More

    ‘ತಮಿಳುನಾಡಲ್ಲಿ ಹಿಂದಿಯವರು ಶೌಚಗೃಹ ತೊಳೆಯುತ್ತಾರೆ’: ಮಾರನ್ ಹೇಳಿಕೆಗೆ ನಿತೀಶ್ ಪ್ರತಿಕ್ರಿಯೆ ಕೇಳಿದ ಬಿಜೆಪಿ

    ನವದೆಹಲಿ: ‘ತಮಿಳುನಾಡಿನಲ್ಲಿ ಹಿಂದಿ ಭಾಷಿಕರು ಶೌಚಾಲಯ ತೊಳೆಯುತ್ತಾರೆ’ ಎಂಬ ಡಿಎಂಕೆ ನಾಯಕ ದಯಾನಿಧಿ ಮಾರನ್ ಹೇಳಿಕೆಗೆ ನಿತೀಶ್ ಅವರ ಪ್ರತಿಕ್ರಿಯೆ ಏನು ಎಂದು ಬಿಜೆಪಿ ಕೇಳಿದೆ.

    ಇದನ್ನೂ ಓದಿ: ದೆಹಲಿಯಲ್ಲಿ ತಾಪಮಾನ ಕುಸಿತ: ಕನಿಷ್ಠ 7 ಡಿಗ್ರಿ ಸೆಲ್ಸಿಯಸ್‌ ದಾಖಲು- ವಾಯುಮಾಲಿನ್ಯ ಮತ್ತೆ ಗಂಭೀರ!
    ಡಿಎಂಕೆ ನಾಯಕ ದಯಾನಿಧಿ ಮಾರನ್ ಅವರು ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳ ಕಾರ್ಮಿಕರ ಬಗ್ಗೆ ಮಾಡಿದ ಹೇಳಿಕೆ ಈಗ ವಿವಾದ ಹುಟ್ಟುಹಾಕಿದೆ. ಯುಪಿ ಮತ್ತು ಬಿಹಾರದಿಂದ ತಮಿಳುನಾಡಿಗೆ ಬರುವ ಹಿಂದಿ ಭಾಷಿಕರು ನಿರ್ಮಾಣ ಕೆಲಸ, ಶೌಚಾಲಯ ತೊಳೆಯುವುದು ಮುಂತಾದ ಕಳಪೆ ಗುಣಮಟ್ಟದ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ದಯಾನಿಧಿ ಮಾರನ್ ಹೇಳಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

    ದಯಾನಿಧಿ ಮಾರನ್‌ ಹೇಳಿಕೆಗೆ ಬಿಜೆಪಿ ಹರಿಹಾಯ್ದಿದೆ. ಈ ವಿಡಿಯೋವನ್ನು ಶೇರ್ ಮಾಡಿರುವ ಬಿಜೆಪಿ ನಾಯಕರು ಮಾರನ್ ಹೇಳಿಕೆಯ ಬಗ್ಗೆ ನಿತೀಶ್ ಕುಮಾರ್ ಅವರ ಅಭಿಪ್ರಾಯವನ್ನೂ ಕೇಳಿದ್ದಾರೆ. ಡಿಎಂಕೆಯು ಬಿಜೆಪಿ ವಿರುದ್ಧದ ಪ್ರತಿಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ಕೂಟದ ಭಾಗವಾಗಿದೆ. ಬಿಹಾರ ಮತ್ತು ಉತ್ತರ ಪ್ರದೇಶದ ಪ್ರಮುಖ ಪಕ್ಷಗಳಾದ ಜೆಡಿಯು ಮತ್ತು ಸಮಾಜವಾದಿ ಪಕ್ಷಗಳು ಸಹ ‘ಇಂಡಿಯಾ’ ಮೈತ್ರಿಯ ಭಾಗವಾಗಿವೆ.

    ನಿತೀಶ್ ಕುಮಾರ್ ಮತ್ತು ಲಾಲು ಯಾದವ್ ಹಿಂದಿ ಭಾಷಿಕರ ಬಗ್ಗೆ ತಮ್ಮ ಮಿತ್ರಪಕ್ಷಗಳ ಅಭಿಪ್ರಾಯಗಳನ್ನು ಒಪ್ಪುತ್ತಾರೆಯೇ ಎಂದು ಬಿಹಾರದ ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಪ್ರಶ್ನಿಸಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಟಿಪ್ಪಣಿಯಲ್ಲಿ, ಡಿಎಂಕೆ ಮತ್ತು ಇಂಡಿಯಾ ಮೈತ್ರಿಕೂಟ ಹಿಂದಿ ಮಾತನಾಡುವ ಜನರ ಮೇಲೆ ಏಕೆ ಇಷ್ಟೊಂದು ದ್ವೇಷ ಹೊಂದಿವೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಗಿರಿರಾಜ್ ಸಿಂಗ್ ಕೇಳಿದ್ದಾರೆ.

    ದಯಾನಿಧಿ ಮಾರನ್ ಅವರ ಕಾಮೆಂಟ್ ಇಂಗ್ಲಿಷ್ ಕಲಿತ ಮತ್ತು ಹಿಂದಿ ಮಾತ್ರ ತಿಳಿದಿರುವವರ ಬಗ್ಗೆ ಎಂದು ವರದಿಗಳು ಹೇಳುತ್ತವೆ. ದಯಾನಿಧಿ ಮಾರನ್ ಅವರ ಟೀಕೆ ಏನೆಂದರೆ, ಇಂಗ್ಲಿಷ್ ಕಲಿತವರಿಗೆ ಐಟಿ ಸೇರಿದಂತೆ ಉತ್ತಮ ಉದ್ಯೋಗಗಳು ಸಿಕ್ಕಿದರೆ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಹಿಂದಿ ಮಾತ್ರ ತಿಳಿದಿರುವ ಜನರಿಗೆ ರಸ್ತೆಗಳನ್ನು ಸ್ವಚ್ಛಗೊಳಿಸುವುದು ಮತ್ತು ಶೌಚಾಲಯಗಳನ್ನು ತೊಳೆಯುವುದು ಮುಂತಾದ ಕಡಿಮೆ ಗುಣಮಟ್ಟದ ಕೆಲಸಗಳು ಸಿಗುತ್ತವೆ. ದಯಾನಾಧಿ ಮಾರನ್ ಸಹ “ಹಿಂದಿ ಮಾತ್ರ ಕಲಿತರೆ ಹೀಗಾಗುತ್ತದೆ” ಎಂದಿದ್ದಾರೆ.

    ದೆಹಲಿಯಲ್ಲಿ ತಾಪಮಾನ ಕುಸಿತ: ಕನಿಷ್ಠ 7 ಡಿಗ್ರಿ ಸೆಲ್ಸಿಯಸ್‌ ದಾಖಲು- ವಾಯುಮಾಲಿನ್ಯ ಮತ್ತೆ ಗಂಭೀರ!

    ಜನಪ್ರಿಯ ತಮಿಳು ಹಾಸ್ಯನಟ ಬೋಂಡಾ ಮಣಿ ಮೃತ್ಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts