ತಿಳಿಸಿದರು.

    ಅಗರಖೇಡ ಪ್ರಭುಲಿಂಗ ಹಿರೇಮಠದ ಅಭಿನವ ಪ್ರಭುಲಿಂಗದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ಕಾಂಗ್ರೆಸ್ ಮುಖಂಡ ಹನುಮಂತ ಖಂಡೇಕರ, ಭೀಮಣ್ಣ ಕವಲಗಿ, ಇಲಿಯಾಸ್ ಬೋರಾಮಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts