More

    ಮತ್ತೆ ದಾಖಲೆಯ ಗರಿಷ್ಠ ಮಟ್ಟ ಮುಟ್ಟಿದ ಸೂಚ್ಯಂಕ: ಹಲವು ಷೇರುಗಳಿಗೆ ಲಾಭ, ಒಂದಿಷ್ಟು ಕ್ಯಾಪ್​ಗಳಿಗೆ ಹಿನ್ನಡೆ

    ಮುಂಬೈ:  ಮಂಗಳವಾರದಂದು ಇಂಟ್ರಾ-ಡೇ ವಹಿವಾಟಿನಲ್ಲಿ ಬಿಎಸ್​ಇ ಮತ್ತು ನಿಫ್ಟಿ ಸೂಚ್ಯಂಕಗಳು ಹೊಸ ಜೀವಿತಾವಧಿಯ ಉನ್ನತ ಮಟ್ಟವನ್ನು ತಲುಪಿ ದಾಖಲೆ ಬರೆದವು. ರಿಲಯನ್ಸ್ ಇಂಡಸ್ಟ್ರೀಸ್‌ ಷೇರುಗಳ ಖರೀದಿ ಮತ್ತು ಸಕಾರಾತ್ಮಕ ಜಾಗತಿಕ ಸೂಚನೆಗಳ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕ ಏರಿಕೆ ಕಂಡಿತು.

    30-ಷೇರುಗಳ ಬಿಎಸ್‌ಇ ಸೂಚ್ಯಂಕವು 122.10 ಅಂಕ ಅಥವಾ ಶೇಕಡಾ 0.17 ಏರಿಕೆಯಾಗಿ 71,437.19 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ಮಧ್ಯದಲ್ಲಿ ಇದು 308.62 ಅಂಕ ಏರಿಕೆ ಕಂಡು 71,623.71 ರ ಸಾರ್ವಕಾಲಿಕ ಇಂಟ್ರಾ-ಡೇ ಗರಿಷ್ಠ ಮಟ್ಟವನ್ನು ತಲುಪಿತ್ತು.

    ನಿಫ್ಟಿ ಸೂಚ್ಯಂಕವು ಕೂಡ ದಿನದ ವಹಿವಾಟಿನಲ್ಲಿ 86.4 ಅಂಕ ಏರಿಕೆಯಾಗಿ 21,505.05 ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು. ಇದು ಅಂತಿಮವಾಗಿ 34.45 ಅಂಕ ಅಥವಾ 0.16 ಪ್ರತಿಶತದಷ್ಟು ಹೆಚ್ಚಳವಾಗಿ 21,453.10 ಕ್ಕೆ ನೆಲೆಗೊಂಡಿತು.

    ನೆಸ್ಲೆ, ಎನ್‌ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಟಿಸಿ, ಹಿಂದೂಸ್ತಾನ್ ಯೂನಿಲಿವರ್, ಪವರ್ ಗ್ರಿಡ್ ಮತ್ತು ಬಜಾಜ್ ಫೈನಾನ್ಸ್ ಕಂಪನಿಯ ಷೇರುಗಳು ಪ್ರಮುಖ ಲಾಭ ಗಳಿಸಿದವು. ವಿಪ್ರೋ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಸ್ಟೀಲ್, ಬಜಾಜ್ ಫಿನ್‌ಸರ್ವ್ ಮತ್ತು ಮಾರುತಿ ಕಂಪನಿಯ ಷೇರುಗಳು ನಷ್ಟ ಅನುಭವಿಸಿದವು.

    ಏಷ್ಯಾದ ಮಾರುಕಟ್ಟೆ ಪೈಕಿ, ಸಿಯೋಲ್, ಟೋಕಿಯೋ ಮತ್ತು ಶಾಂಘೈ ಸೂಚ್ಯಂಕ ಏರಿಕೆಯಾದರೆ, ಹಾಂಗ್ ಕಾಂಗ್ ಕುಸಿತ ಕಂಡಿತು.

    ಐರೋಪ್ಯ ಮಾರುಕಟ್ಟೆಗಳು ಲಾಭದಲ್ಲಿ ವಹಿವಾಟು ನಡೆಸಿದವು. ಸೋಮವಾರ ಅಮೆರಿಕದ ಮಾರುಕಟ್ಟೆಗಳು ಕೂಡ ಲಾಭ ಕಂಡವು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ನಿರಂತರ ಖರೀದಿಯ ನಂತರ ಸೋಮವಾರ 33.51 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ರೂ 2,800 ಕೋಟಿಯ ರಾಕೆಟ್ ಲಾಂಚರ್‌ ಖರೀದಿಗೆ ರಕ್ಷಣಾ ಸಚಿವಾಲಯ ಅನುಮತಿ; ಈ ಷೇರುಗಳಿಗೆ ಸಿಗಲಿದೆ ಲಾಭ…

    ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು: ಮಮತಾ ಬ್ಯಾನರ್ಜಿ ಪ್ರಸ್ತಾಪಕ್ಕೆ ಬೆಂಬಲ ದೊರೆತಿದ್ದೇಕೆ? ಖರ್ಗೆ ಹೇಳಿದ್ದೇನು?

    ಇಂಡಿಯಾ ಮೈತ್ರಿಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ: ಹೀಗಿದೆ ಮಮತಾ ಬ್ಯಾನರ್ಜಿ ಪ್ರಸ್ತಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts