More

    ವಂದೇ ಭಾರತ್ ರೈಲ್​ಗಳು ಸ್ಪೀಡ್​ ಹೆಚ್ಚಾಗಲಿದೆಯೇ?: ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದೇನು?

    ನವದೆಹಲಿ: ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ ವಿಶೇಷವಾಗಿದೆ. ಹೌದು… ಭಾರತೀಯ ರೈಲ್ವೆ ವಂದೇ ಭಾರತ್ ರೈಲುಗಳ ವೇಗವನ್ನು ಹೆಚ್ಚಿಸಲು ತಯಾರಿ ನಡೆಸುತ್ತಿದೆ. ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ‘ತಮಿಳುನಾಡಲ್ಲಿ ಹಿಂದಿಯವರು ಶೌಚಗೃಹ ತೊಳೆಯುತ್ತಾರೆ’: ಮಾರನ್ ಹೇಳಿಕೆಗೆ ನಿತೀಶ್ ಪ್ರತಿಕ್ರಿಯೆ ಕೇಳಿದ ಬಿಜೆಪಿ

    ವಂದೇ ಭಾರತ್ ರೈಲುಗಳ ವೇಗದ ಬಗ್ಗೆ ರೈಲ್ವೆ ಸಚಿವರು ಲೋಕಸಭೆಯಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ. ಬಿಜೆಪಿ ಸಂಸದ ಘನಶ್ಯಾಮ್ ಸಿಂಗ್ ಲೋಧಿ ಅವರು ರೈಲ್ವೆ ಹಳಿಯ ಸುರಕ್ಷತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲುಗಳ ವೇಗವನ್ನು ಗಂಟೆಗೆ 110 ಕಿ.ಮೀ.ನಿಂದ 130 ಕಿ.ಮೀ.ಗೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

    ಸಿಗ್ನಲಿಂಗ್, ಟ್ರ್ಯಾಕ್ ಮೂಲಸೌಕರ್ಯ ಮತ್ತು ಫೆನ್ಸಿಂಗ್‌ನಲ್ಲಿನ ಸಮಸ್ಯೆಗಳಿಂದಾಗಿ ರೈಲುಗಳನ್ನು ಪೂರ್ಣ ವೇಗದಲ್ಲಿ ಟ್ರ್ಯಾಕ್‌ನಲ್ಲಿ ಓಡಿಸಲು ಸಾಧ್ಯವಾಗುತ್ತಿಲ್ಲ ಎಂದು ಸಂಸದ ಘನಶ್ಯಾಮ್ ಸಿಂಗ್ ಲೋಧಿ ಅವರು ವಂದೇ ಭಾರತ್ ರೈಲುಗಳಿಗೆ ರೈಲ್ವೆ ಹಳಿಯ ಭದ್ರತೆಯ ಬಗ್ಗೆ ಪ್ರಶ್ನೆ ಎತ್ತಿದರು.

    ಇದಕ್ಕೆ ಉತ್ತರಿಸಿದ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ವೆಯ ಭದ್ರತೆ, ಸುರಕ್ಷತೆಗೆ ಆದ್ಯತೆ ನೀಡುತ್ತಿದೆ. ಹಳಿಗಳ ಪರಿಶೀಲನೆ, ನಿರ್ವಹಣೆ ಮತ್ತು ದುರಸ್ತಿಗೆ ಮಾರ್ಗಸೂಚಿ ಸಿದ್ಧವಾಗಿದೆ ಎಂದು ತಿಳಿಸಿದರು. ಗಂಟೆಗೆ 110 ಕಿ.ಮೀ.ನಿಂದ 130 ಕಿ.ಮೀ ವೇಗದಲ್ಲಿ ವಂದೇ ಭಾರತ್​ ರೈಲುಗಳು ಸಂಚರಿಸುತ್ತಿವೆ. ಸೂಕ್ಷ್ಮ ಸ್ಥಳಗಳಲ್ಲಿ ಸುರಕ್ಷತಾ ಬೇಲಿ ಅಳವಡಿಸುವುದು ಅಗತ್ಯ ಎಂದರು.

    ವಂದೇ ಭಾರತ್ ರೈಲುಗಳು ವೇಗದ ಸಂಚಾರಕ್ಕೆ ಹೆಸರುವಾಸಿಯಾಗಿವೆ. ಈ ರೈಲುಗಳು ಗಂಟೆಗೆ 160 ಕಿಮೀ ವೇಗದಲ್ಲಿ ಟ್ರ್ಯಾಕ್‌ನಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಟ್ರ್ಯಾಕ್​ ಸೇರಿ ಹಲವು ಸಮಸ್ಯೆಗಳಿಂದಾಗಿ ಪ್ರಸ್ತುತ ಗಂಟೆಗೆ 110 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿವೆ.

    ದೆಹಲಿಯಲ್ಲಿ ತಾಪಮಾನ ಕುಸಿತ: ಕನಿಷ್ಠ 7 ಡಿಗ್ರಿ ಸೆಲ್ಸಿಯಸ್‌ ದಾಖಲು- ವಾಯುಮಾಲಿನ್ಯ ಮತ್ತೆ ಗಂಭೀರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts