More

    ಗೋಟಡಕೆಗೆ ಹೆಚ್ಚಿದ ವಾನರ ಉಪಟಳ

    ರಮೇಶ ಹಾರ್ಸಿಮನೆ ಸಿದ್ದಾಪುರ

    ಕೂಲಿಕಾರರ ಕೊರತೆಯಿಂದಾಗಿ ತಾಲೂಕಿನ ರೈತರ ಆರ್ಥಿಕ ಬೆಳೆ ಅಡಕೆ ಕೊಯ್ಲು ನಿಧಾನವಾಗಿ ಸಾಗುತ್ತಿದೆ. ಇದೇ ಸಂದರ್ಭಕ್ಕಾಗಿ ಹೊಂಚುಹಾಕುತ್ತಿರುವ ಮಂಗಗಳು ತೋಟಕ್ಕೆ ದಾಳಿ ನಡೆಸಿ ಗೋಟಡಕೆ ಚೀಪಿ ಬೀಸಾಡುತ್ತಿವೆ. ಅಲ್ಲದೆ, ಮುಂದಿನ ಫಸಲಾಗುವ ಅಡಕೆ ಶಿಂಗಾರ ಹಿಸಿದು ಹಾಕಿ ಬೆಳೆ ನಾಶಪಡಿಸುತ್ತಿವೆ. ಇದರಿಂದಾಗಿ ಅಡಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

    ಕೂಲಿಕಾರರು ಸಿಗದೇ ಅಡಕೆ ಕೊಯ್ಲು ಹಾಗೂ ಅಡಕೆ ಹೆಕ್ಕಲಾಗದೇ ಚಡಪಡಿಸುತ್ತಿದ್ದ ಬೆಳೆಗಾರರಿಗೆ ವಾನರಗಳು ತಿಂದು ಬೀಸಾಡಿದ ಗೋಟಡಕೆ ಹೆಕ್ಕುವುದು ಕಷ್ಟವಾಗಿದೆ. ತೋಟದ ಮಾಲೀಕ ತೋಟಕ್ಕೆ ಬರಬಹುದು ಎನ್ನುವ ಹೆದರಿಕೆಯಲ್ಲಿ ಗಡಬಿಡಿಯಲ್ಲಿ ಗೋಟಡಕೆ ಚೀಪಿ ಬೀಸಾಡುವಾಗ ಅಡ್ಡ ಬರುವ ಹಸಿ ಅಡಕೆ ಹಾಗೂ ಮುಂದಿನ ಫಸಲಾಗುವ ಶಿಂಗಾರವನ್ನು ಕೋತಿಗಳು ಅರ್ಧಂಬರ್ಧ ತಿಂದು ಕಿತ್ತು ಬೀಸಾಡುತ್ತಿವೆ. ಇದನ್ನು ನೋಡಿ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಎಂದು ಮಮ್ಮಲ ಮರುಗುವಂತಾಗಿದೆ.

    ವಾನರಗಳನ್ನು ತೋಟದಿಂದ ಓಡಿಸುವುದರಲ್ಲಿಯೇ ಬೆಳೆಗಾರರು ಹೈರಾಣಾಗುತ್ತಿದ್ದು, ಯಾವ ಸಮಯದಲ್ಲಿ ತೋಟಕ್ಕೆ ದಾಳಿಯಿಡುತ್ತವೆ ಎನ್ನುವುದು ತಿಳಿಯುತ್ತಿಲ್ಲ ಎಂದು ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.

    ಈಗಾಗಲೇ ಎಲ್ಲೆಡೆಗಳಲ್ಲಿ ಭತ್ತದ ಕಟಾವು ಆರಂಭವಾಗಿದ್ದರಿಂದ ಅಡಕೆ ಹೆಕ್ಕಲು, ಕೊನೆ ಕೊಯ್ಲಿಗೆ ಕೂಲಿಕಾರರು ಸಿಗುತ್ತಿಲ್ಲ. ಒಮ್ಮೆ ಅಡಕೆ ಕೊಯ್ಲು ಮಾಡಿದರೆ ಅದರ ಸಂಸ್ಕರಣೆ ಮಾಡುವುದಕ್ಕೂ ಕೂಲಿಕಾರರ ಸಮಸ್ಯೆ ಭಾದಿಸುತ್ತದೆ. ಇದರಿಂದ ತೋಟದಲ್ಲಿ ಬಿದ್ದ ಅಡಕೆ ಕೊಳೆಯುವಂತಾಗಿದೆ ಎನ್ನುವುದು ಬೆಳೆಗಾರರ ಅಂಬೋಣ.

    ಅಡಕೆ ತೋಟಕ್ಕೆ ನುಗ್ಗಿ ಹಾವಳಿ ನಡೆಸುವ ವಾನರಗಳು ಮೊದಲು ಅಡಕೆ ಮಿಳ್ಳೆ ತಿಂದು ನಾಶಪಡಿಸಿದ್ದವು. ಈಗ ಗೋಟಡಕೆ ತಿನ್ನುತ್ತಿವೆ ಅಲ್ಲದೆ, ಮುಂದಿನ ಫಸಲಾದ ಶಿಂಗಾರ ಕಿತ್ತು ಹಿಸಿದು ಬೀಸಾಡಿ ನಾಶಪಡಿಸುತ್ತಿವೆ. ಇದಕ್ಕೆ ಸೂಕ್ತ ಪರಿಹಾರ ನೀಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಹಾಗೂ ಕೋತಿಗಳ ಉಪಟಳವನ್ನು ಆದಷ್ಟು ಶೀಘ್ರ ನಿಯಂತ್ರಿಸಬೇಕು.

    | ಮಂಜುನಾಥ ನಾಯ್ಕ ಅಡಕೆ ಬೆಳೆಗಾರ, ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts