More

    ದೇಶದಲ್ಲಿ ಸ್ವಪ್ರಜ್ಞೆ ಹೆಚ್ಚಳ

    ಆನವಟ್ಟಿ: ದೇಶದಲ್ಲಿ ಜನರು ಸ್ವಚ್ಛತೆ ಹಾಗೂ ಸ್ವ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಚ್ಛತಾ ಆಂದೋಲನವನ್ನು ಪ್ರಾರಂಭಿಸಿದರು. ಇಂದು ದೇಶಾದ್ಯಂತ ಸ್ವ ಇಚ್ಛೆಯಿಂದ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಮುಂದಾಗುತ್ತಿರುವುದು ಈ ದೇಶದ ಹೆಮ್ಮೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಽಕಾರಿ ಸಂತೋಷ್ ಕುಮಾರ್ ತಿಳಿಸಿದರು. ಆನವಟ್ಟಿ ಪಪಂ ವ್ಯಾಪ್ತಿಯ ಕೋಟಿಪುರದ ಐತಿಹಾಸಿಕ ಶ್ರೀ ಕೈಟಬೇಶ್ವರ ದೇವಸ್ಥಾನ ಆವರಣದಲ್ಲಿ ಗಾಂಽ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಜೀÃರೋ ವೇಸ್ಟ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು. ಸ್ವಚ್ಛತಾ ಹಿ ಸೇವಾ ಆಂದೋಲನದಲ್ಲಿ ಆನವಟ್ಟಿ ಪಪಂ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೆಜಿನ ಎನ್‌ಎಸ್‌ಎಸ್ ಘಟಕ, ಭಾರತ ಸೇವಾದಳ ಮತ್ತು ರೋವರ್ಸ್ ರೇಂಜರ್ಸ್ ಘಟಕಗಳು ಸಹಭಾಗಿತ್ವ ವಹಿಸಿದ್ದು ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುತ್ತ ಪಟ್ಟಣದ ಹಲವು ಬೀದಿಗಳಲ್ಲಿ ಶ್ರಮದಾನ ಮಾಡಿದರು ಕಾಲೇಜಿನ ಎನ್‌ಎಸ್‌ಎಸ್ ಅಽಕಾರಿ ಮುನೀರ್ ಖಾನ್, ಉಪನ್ಯಾಸಕರಾದ ಎಚ್.ಟಿ.ಕರಿಬಸಪ್ಪ, ಎಚ್.ಎನ್.ರವೀಂದ್ರ, ಪಪಂ ಪ್ರಭು, ಮನೋಜ್, ಜಾಕೀರ್, ಮುಖಂಡರಾದ ಜರ್ಮಲೆ ಚಂದ್ರಶೇಖರ್, ನಾಗರಾಜ ಶುಂಠಿ, ಮಧು ಗೌಡ, ಸಂಜೀವ್ ತರಕಾರಿ, ಸಿದ್ಧಲಿಂಗಪ್ಪ ಕಿರಣ್ ಕುಬಟೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts