More

    ಗ್ಲೇನ್​ ಮ್ಯಾಕ್ಸ್​ವೆಲ್ ಅಬ್ಬರದ ಶತಕ:​ ಇಬ್ಬನಿಯನ್ನು ದೂರಿದ ಸೂರ್ಯಕುಮಾರ್​ ಯಾದವ್​

    ಗುವಾಹಟಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿಯೂ ಸೋಲು ಕಂಡ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್‌, ಮೈದಾನದಲ್ಲಿ ಕಾಡಿದ ಭಾರಿ ಇಬ್ಬನಿಯ ಸಮಸ್ಯೆಯನ್ನು ದೂರಿದ್ದಾರೆ.

    ಇಬ್ಬನಿಯಿಂದಾಗಿ ನಮಗೆ 222 ರನ್ ಮೊತ್ತವನ್ನೂ ರಕ್ಷಿಸಲಾಗಲಿಲ್ಲ. ಮ್ಯಾಕ್ಸ್‌ವೆಲ್‌ರನ್ನು ಬೇಗನೆ ಔಟ್ ಮಾಡಲು ಬಯಸಿದ್ದೆವು. ಆದರೆ, ಇಬ್ಬನಿಯಿಂದಾಗಿ ಬೌಲರ್​ಗಳಿಗೆ ಅದು ಸಾಧ್ಯವಾಗಲಿಲ್ಲ’ ಎಂದು ಸೂರ್ಯಕುಮಾರ್ 5 ವಿಕೆಟ್ ಸೋಲಿನ ಬಳಿಕ ತಿಳಿಸಿದ್ದಾರೆ. ಪಂದ್ಯದ ಶತಕವೀರರಾದ ಗ್ರೆನ್ ಮ್ಯಾಕ್ಸ್‌ವೆಲ್ ಮತ್ತು ಋತುರಾಜ್ ಗಾಯಕ್ವಾಡ್​ ಕೂಡ ಇಬ್ಬನಿ ಸಮಸ್ಯೆ ಇತ್ತು ಎಂದಿದ್ದಾರೆ.

    ಇಬ್ಬನಿಯಿಂದಾಗಿ ಬೌಲರ್​ಗಳಿಗಾಗಿ ಯಾರ್ಕರ್​ ಎಸೆಯುವುದು ಸಾಧ್ಯವಾಗಲಿಲ್ಲ. ಕೊನೇ ಓವರ್​ವರೆಗೆ ನಿಂತರೆ ಗೆಲ್ಲುವ ವಿಶ್ವಾಸವಿತ್ತು. ಮ್ಯಾಥ್ ವೇಡ್ ಕೂಡ ಉತ್ತಮ ಬೆಂಬಲ ಒದಗಿಸಿದರು’ ಎಂದು ಮ್ಯಾಕ್ಸ್ ವೆಲ್ ಹೇಳಿದ್ದಾರೆ. ಇಬ್ಬನಿ ಸಮಸ್ಯೆಯಿಂದಾಗಿ ಪ್ರತಿ ಓವರ್‌ಗೆ 13-14 ರನ್ ಬೇಕಿದ್ದರೂ, ಚೇಸಿಂಗ್ ಸಾಧ್ಯವಿತ್ತು. ಬೌಲರ್​ಗಳ ಪಾಲಿಗೆ ಇದು ಅತ್ಯಂತ ಕಠಿಣ ಪರಿಸ್ಥಿತಿಯಾಗಿತ್ತು ಎಂದು ಋತುರಾಜ್​ ಹೇಳಿದ್ದಾರೆ.

    ಕೇನ್​ ರಿಚರ್ಡ್​ಸನ್ ಗಾಯಗೊಂಡಿದ್ದರಿಂದ ಭಾರತದ ಇನಿಂಗ್ಸ್‌ನ ಕೊನೇ ಓವರ್ ಮ್ಯಾಕ್ಸ್‌ವೆಲ್​ಗೆ ನೀಡಿದ್ದೆ. ಆಗ ಅವರು 30 ರನ್ ನೀಡಿರದಿದ್ದರೆ ಶತಕ ಸಿಡಿಸುವುದು ಸಾಧ್ಯವಾಗುತ್ತಿರಲಿಲ್ಲ’ ಎಂದು ಆಸೀಸ್ ನಾಯಕ ಮ್ಯಾಥ್ ಹೇಳಿದ್ದಾರೆ.

    ಕೀಪರ್ ಕಿಶನ್ ಎಡವಟ್ಟು
    ಆಸೀಸ್​ಗೆ ಕೊನೇ 2 ಓವರ್​ಗಳಲ್ಲಿ 43 ರನ್​ ಗಳಿಸುವ ಕಠಿಣ ಸವಾಲಿತ್ತು. ಅಕ್ಷರ್ ಪಟೇಲ್ ಎಸೆದ ಇನಿಂಗ್ಸ್‌ನ 19ನೇ ಓವರ್‌ನ ಮೊದಲ 3 ಎಸೆತಗಳಲ್ಲಿ 10 ರನ್ ಕಸಿದ ಮ್ಯಾಥ್ ವೇಡ್, 4ನೇ ಎಸೆತದಲ್ಲಿ ರನ್ ಗಳಿಸಲು ವಿಫಲವಾದರು. ಆದರೆ, ಎಸೆತ ಅಫ್‌ಸ್ಟಂಪ್‌ನಿಂದ ದೂರ ಇದ್ದ ಕಾರಣ ಅಂಪೈರ್ ವೈಡ್ ನೀಡಿದರು. ಇದೇ ವೇಳೆ ವಿಕೆಟ್ ಕೀಪರ್ ಇಶಾನ್ ಕಿಶನ್ ಸ್ಪಂಪಿಂಗ್ ಮಾಡಿ ಅಂರ್ಪೈಗೆ ಮನವಿ ಸಲ್ಲಿಸಿದರು. ಆದರೆ, ಮೂರನೇ ಅಂಪೈರ್ ಪರಿಶೀಲನೆ ವೇಳೆ ಕಿಶನ್ ಚೆಂಡನ್ನು ವಿಕೆಟ್ ಮುಂದೆ ಸಂಗ್ರಹಿಸಿದ್ದು ಕಂಡುಬಂತು. ಇದರಿಂದ ಟಿವಿ ಅಂಪೈರ್ ಅದನ್ನು ನೋಬಾಲ್ ಎಂದು ತೀರ್ಪಿತ್ತರು. ಆದರಿಂದ ಆಸೀಸ್​ಗೆ ಫ್ರೀ-ಹಿಟ್ ದೊರೆಯಿತು. ಆ ಎಸೆತವನ್ನು ವೇಡ್ ಸಿಕ್ಸರ್‌ಗಟ್ಟಿದರು. ಇದು ಭಾರತಕ್ಕೆ ಹಿನ್ನಡೆ ತಂದಿತು.ಎಂಸಿಸಿಯ 27.3.10 ನಿಯಮ ಪ್ರಕಾರ ಬೌಲರ್​ ಎಸೆದ ಚೆಂಡು ಸ್ಟ್ರೈಕರ್ ಬದಿಯ ವಿಕೆಟ್ ಹಾದುಹೋಗುವ ಮುನ್ನ ವಿಕೆಟ್ ಕೀಪರ್ ಚೆಂಡನ್ನು ತನ್ನ ಗ್ಲೌಸ್​ಗಳಿಂದ ಪಡೆಯುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ ಅದು ನೋಬಾಲ್ ಆಗುತ್ತದೆ.

    ತೆಲಂಗಾಣ ಚುನಾವಣೆ 2023: ಓವೈಸಿ ಮತ ಚಲಾಯಿಸಲಿರುವ ಸ್ಥಳದಲ್ಲಿ ಇನ್ನೂ ಮತದಾನ ಏಕೆ ಆರಂಭವಾಗಿಲ್ಲ?

    ಖಲಿಸ್ತಾನಿ ಉಗ್ರನ ಹತ್ಯೆಗೆ ಅಮೆರಿಕದಲ್ಲಿ ಸಂಚು ಆರೋಪ: ಭಾರತೀಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

    ಚೀನಾ ವೈರಸ್ ಅಲರ್ಟ್; ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts